For Quick Alerts
ALLOW NOTIFICATIONS  
For Daily Alerts
 

ಇಶಾನ್ ಶೈನ್: ಕೋಲ್ಕತ್ತಾ ವಿರುದ್ಧ ಮುಂಬೈ 102 ರನ್ ಭರ್ಜರಿ ಗೆಲುವು

Kolkata Knight Riders vs Mumbai Indians: MI clinch massive win over KKR

ಕೋಲ್ಕತ್ತಾ, ಮೇ 10: ಇಶಾನ್ ಕಿಶಾನ್ ಸ್ಫೋಟಕ ಬ್ಯಾಟಿಂಗ್ (62/21) ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 102 ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಐಪಿಎಲ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಮುಂಬೈ ಇಂಡಿಯನ್ಸ್ ನೀಡಿದ್ದ 211 ರನ್ ಗುರಿ ತಲುಪಲಾಗದೆ ಕೋಲ್ಕತ್ತಾ ಬೇಗನೆ ಶರಣಾಯಿತು. ಅತೀ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಕೋಲ್ಕತ್ತಾ 18.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 108 ರನ್ ಪೇರಿಸಲಷ್ಟೇ ಶಕ್ತವಾಯಿತು. ಕೋಲ್ಕತ್ತಾ ಪರ ಕ್ರಿಸ್ ಲಿನ್, ನಿತೀಶ್ ರಾಣಾ, ಟಾಮ್ ಕರ್ರನ್ ಬಿಟ್ಟರೆ ಮತ್ಯಾರೂ 15ರ ಮೇಲೆ ರನ್ ಗಳಿಸದೆ ಸೋಲನ್ನು ಬರ ಮಾಡಿಕೊಂಡರು.

ಸ್ಕೋರ್ ಕಾರ್ಡ್

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ಆರಂಭದಲ್ಲೇ ಬ್ಯಾಟಿಂಗ್ ಆರ್ಭಟ ಮೆರೆಯಿತು. ಸೂರ್ಯಕುಮಾರ್ ಯಾದವ್ 36 (32), ಎವಿನ್ ಲೆವಿಸ್ 18 (13), ರೋಹಿತ್ ಶರ್ಮ 36 (31) ರನ್ ಕೊಡುಗೆ ತಂಡಕ್ಕೆ ಒದಗಿತು.

ಇಶಾನ್ ಕಿಶಾನ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ ಗರಿಷ್ಠ ಮಟ್ಟಕ್ಕೇರಿಸುವಲ್ಲಿ ನೆರವಾದರು.
ಬೆನ್ ಕಟಿಂಗ್ 24 (9), ಹಾರ್ದಿಕ್ ಪಾಂಡ್ಯ 19 (13), ಕೃಣಾಲ್ ಪಾಂಡ್ಯ ಅಜೇಯ 8 (2) ರನ್ ಬಾರಿಸಿದ್ದು ಮುಂಬೈ ತಂಡ ಕೋಲ್ಕತ್ತಾ ವಿರುದ್ದ ಗರಿಷ್ಠ ರನ್ ಗುರಿ ನೀಡಲು ಸಹಕಾರಿಯಾಯಿತು.

20 ಓವರ್ ಗಳಲ್ಲಿ ಮುಂಬೈ 6 ವಿಕೆಟ್ ನಷ್ಟಕ್ಕೆ 210 ರನ್ ಪೇರಿಸಿ ಕೋಲ್ಕತ್ತಾಗೆ 211 ರನ್ ಗುರಿ ನೀಡಿತು. ಕೋಲ್ಕತ್ತಾ ತಂಡದಿಂದ ಪೀಯೂಷ್ ಚಾವ್ಲ 48 ರನ್ನಿಗೆ ಮೂರು ವಿಕೆಟ್ ಕೆಡವಿ ಗಮನ ಸೆಳೆದರು.

ಚೇಸಿಂಗ್ ಗೆ ಇಳಿದ ಕೋಲ್ಕತ್ತಾ ತಂಡವೂ ಆರಂಭಿಕ ಓವರ್ ನಲ್ಲಿ ರನ್ ಮಳೆಗೆ ಶುರುವಿಟ್ಟಿತು. ಆದರೆ ಆಲ್ ರೌಂಡರ್ ಸುನೀಲ್ ನರೇನ್ ಹೆಚ್ಚು ಹೊತ್ತು ನಿಲ್ಲಲಿಲ್ಲ. 4 ರನ್ ಬಾರಿಸಿದ ನರೇನ್ ಹಾರ್ದಿಕ್ ಗೆ ಕ್ಯಾಚಿತ್ತು ಪೆವಿಲಿಯನ್ ಗೆ ಸಾಗಿದರು.

ಅನಂತರ ಕ್ರಿಸ್ ಲಿನ್ (21/15) ಅವರೂ ರನೌಟ್ ಆದರು. ರಾಬಿನ್ ಉತ್ತಪ್ಪ 14/13) ಕೂಡ ಮಾಯಾಂಕ್ ಓವರ್ ನಲ್ಲಿ ಕ್ಯಾಚ್ ನೀಡಿದ್ದು ಕೋಲ್ಕತ್ತಾವನ್ನು ಇಕ್ಕಟ್ಟಿಗೆ ಸಿಲುಕಿತು. ಜೊತೆಗೆ ಟಾಮ್ ಕರ್ರನ್ 18 (17), ಚಾವ್ಲಾ 11 (13) ರನ್ ಬಿಟ್ಟರೆ ಬಾಕಿ ಆಟಗಾರರೆಲ್ಲಾ ಐದರೊಳಗಡೆ ವಿಕೆಟ್ ಒಪ್ಪಿಸಿ ನಡೆದಿದ್ದು ಕೋಲ್ಕತ್ತಾ ಹೀನಾಯ ಸೋಲಿಗೆ ಕಾರಣವಾಯ್ತು.

ಮುಂಬೈ ಪರ ಬ್ಯಾಟಿಂಗ್ ಮಿಂಚು ಹರಿಸಿದ ಇಶಾನ್ ಕಿಶಾನ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Thursday, May 10, 2018, 0:26 [IST]
Other articles published on May 10, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+