For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2017 ː ಹುಬ್ಳಿ ಟೈಗರ್ಸ್ ಪಾಲಾದ ವಿನಯ್ ಕುಮಾರ್

By Mahesh

ಬೆಂಗಳೂರು, ಆಗಸ್ಟ್ 06: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಆರನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ.

ಕೆಪಿಎಲ್ 2016: ಯಾವ ತಂಡಕ್ಕೆ ಎಷ್ಟು ಮೊತ್ತ ಬಹುಮಾನ?

ಕಾಮೆಂಟೆಟರ್ ಚಾರುಶರ್ಮ ಅವರು ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದಾರೆ. ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನಲ್ಲಿ ಯಾವ ಆಟಗಾರರು ಯಾವ ತಂಡಕ್ಕೆ ಸೇರಿದ್ದಾರೆ ಇಲ್ಲಿದೆ ಅಪ್ಡೇಟ್ಸ್

6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ಪಂದ್ಯಗಳು ನಡೆಯಲಿವೆ. ಕೆಪಿಎಲ್ ಸೇರಿದಂತೆ ಕೆಲವಾರು ಮಹತ್ವದ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸಲಾಗಿದೆ.

ಕಳೆದ ವರ್ಷದವರೆಗೆ ಕೆಪಿಎಲ್ ನಲ್ಲಿ ಆಡಿದ್ದ ಉದ್ಯಮಿ ಅಶೋಕ್ ಖೇಣಿ ಒಡೆತನದ ರಾಕ್ ಸ್ಟಾರ್ ತಂಡವು ಈ ಬಾರಿಯ ಕೆಪಿಎಲ್ ನಿಂದ ಹೊರಗುಳಿಯಲಿದೆ. ಈ ಬಾರಿ ಕೆಪಿಎಲ್ ಗೆ ಹೊಸ ತಂಡ 'ಕಲ್ಯಾಣಿ ಬ್ಲಾಸ್ಟರ್ಸ್ ಬೆಂಗಳೂರು' ಹೆಸರಿನ ಹೊಸ ಫ್ರಾಂಚೈಸಿಯು ಕಾಲಿಡಲಿದೆ.

ತಂಡಗಳು: ಮೈಸೂರು ವಾರಿಯರ್ಸ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಬಳ್ಳಾರಿ ಟಸ್ಕರ್, ಹುಬ್ಬಳ್ಳಿ ಟೈಗರ್ಸ್, ನಮ್ಮ ಶಿವಮೊಗ್ಗ, ಬೆಂಗಳೂರು ಬ್ಲಾಸ್ಟರ್ಸ್

ಯಾವ ಆಟಗಾರ ಎಲ್ಲಿಗೆ?:

* ನಮ್ಮ ಶಿವಮೊಗ್ಗ ತಂಡದ ಪಾಲಾದ ಅಖಿಲ್ ಬಾಲಚಂದ್ರ(2.4 ಲಕ್ಷ ರು)

* ಪ್ರಸಿಧ್ ಎಂ ಕೃಷ್ಣಗೆ 3 ಲಕ್ಷ ರು ಕೊಟ್ಟು ಖರೀದಿಸಿದ ಬೆಂಗಳೂರು ಬ್ಲಾಸ್ಟರ್ಸ್

* ಅಭಿಷೇಕ್ ರೆಡ್ಡಿ (2 ಲಕ್ಷ ರು) ಯನ್ನು ಖರೀದಿಸಿದ ಹುಬ್ಳಿ ಟೈಗರ್ಸ್

* ಹುಬ್ಳಿ ಟೈಗರ್ಸ್ ಪಾಲಾದ ವಿನಯ್ ಕುಮಾರ್ (3.6 ಲಕ್ಷರು)

* ಅಭಿಮನ್ಯು ಮಿಥುನ್ (1 ಲಕ್ಷ ರು ) ಖರೀದಿಸಿದ ಬಿಜಾಪುರ್ ಬುಲ್ಸ್

* ಮೈಸೂರು ವಾರಿಯರ್ಸ್ ಪಾಲಾದ ಸುನೀಲ್ ರಾಜು (5 ಲಕ್ಷ ರು)

* ಕುನಾಲ್ ಕಪೂರ್ (ಯಾವ ತಂಡವೂ ಖರೀದಿಸಿಲ್ಲ)

* ಮೈಸೂರು ವಾರಿಯರ್ಸ್ ಪಾಲಾದ ಜೆ ಸುಚಿತ್ (2.5 ಲಕ್ಷ ರು)

* ವೈಶಾಂಕ್ ವಿಜಯ್ ಕುಮಾರ್ (2.1 ಲಕ್ಷ ರು) ಗೆ ಖರೀದಿಸಿದ ಮೈಸೂರು ವಾರಿಯರ್ಸ್

* ಬಿಜಾಪುರ್ ಬುಲ್ಸ್ ಪಾಲಾದ ಎಚ್.ಎಸ್ ಶರತ್ (50 ಸಾವಿರ ರುಪಾಯಿ)

* ಎಸ್ ಅರವಿಂದ್ ಗೆ 1.5 ಲಕ್ಷ ರು ಖರೀದಿಸಿದ ಬೆಳಗಾವಿ ಪ್ಯಾಂಥರ್ಸ್.

KPL 2017: Players Auction Live Updates Who went Where

* ಸ್ಟುವರ್ಟ್ ಬಿನ್ನಿಗೆ 1.1 ಲಕ್ಷ ರು ನೀಡಿ ಖರೀದಿಸಿದ ಬೆಳಗಾವಿ ಪ್ಯಾಂಥರ್ಸ್

* ಬೆಂಗಳೂರು ಬ್ಲಾಸ್ಟರ್ಸ್ ಪಾಲಾದ ಶಿಶಿರ್ ಭಾವನೆ (1.5 ಲಕ್ಷ ರು)

* ಹುಬ್ಳಿ ಟೈಗರ್ಸ್ ಪಾಲಾದ ಪ್ರವೀಣ್ ದುಬೇ (3.1 ಲಕ್ಷ ರು)

* ಬಿಜಾಪುರ್ ಬುಲ್ಸ್ ಪಾಲಾದ ಕೆ.ಸಿ ಕಾರ್ಯಪ್ಪ(2.5 ಲಕ್ಷ ರು)

* ಮಿತ್ರಕಾಂತ್ ಸಿಂಗ್ ಯಾದವ್ 2.5 ಲಕ್ಷ ರುಗೆ ಬೆಂಗಳೂರು ಬ್ಲಾಸ್ಟರ್ಸ್ ಪಾಲು

* ಪ್ರದೀಪ್ ಟಿರನ್ನು ಖರೀದಿಸಿದ ನಮ್ಮ ಶಿವಮೊಗ್ಗ (4.8 ಲಕ್ಷ ರು)

* 5 ಲಕ್ಷ ರು ನೀಡಿ ಮೊಹಮ್ಮದ್ ತಾಹರನ್ನು ಖರೀದಿಸಿದ ಬಿಜಾಪುರ್ ಬುಲ್ಸ್

* ನಮ್ಮ ಶಿವಮೊಗ್ಗ ತಂಡ ಸೇರಿದ ಅಬ್ರಾರ್ ಖಾಜಿ (2.5 ಲಕ್ಷ ರು)

KPL 2017: Players Auction Live Updates Who went Where

* ಮೈಸೂರು ವಾರಿಯರ್ಸ್ ಪಾಲಾದ ಶ್ರೇಯಸ್ ಗೋಪಾಲ್ (3.4 ಲಕ್ಷ ರು)

* ಎರಡು ತಂಡಗಳಲ್ಲಿ ಸುಮಾರು 215ಕ್ಕೂ ಅಧಿಕ ಆಟಗಾರರ ಹರಾಜು ನಡೆಯಲಿದೆ.

* ಕಾಮೆಂಟೆಟರ್ ಚಾರುಶರ್ಮ ಅವರು ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದಾರೆ.

* 6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಹರಾಜು ಪ್ರಕ್ರಿಯೆ

* ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಪವನ್ ದೇಶಪಾಂಡೆ ಸೇರ್ಪಡೆ (4.6 ಲಕ್ಷ ರು)

* ಪ್ರತೀಕ್ ಜೈನ್ ಗೆ 5.5 ಲಕ್ಷ ರು ನೀಡಿ ಖರೀದಿಸಿದ ಬೆಳಗಾವಿ ಪ್ಯಾಂಥರ್ಸ್

* ಬೆಳಗಾವಿ ಪ್ಯಾಂಥರ್ಸ್ ತಂಡ ಸೇರಿದ ಮನೀಶ್ ಪಾಂಡೆ (1.6 ಲಕ್ಷ ರು)

KPL 2017: Players Auction Live Updates Who went Where

* ಹುಬ್ಳಿ ಟೈಗರ್ಸ್ ಪಾಲಾದ ಮಾಯಾಂಕ್ ಅಗರವಾಲ್ (7 ಲಕ್ಷ ರು)

* ಮೈಸೂರು ವಾರಿಯರ್ಸ್ ಪಾಲಾದ ಕರುಣ್ ನಾಯರ್ (4 ಲಕ್ಷ ರು)

KPL 2017: Players Auction Live Updates Who went Where

* ಗೌತಮ್ ಸಿ.ಎಂ 50 ಸಾವಿರ ರುಪಾಯಿಗೆ ಖರೀದಿಸಿದ ಬಳ್ಳಾರಿ ಟಸ್ಕರ್ಸ್

* ಡೇವಿಡ್ ಮಥಾಯಿಸ್ (ಯಾರೂ ಖರೀದಿಸಿಲ್ಲ)

* ಬೆಂಗಳೂರು ಬ್ಲಾಸ್ಟರ್ಸ್ ಪಾಲಾದ ಆರ್ ಸಮರ್ಥ್ (5.9 ಲಕ್ಷರು)

*ಗೌತಮ್ ಕೆಗೆ 7.2 ಲಕ್ಷ ರು ಕೊಟ್ಟು ಖರೀದಿಸಿದ ಬೆಳಾಗಾವಿ ಪ್ಯಾಂಥರ್ಸ್

* ಬಿಜಾಪುರ್ ಬುಲ್ಸ್ ಗೆ 1.30 ಲಕ್ಷ ರು ಗೆ ರೋಹಿತ್ ಮೋರೆ ಖರೀದಿ

* 7.20 ಲಕ್ಷ ರುಗೆ ಬಳ್ಳಾರಿ ಟಸ್ಕರ್ಸ್ ಪಾಲಾದ ಅಮಿತ್ ವರ್ಮಾ

* ಅನಿರುಧ್ ಜೋಶಿಯನ್ನು 5.8 ಲಕ್ಷ ರುಗೆ ಖರೀದಿಸಿದ ನಮ್ಮ ಶಿವಮೊಗ್ಗ

* ಕೆಎಲ್ ರಾಹುಲ್ ಅವರನ್ನು 50 ಸಾವಿರ ರುಪಾಯಿಗೆ ಖರೀದಿಸಿದ ಬಳ್ಳಾರಿ ಟಸ್ಕರ್ಸ್.

* ಪವನ್ ಕೆಬಿ ಅವರನ್ನು 3 ಲಕ್ಷ ರುಪಾಯಿಗೆ ಖರೀದಿಸಿದ ಬಳ್ಳಾರಿ ಟಸ್ಕರ್ಸ್.
* ಮೀರ್ ಕುರಿಯನ್ ಅಬ್ಬಾಸ್ ರನ್ನು 2.6 ಲಕ್ಷ ರುಗೆ ಖರೀದಿಸಿದ ಬೆಳಗಾವಿ ಪ್ಯಾಂಥರ್ಸ್.

ಪ್ರತಿ ತಂಡಗಳು ನಾಲ್ಕು ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದು ಹಾಗೂ ಪ್ರತಿ ತಂಡದಲ್ಲಿ 18 ಮಂದಿ ಆಟಗಾರರಿರಬಹುದು.(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+