For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾಗೆ ಸಂಕಟ ಮೋಚಕನಾದ ಕೃಷ್ಣ ಭಕ್ತ

ತವರಿನಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧ ಗೆಲುವಿಗಾಗಿ ಹೆಣಗಾಡುತ್ತಿದೆ. ಆದರೆ ಬಾಂಗ್ಲಾದೇಶ ತಂಡ ಪಾಕಿಸ್ತಾನ ನೆಲದಲ್ಲಿ ಇತಿಹಾಸ ಸೃಷ್ಟಿಸಿದೆ. 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾ ಮೇಲುಗೈ ಸಾಧಿಸಿದೆ.

ರಾವಲ್ಪಿಂಡಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಾಂಗ್ಲಾ, ಇದೀಗ ಅದೇ ಮೈದಾನದಲ್ಲಿ ಎರಡನೇ ಪಂದ್ಯದಲ್ಲಿ ತನ್ನ ಹಿಡಿತವನ್ನು ಗಟ್ಟಿಗೊಳಿಸಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಕೃಷ್ಣ ಭಕ್ತನ ಕೃಪೆಯಿಂದ ಬಾಂಗ್ಲಾದೇಶ ಅದ್ಭುತ ಪುನರಾಗಮನ ಮಾಡಿ ಪಾಕಿಸ್ತಾನಕ್ಕೆ ಅಚ್ಚರಿ ಮೂಡಿಸಿದೆ.

Krishna devotee Liton Das saved the Bangladesh team in trouble against Pakistan

ಬಾಂಗ್ಲಾ ಸಂಕಷ್ಟ

ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತ್ತು. ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 274 ರನ್ ಗಳಿಸಿತ್ತು. ಇದಾದ ನಂತರ ಬಾಂಗ್ಲಾದೇಶ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಆರಂಭಿಕ ಅಘಾತ ಎದುರಿಸಿತ್ತು.

ಬಾಂಗ್ಲಾ ಕೇವಲ 26 ರನ್ ಗಳಿಸುವಷ್ಟರಲ್ಲೇ 6 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಎದುರು ಬಾಂಗ್ಲಾ ಹೀನಾಯವಾಗಿ ಸೋಲಲಿದೆ ಎಂದು ಭಾವಿಸಲಾಗಿತ್ತು. ಆದರೆ, ಇದಕ್ಕೆ ದಾರಿ ಮಾಡಿಕೊಡದ ಕೃಷ್ಣ ಭಕ್ತ ಜವಾಬ್ದಾರಿಯುತ ಬ್ಯಾಟಿಂಗ್ ಬಾಂಗ್ಲಾದೇಶವನ್ನು ಗೆಲುವಿನ ಕಡೆ ಮುನ್ನಡೆಯುವಂತೆ ಮಾಡಿತ್ತು.

ಬಾಂಗ್ಲಾ ಬ್ಯಾಟರ್‌ಗಳು ಫ್ಲಾಪ್

ಬಾಂಗ್ಲಾದೇಶ ತಂಡದ ಅನುಭವಿ ಬ್ಯಾಟರ್‌ಗಳಾದ ಮುಶ್ಫಿಕರ್ ರಹೀಮ್ (3), ಶಾಕಿಬ್ ಅಲ್ ಹಸನ್ (2), ಜಾಕಿರ್ ಹಸನ್ (1), ನಾಯಕ ನಜ್ಮುಲ್ ಹೊಸೈನ್ (4), ಮೊಮಿನುಲ್ ಹಕ್ (1) ಮತ್ತು ಶಾದ್ಮನ್ ಇಸ್ಲಾಂ (10) ರನ್ ಗಳಿಸಿ ಔಟಾದರು. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾ ಎದುರು ಪ್ರಾಬಲ್ಯ ಸಾಧಿಸಿತ್ತು.

ಇಲ್ಲಿಂದ ಲಿಟನ್ ದಾಸ್ ಮತ್ತು ಮೆಹದಿ ಹಸನ್ ಮಿರಾಜ್ ತಂಡವನ್ನು ಸಂಕಷ್ಟದಿಂದ ಮೇಲೆತ್ತಿದರು.
ಬಾಂಗ್ಲಾದೇಶ ತಂಡದಲ್ಲಿರುವ ಏಕೈಕ ಹಿಂದೂ ಕ್ರಿಕೆಟಿಗ ಲಿಟನ್ ದಾಸ್, ಪಾಕಿಸ್ತಾನಿ ಬೌಲರ್‌ಗಳಿಗೆ ಬೆವರಿಳಿಸಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿದರು.

ಶ್ರೀಕೃಷ್ಣ ಭಕ್ತ

ಬಾಂಗ್ಲಾ ತಂಡದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಲಿಟನ್ ದಾಸ್ ಶ್ರೀಕೃಷ್ಣನ ಭಕ್ತ ಎಂಬುದು ಗೊತ್ತಿರುವ ವಿಷಯ. ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಾನು ಶ್ರೀಕೃಷ್ಣನ ಭಕ್ತ ಎಂದು ಹೇಳಿಕೊಂಡಿದ್ದಾರೆ. ಹೇಗೆ ಕಷ್ಟದಲ್ಲಿದವರಿಗೆ ಕೃಷ್ಣ ಸಹಾಯ ಮಾಡುತ್ತಾನೋ, ಹಾಗೆಯೇ ಬಾಂಗ್ಲಾ ತಂಡಕ್ಕೆ ಲಿಟನ್ ದಾಸ್ ಆಸರೆಯಾಗಿದ್ದಾರೆ.

7ನೇ ವಿಕೆಟ್‌ಗೆ ಒಂದಾದ ಲಿಟನ್ ದಾಸ್ ಮತ್ತು ಮೆಹದಿ ಹಸನ್ 165 ರನ್‌ಗಳ ಜೊತೆಯಾಟ ಆಡಿದರು. ಈ ವೇಳೆ ಲಿಟನ್ ಶತಕ ಸಿಡಿಸಿ ಮಿಂಚಿದರು. ಅವರು 228 ಎಸೆತಗಳಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 138 ರನ್ ಗಳಿಸಿದರು.

ಮತ್ತೊಂದೆಡೆ ಮೆಹದಿ ಹಸನ್ ಮಿರಾಜ್ 124 ಎಸೆತಗಳನ್ನು ಎದುರಿಸಿ 78 ರನ್ ಗಳಿಸಿದರು. ಇದರೊಂದಿಗೆ
ಬಾಂಗ್ಲಾದೇಶ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 262 ರನ್ ಗಳಿಸಿತು. ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 12 ರನ್‌ಗಳ ಮುನ್ನಡೆ ಸಾಧಿಸಿತು.

ಲಿಟನ್ ಇತಿಹಾಸ

ಲಿಟನ್ ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದರು. 147 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಮಾಡದಂತಹ ದಾಖಲೆಯನ್ನು ಅವರು ಮಾಡಿದರು. ತಂಡದ ಸ್ಕೋರ್ 50 ಅಥವಾ ಅದಕ್ಕಿಂತ ಕಡಿಮೆ ಇದ್ದಾಗ ಲಿಟನ್ ಟೆಸ್ಟ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಇದುವರೆಗೆ ಅವರು ಮೂರು ಬಾರಿ ಶತಕ ಹೊಡೆದಿದ್ದಾರೆ.

Story first published: Monday, September 2, 2024, 20:12 [IST]
Other articles published on Sep 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+