ಇಷ್ಟು ವರ್ಷದಿಂದ RCB ಕಪ್ ಗೆಲ್ಲದಿರಲು, ವಿರಾಟ್ ಕೊಹ್ಲಿಯೇ ಮುಖ್ಯ ಕಾರಣ: ರಶೀದ್ ಲತೀಫ್

ಏಷ್ಯಾಕಪ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇಂಗ್ಲೆಂಡ್ ಪ್ರವಾಸದ ಬಳಿಕ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಸರಣಿಯಿಂದ ವಿಶ್ರಾಂತಿ ಪಡೆದ ಕೊಹ್ಲಿ ಫಾರ್ಮ್ ಮರಳುವುದನ್ನ ಬಿಟ್ಟು, ವಿಶ್ರಾಂತಿ ಪಡೆದ್ರೆ ಹೇಗೆ ಎಂದು ಹಿರಿಯ ಕ್ರಿಕೆಟಿಗರು ಟೀಕೆ ಮಾಡಿದ್ದರು.
ಆದ್ರೆ ಏಷ್ಯಾಕಪ್‌ನ ಆರಂಭಿಕ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೊಹ್ಲಿ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಪಾಕಿಸ್ತಾನ ವಿರುದ್ಧ 35 ರನ್ ಹಾಗೂ ಹಾಂಕಾಂಗ್ ವಿರುದ್ಧ ಅಜೇಯ ಅರ್ಧಶತಕ ದಾಖಲಿಸಿ ಕೊಹ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಆದ್ರೆ ಕೊಹ್ಲಿ ಕುರಿತಾಗಿ ಟೀಕೆ ಮಾಡಿರುವ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದಿಗೂ ಉತ್ತಮ ಟಿ20 ಪ್ಲೇಯರ್ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.

ಕೊಹ್ಲಿ ಎಂದಿಗೂ ಸೂರ್ಯಕುಮಾರ್ , ರೋಹಿತ್ ರೀತಿಯಲ್ಲಿ ಆಡುವುದಿಲ್ಲ!
ಪಾಕ್ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ '' ವಿರಾಟ್ ಕೊಹ್ಲಿ ಎಂದಿಗೂ ಸೂರ್ಯಕುಮಾರ್ ಯಾದವ್ ಅಥವಾ ರೋಹಿತ್ ಶರ್ಮಾ ರೀತಿಯಲ್ಲಿ ಟಿ20 ಪ್ಲೇಯರ್ ಆಗಿ ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ ಆರ್‌ಸಿಬಿ ಐಪಿಎಲ್‌ನಲ್ಲಿ ಅಷ್ಟು ವರ್ಷಗಳಿಂದ ಕಪ್ ಗೆಲ್ಲದೇ ಇರಲು ವಿರಾಟ್ ಕೊಹ್ಲಿ ಮುಖ್ಯ ಕಾರಣ'' ಎಂದು ಆಶ್ಚರ್ಯಕರ ರೀತಿಯ ಹೇಳಿಕೆ ನೀಡಿದ್ದಾರೆ.
ವಿರಾಟ್ ಅದ್ಭುತ ಏಕದಿನ ಪ್ಲೇಯರ್ : ಲತೀಫ್
ಇಷ್ಟೆಲ್ಲಾ ಟೀಕೆಗಳ ಜೊತೆಗೆ ವಿರಾಟ್ ಕೊಹ್ಲಿ ಕುರಿತು ಹೊಗಳಿರುವ ಲತೀಫ್ ''ವಿರಾಟ್ ಕೊಹ್ಲಿ ಅದ್ಭುತ ಏಕದಿನ ಅಂತರಾಷ್ಟ್ರೀಯ ಪ್ಲೇಯರ್'' ಆದ್ರೆ ಆತ ಎಂದಿಗೂ ರೋಹಿತ್ ಶರ್ಮಾ ಅಥವಾ ಸೂರ್ಯಕುಮಾರ್ ಯಾದವ್'' ಆಗಲು ಸಾಧ್ಯವಿಲ್ಲ ಎಂದು ಯೂಟ್ಯೂಬ್ ಶೋ 'ಗೇಮ್ ಆನ್ ಹೈ'ನಲ್ಲಿ ತಿಳಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 31 ಅರ್ಧಶತಕ ದಾಖಲಿಸಿರುವ ವಿರಾಟ್ ಕೊಹ್ಲಿ ಗರಿಷ್ಠ ಅಜೇಯ 94ರನ್ ಕಲೆಹಾಕಿದ್ದಾರೆ. ಇವರ ಸ್ಟ್ರೈಕ್‌ರೇಟ್ 137.12ರಷ್ಟಿದೆ.
Ind vs Pak: ಪಂದ್ಯ ಪೂರ್ವ ಪತ್ರಿಕಾಗೋಷ್ಟಿಯಲ್ಲಿ 4 ಅಕ್ಷರದ ಪದ ಬಳಕೆಗೆ ರಾಹುಲ್ ದ್ರಾವಿಡ್ ಹಿಂದೇಟು

ವಿರಾಟ್ ಅದ್ಭುತ ಏಕದಿನ ಪ್ಲೇಯರ್ : ಲತೀಫ್
ಇಷ್ಟೆಲ್ಲಾ ಟೀಕೆಗಳ ಜೊತೆಗೆ ವಿರಾಟ್ ಕೊಹ್ಲಿ ಕುರಿತು ಹೊಗಳಿರುವ ಲತೀಫ್ ''ವಿರಾಟ್ ಕೊಹ್ಲಿ ಅದ್ಭುತ ಏಕದಿನ ಅಂತರಾಷ್ಟ್ರೀಯ ಪ್ಲೇಯರ್'' ಆದ್ರೆ ಆತ ಎಂದಿಗೂ ರೋಹಿತ್ ಶರ್ಮಾ ಅಥವಾ ಸೂರ್ಯಕುಮಾರ್ ಯಾದವ್'' ಆಗಲು ಸಾಧ್ಯವಿಲ್ಲ ಎಂದು ಯೂಟ್ಯೂಬ್ ಶೋ 'ಗೇಮ್ ಆನ್ ಹೈ'ನಲ್ಲಿ ತಿಳಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 31 ಅರ್ಧಶತಕ ದಾಖಲಿಸಿರುವ ವಿರಾಟ್ ಕೊಹ್ಲಿ ಗರಿಷ್ಠ ಅಜೇಯ 94ರನ್ ಕಲೆಹಾಕಿದ್ದಾರೆ. ಇವರ ಸ್ಟ್ರೈಕ್‌ರೇಟ್ 137.12ರಷ್ಟಿದೆ.
Ind vs Pak: ಪಂದ್ಯ ಪೂರ್ವ ಪತ್ರಿಕಾಗೋಷ್ಟಿಯಲ್ಲಿ 4 ಅಕ್ಷರದ ಪದ ಬಳಕೆಗೆ ರಾಹುಲ್ ದ್ರಾವಿಡ್ ಹಿಂದೇಟು

ಎಂ.ಎಸ್ ಧೋನಿಯನ್ನ ಉದಾಹರಣೆ ಆಗಿ ನೀಡುವ ಮೂಲಕ ಕೊಹ್ಲಿ ವಿರುದ್ಧ ಟೀಕೆ
'' ಎಂಎಸ್ ಧೋನಿಯನ್ನ ಉದಾಹರಣೆಯನ್ನಾಗಿ ತೆಗೆದುಕೊಂಡ್ರೆ, ಮಾಹಿ ಕೆಲವು ಡಾಟ್ ಬಾಲ್ ಆಡಿದ್ರೂ ಕೂಡ ಸಿಕ್ಸರ್‌ಗಳನ್ನ ಸಿಡಿಸುವ ಮೂಲಕ ಸ್ಟ್ರೈಕ್‌ರೇಟ್ ಉತ್ತಮಗೊಳಿಸಿ ತಂಡಕ್ಕೆ ನೆರವಾಗುತ್ತಿದ್ರು . ಆದ್ರೆ ಕೊಹ್ಲಿಗೆ ಇದು ಸಾಧ್ಯವಿಲ್ಲ. ಹಾಂಕಾಂಗ್ ವಿರುದ್ಧ ಕೊಹ್ಲಿ ನಿಧಾನವಾಗಿ ಆಡಿದ್ರಾ, ವೇಗವಾಗಿ ಆಡಿದ್ರಾ ಎಂದು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಅದು ಆತನ ಸ್ವಾಭಾವಿಕ ಆಟವಾಗಿದೆ. ಆತ 30-35ರನ್ ದಾಖಲಿಸಿದ ಬಳಿಕ ದೊಡ್ಡ ಹೊಡೆತಗಳಿಗೆ ಮುಂದಾಗುತ್ತಾನೆ. ಆತನನ್ನು ಐಪಿಎಲ್‌ನಲ್ಲಿ ಹಾಗೂ ಭಾರತ ಕ್ರಿಕೆಟ್ ತಂಡದಲ್ಲಿ ಗಮನಿಸಿದ್ದೇನೆ. ರೋಹಿತ್ ಶರ್ಮಾ ಪವರ್‌ಪ್ಲೇ ಓವರ್‌ಗಳಲ್ಲಿ ಅಡ್ವಾಂಟೇಜ್ ತೆಗೆದುಕೊಳ್ಳಲು ಹೋಗುವುದಲ್ಲದೆ ದೊಡ್ಡ ಹೊಡೆತಕ್ಕೆ ಕೈ ಹಾಕುತ್ತಾರೆ ಮತ್ತು ಪಂದ್ಯವನ್ನ ಕೊನೆಯವರೆಗೆ ತೆಗೆದುಕೊಂಡು ಹೋಗಲು ಬಯಸುತ್ತಾರೆ'' ಎಂದು ಲತೀಫ್ ಹೇಳಿದ್ದಾರೆ.
IND vs PAK: ಸೂಪರ್ 4 ಪಂದ್ಯಕ್ಕೂ ಮುನ್ನ ಪಾಕ್ ಸಭೆ; ಪಾಂಡ್ಯ ಕಟ್ಟಿಹಾಕಲು ಬಾಬರ್ 3 ಯೋಜನೆ!

ಟಿ20 ಕ್ರಿಕೆಟ್‌ನಲ್ಲಿ ರೋಹಿತ್‌ಗಿಂತ ಮುಂದಿರುವ ವಿರಾಟ್
ವಿರಾಟ್ ಕೊಹ್ಲಿ 31 ಅರ್ಧಶತಕ ದಾಖಲಿಸುವ ಮೂಲಕ ರೋಹಿತ್ ಶರ್ಮಾಗಿಂತ ಮತ್ತಷ್ಟು ಮುಂದೆ ಸಾಗಿದ್ದಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ನಾಲ್ಕು ಶತಕ ಹಾಗೂ 27 ಅರ್ಧಶತಕಗಳನ್ನು ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಶತಕವನ್ನು ಹೊಂದಿಲ್ಲದಿದ್ದರೂ, ಅವರು ಇನ್ನೂ 31 ಅರ್ಧಶತಕಗಳೊಂದಿಗೆ ದಾಖಲೆಯನ್ನು ಹೊಂದಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ ಅಂತಾರಾಷ್ಟ್ರೀಯ ಟಿ20ಯಲ್ಲಿ 1 ಶತಕ ಮತ್ತು 26 ಅರ್ಧಶತಕಗಳನ್ನು ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಶತಕ ಮತ್ತು 20 ಅರ್ಧಶತಕಗಳನ್ನು ಗಳಿಸಿದ್ದಾರೆ. ಡೇವಿಡ್ ವಾರ್ನರ್ 1 ಶತಕ ಮತ್ತು 22 ಅರ್ಧಶತಕಗಳನ್ನು ಹೊಂದಿದ್ದಾರೆ. ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1 ಶತಕ ಮತ್ತು 20 ಅರ್ಧಶತಕಗಳನ್ನು ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications