For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2019: ಹುಬ್ಳಿ ಟೈಗರ್ಸ್ ಕಟ್ಟಿಹಾಕಿದ ಮೈಸೂರು ವಾರಿಯರ್ಸ್

KPL 2019 - Mysuru Warriors win their first match

ಮೈಸೂರು, ಆಗಸ್ಟ್ 26: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಟೇಡಿಯಂನಲ್ಲಿ ಭಾನುವಾರ (ಆಗಸ್ಟ್ 25) ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ 17ನೇ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ ವಿರುದ್ಧ ಮೈಸೂರು ವಾರಿಯರ್ಸ್ 9 ವಿಕೆಟ್ ಸುಲಭ ಜಯ ಗಳಿಸಿದೆ. ಇದು ವಾರಿಯರ್ಸ್‌ಗೆ ಟೂರ್ನಿಯಲ್ಲಿ ಲಭಿಸಿದ ಮೊದಲ ಗೆಲುವು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹುಬ್ಳಿ ಟೈಗರ್ಸ್, ಪವನ್ ದೂಬೆ 52, ಲವನಿತ್ ಸಿಸೋಡಿಯಾ 29 ರನ್‌ ನೊಂದಿಗೆ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿತು. ತಂಡದ ಉಳಿಯ ಯಾವುದೇ ಬ್ಯಾಟ್ಸ್ಮನ್ 20ಕ್ಕೂ ಹೆಚ್ಚು ರನ್ ಗಳಿಸದಿದ್ದುದು ಸೋಲಿಗೆ ಕಾರಣವಾಯ್ತು.

ಅಲ್ಲದೆ ಹುಬ್ಳಿ ಇನ್ನಿಂಗ್ಸ್‌ನಲ್ಲಿ ವಾರಿಯರ್ಸ್‌ನ ರಾಮ್ ಸಾರಿಕ್ ಯಾದವ್, ವ್ಯಾಶಕ್ ವಿಜಯ್ ಕುಮಾರ್ ಮತ್ತು ವೆಂಕಟೇಶ್ ಮುರಳೀಧರ ತಲಾ 2 ವಿಕೆಟ್ ಪಡೆದು ಎದುರಾಳಿಯನ್ನು ಕಾಡಿದರು. ಚೇಸಿಂಗ್‌ಗೆ ಇಳಿದ ಮೈಸೂರು ವಾರಿಯರ್ಸ್‌ನಿಂದ ವಿನಯ್ ಸಾಗರ್ 51, ಕೃಷ್ಣಮೂರ್ತಿ ಸಿದ್ಧಾರ್ಥ್ ಅಜೇಯ 48, ಅನಿರುದ್ಧ್ ಜೋಶಿ ಅಜೇಯ 46 ರನ್ ಸೇರಿಸಿದರು.

ವಾರಿಯರ್ಸ್, 16 ಓವರ್‌ಗೆ 1 ವಿಕೆಟ್ ಕಳೆದು 154 ರನ್ ಕಲೆ ಹಾಕಿ ವಿಜಯೋತ್ಸವ ಆಚರಿಸಿತು. ಈ ಪಂದ್ಯದ ಬಳಿಕ ಕೆಪಿಎಲ್ ಅಂಕಪಟ್ಟಿಯಲ್ಲಿ ಬಳ್ಳಾರಿ ಟಸ್ಕರ್ಸ್, ಶಿವಮೊಗ್ಗ ಲಯನ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ಕ್ರಮವಾಗಿ ಅಗ್ರ ಮೂರು ಸ್ಥಾನಗಳಲ್ಲಿದ್ದವು.

Story first published: Monday, August 26, 2019, 1:35 [IST]
Other articles published on Aug 26, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+