For Quick Alerts
ALLOW NOTIFICATIONS  
For Daily Alerts
 

ಕೃನಾಲ್ ಪಾಂಡ್ಯ ಟ್ವಿಟ್ಟರ್ ಅಕೌಂಟ್ ಹ್ಯಾಕ್: ಬಿಟ್‌ಕಾಯಿನ್‌ಗಾಗಿ ಅಕೌಂಟ್ ಮಾರಾಟ ಎಂದು ಟ್ವೀಟ್‌

Krunal pandya

ಟೀಂ ಇಂಡಿಯಾ ಕ್ರಿಕೆಟರ್, ಆಲ್‌ರೌಂಡರ್ ಕೃನಾಲ್ ಪಾಂಡ್ಯ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆ.ಡ್ರೇಕ್ ಡ ಗೋಟ್‌ ಎಂಬ ಹೆಸರಿನ ಬಳಕೆದಾರರು ಹಾರ್ದಿಕ್ ಪಾಂಡ್ಯ ಎನ್‌ಬಿಎ ಯುವ ಅಭಿಮಾನಿಯಾಗಿರಬಹುದು ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಪಾಂಡ್ಯ ಅವರ ಅಧಿಕೃತ ಟ್ವಿಟ್ಟರ್ ಖಾತೆಯು 'ನಾಹ್ ಎ ಬಿಚ್ ಟೂ' ಎಂದು ಪ್ರತಿಕ್ರಿಯಿಸಿದೆ.

ಸುಮಾರು ಒಂದು ಗಂಟೆಯ ನಂತರ ಕೃನಾಲ್ ಪಾಂಡ್ಯ ಟ್ವಿಟ್ಟರ್ ಅಕೌಂಟ್‌ನಿಂದ ಮತ್ತೊಂದು ಟ್ವೀಟ್ ಹೊರಬಿದ್ದಿತು. ಬಿಟ್‌ಕಾಯಿನ್‌ಗಳಿಗಾಗಿ ಈ ಅಕೌಂಟ್ ಅನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹ್ಯಾಕರ್ಸ್ ಬರೆದಿದ್ದಾರೆ.

ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಮತ್ತೊಂದು ಟ್ವೀಟ್ ಕೂಡ ಹೊರಬಂದಿದ್ದು 'I like you Uzi London. We chill'. ಕೃನಾಲ್ ಪಾಂಡ್ಯ ಅಕೌಂಟ್‌ನಿಂದ 2 ಗಂಟೆಗಳಲ್ಲಿ 9 ಬಾರಿ ಟ್ವೀಟ್ ಮಾಡಿದ್ದು, ಯಾರೋ ಅವರ ಖಾತೆಯನ್ನು ಹ್ಯಾಕ್ ಮಾಡಿರುವುದು ಸ್ಪಷ್ಟವಾಗಿ ತೋರುತ್ತಿದೆ.

ಈ ಎಲ್ಲಾ ಟ್ವೀಟ್‌ಗಳನ್ನ ನೋಡಿದ್ರೆ, ಹಲವಾರು ಅಭಿಮಾನಿಗಳು ಪಾಂಡ್ಯ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಭಾವಿಸಿದ್ದು, ಕಾಮೆಂಟ್‌ಗಳಲ್ಲಿ ಅದನ್ನೇ ಉಲ್ಲೇಖಿಸಿದ್ದಾರೆ. ನೀವು ಕೃನಾಲ್ ಪಾಂಡ್ಯ ಅವರ ಟ್ವಿಟರ್ ಖಾತೆಯಿಂದ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಕೆಳಗೆ ನೋಡಬಹುದು.

tweet1
tweet2

ಕೃನಾಲ್ ಪಾಂಡ್ಯ ಕೊನೆಯದಾಗಿ ಕ್ರಿಕೆಟ್ ಮೈದಾನದಲ್ಲಿ ವಿಜಯ್ ಹಜಾರೆ ಟೂರ್ನಮೆಂಟ್‌ನಲ್ಲಿ ಕಾಣಿಸಿಕೊಂಡರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡ ಈ ಟೂರ್ನಮೆಂಟ್‌ನಲ್ಲಿ ಕೃನಾಲ್ 118 ರನ್‌ಗಳನ್ನ ಕಲೆ ಹಾಕಿದ್ದರ ಜೊತೆಗೆ 7 ವಿಕೆಟ್‌ಗಳನ್ನ ಕಬಳಿಸಿದ್ರು.

ಟೀಂ ಇಂಡಿಯಾದಲ್ಲಿ ಸಿಕ್ಕ ಅವಕಾಶದಲ್ಲಿ ಮಿಂಚದ ಕೃನಾಲ್ ಭಾರತ ಪರ 5 ಏಕದಿನ ಮತ್ತು 19 ಟಿ20 ಪಂದ್ಯಗಳನ್ನ ಆಡಿದ್ದಾರೆ. ಈತ ಆಡಿರುವ ಐದು ಏಕದಿನ ಪಂದ್ಯದಲ್ಲಿ 130 ರನ್ ಮತ್ತು 19 ಟಿ20 ಪಂದ್ಯಗಳಿಂದ 124 ರನ್ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 2 ವಿಕೆಟ್‌ಗಳನ್ನ ಪಡೆದಿದ್ದಾರೆ.

ಹಾರ್ದಿಕ್‌ ಐಪಿಎಲ್‌ನ 84 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, ಬಹುತೇಕ ಪಂದ್ಯಗಳನ್ನ ಮುಂಬೈ ಇಂಡಿಯನ್ಸ ಪರ ಆಡಿದ್ದಾರೆ. 140ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಎಡಗೈ ಆಲ್‌ರೌಂಡರ್ 1143 ರನ್ ಮತ್ತು 51 ವಿಕೆಟ್ ಪಡೆದಿದ್ದಾರೆ.

2022ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರೀಟೈನ್ ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ಕೃನಾಲ್ ಪಾಂಡ್ಯರನ್ನ ರೀಟೈನ್ ಮಾಡಿಕೊಳ್ಳಲಿಲ್ಲ. ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದ್ದು, 10 ಫ್ರಾಂಚೈಸಿಗಳು ಆಟಗಾರರಿಗೆ ಬಿಡ್ ನಡೆಸಲಿವೆ.

Story first published: Thursday, January 27, 2022, 16:34 [IST]
Other articles published on Jan 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+