For Quick Alerts
ALLOW NOTIFICATIONS  
For Daily Alerts
 

ಟಿ20 ದಾಖಲೆ ರೇಸಿನಲ್ಲಿ ವಿರಾಟ್ ಕೊಹ್ಲಿ, ರೈನಾ

By Mahesh

ಬೆಂಗಳೂರು, ಸೆ. 15: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಅವರು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲ್ಲಿ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.

ಅಕ್ಟೋಬರ್ 2 ರಂದು ಆರಂಭಗೊಳ್ಳಲಿರುವ ಮಹಾತ್ಮಾ ಗಾಂಧಿ-ನೆಲ್ಸನ್ ಮಂಡೇಲಾ ಟೂರ್ನಿಯ 72 ದಿನಗಳ ಸುದೀರ್ಘ ಪ್ರವಾಸದ ವೇಳೆ ದಕ್ಷಿಣ ಆಫ್ರಿಕಾ ತಂಡ 3 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.[ದಕ್ಷಿಣ ಆಫ್ರಿಕಾ ಸರಣಿಗೆ ಸಂಭಾವ್ಯ ಆಟಗಾರರ ಪಟ್ಟಿ]

ಈ ಸಂದರ್ಭದಲ್ಲಿ ಭಾರತದ ಅಗ್ರಗಣ್ಯ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಟಿ20ಯಲ್ಲಿ 1,000 ರನ್ ಪೂರೈಸುವ ಮೊದಲ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ. ಸದ್ಯ ಐಸಿಸಿ ಟಿ20ಐ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ ನಂ.1 ಸ್ಥಾನದಲ್ಲಿದ್ದಾರೆ. ಕೊಹ್ಲಿ ಸಾವಿರ ರನ್ ಗಡಿ ದಾಟಲು 28ರನ್ ಗಳು ಬೇಕಿದೆ.

Kohli and Raina in race to set India's T20I record

ಸುರೇಶ್ ರೈನಾ ಕೂಡಾ ಈ ಮೈಲಿಗಲ್ಲು ದಾಟುವ ಉತ್ಸಾಹದಲ್ಲಿದ್ದು, ಅವರಿಗೆ 53ರನ್ ಗಳು ಸಾಕು. ಇಬ್ಬರಲ್ಲಿ ಯಾರು ಮೊದಲಿಗೆ ಸಾವಿರ ರನ್ ಗಡಿ ದಾಟುತ್ತಾರೋ ಕಾದು ನೋಡಬೇಕಿದೆ.[ದಕ್ಷಿಣ ಆಫ್ರಿಕಾದ 'ಮೂರು' ತಂಡ ಪ್ರಕಟ]

ಚುಟುಕು ಕ್ರಿಕೆಟ್ ಮಾದರಿಯಲ್ಲಿ ಕೊಹ್ಲಿ ಭಾರತದ ಅತಿ ಹೆಚ್ಚು ರನ್ ಸ್ಕೋರರ್ ಆಗಿದ್ದಾರೆ. 28 ಪಂದ್ಯಗಳಲ್ಲಿ 972ರನ್ ಗಳಿಸಿರುವ ಕೊಹ್ಲಿ ಬಿಟ್ಟರೆ ಎರಡನೇ ಸ್ಥಾನದಲ್ಲಿ ಯುವರಾಜ್ ಸಿಂಗ್ ಅವರು 968ರನ್ (40 ಪಂದ್ಯಗಳು) ಗಳಿಸಿದ್ದರೆ, ರೈನಾ ಅವರು 947ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ವಿಶ್ವಮಟ್ಟದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನ್ಯೂಜಿಲೆಂಡ್ ನ ನಾಯಕ ಬ್ರೆಂಡನ್ ಮೆಕಲಮ್ ಅವರು 71 ಪಂದ್ಯಗಳಲ್ಲಿ 2,140 ರನ್ ಗಳಿಸಿ ಎಲ್ಲರಿಗಿಂತ ಮುಂದಿದ್ದಾರೆ.

ಟಿ 20ಯಲ್ಲಿ ಭಾರತದ ಟಾಪ್ ರನ್ ಸ್ಕೋರರ್ಸ್:
1. ವಿರಾಟ್ ಕೊಹ್ಲಿ 972 ರನ್ ಗಳು ( 28 ಪಂದ್ಯಗಳು)
2. ಯುವರಾಜ್ ಸಿಂಗ್ 968 (40)
3. ಸುರೇಶ್ ರೈನಾ 947 (44)
4. ಗೌತಮ್ ಗಂಭೀರ್ 932 (37)
5. ಎಂಎಸ್ ಧೋನಿ 849 (50)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+