ಗಂಭೀರ್‌ಗೆ ಕುಲ್‌ದೀಪ್ ಯಾದವ್ ಬರ್ತ್‌ಡೇ ಸಂದೇಶ: ದಿನೇಶ್ ಕಾರ್ತಿಕ್‌ಗೆ ಟಾಂಗ್ ಕೊಟ್ರಾ?
ಕೋಲ್ಕತಾ ನೈಟ್ ರೈಡರ್ಸ್ ಸ್ಟಾರ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಮಾಜಿ ಐಪಿಎಲ್ ನಾಯಕ ಗೌತಮ್ ಗಂಭೀರ್ ಅವರ ಹುಟ್ಟುಹಬ್ಬದ ಸಂದೇಶದೊಂದಿಗೆ ಹಲವಾರು ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದಕ್ಕೆ ಕಾರಣ ಚೈನಾಮೆನ್ ಬೌಲರ್ ಕುಲ್‌ದೀಪ್‌ರ ಆ ಒಂದು ಸಂದೇಶ.
ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಗೌತಮ್ ಗಂಭೀರ್ ಬುಧವಾರ 39 ನೇ ವರ್ಷಕ್ಕೆ ಕಾಲಿಟ್ಟರು ಮತ್ತು ಎಲ್ಲಾ ಭಾಗಗಳಿಂದ ಅನೇಕ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವಾರು ಶುಭಾಶಯಗಳು ಬಂದಿವೆ.

ಗಂಭೀರ್ ಕೆಕೆಆರ್ ತಂಡದಲ್ಲಿದ್ದಾಗ ಕುಲ್‌ದೀಪ್‌ಗೆ ಹೆಚ್ಚಿನ ಸ್ಥಾನ
ಕೆಕೆಆರ್ ತಂಡವನ್ನ ಗೌತಮ್ ಗಂಭೀರ್ ಮುನ್ನೆಡೆಸುತ್ತಿದ್ದಾಗ ಕುಲ್‌ದೀಪ್ ಯಾದವ್ ಹೆಚ್ಚಿನ ಅವಕಾಶ ಲಭಿಸಿದವು. ಆದರೆ 2018ರಲ್ಲಿ ಗಂಭೀರ್ ಕೆಕೆಆರ್ ತಂಡದಿಂದ ಹೊರಬಿದ್ದು ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡರು. ನಂತರ ಕಳಪೆ ಪ್ರದರ್ಶನದಿಂದಾಗಿ ಅವರು ಎಲ್ಲಾ ರೀತಿಯ ಕ್ರಿಕೆಟ್ ಫಾರ್ಮೆಟ್‌ಗೆ ನಿವೃತ್ತಿ ಘೋಷಿಸಿದರು.

2019 ರಲ್ಲಿ ಗಳಿಸಿದ್ದು ಕೇವಲ ನಾಲ್ಕು ವಿಕೆಟ್
ಹೀಗೆ ಗಂಭೀರ್ ಹೊರ ನಡೆದ ಬಳಿಕ ಕುಲ್‌ದೀಪ್ ಯಾದವ್ ಕಳೆದ ಸೀಸನ್‌ನಲ್ಲಿ 9 ಪಂದ್ಯಗಳಲ್ಲಿ ಅವಕಾಶ ಸಿಕ್ಕಿದ್ದು, ಕೇವಲ ನಾಲ್ಕು ವಿಕೆಟ್ ಪಡೆದಿದ್ದರು. ಆದರೆ ಅದಕ್ಕೂ ಮೊದಲು 2018ರ ಐಪಿಎಲ್ ಸೀಸನ್‌ನಲ್ಲಿ ಕುಲ್‌ದೀಪ್ 16 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದರು.

ಐಪಿಎಲ್ 13ನೇ ಆವೃತ್ತಿಯಲ್ಲಿ ಸಿಕ್ಕಿದ್ದು ಮೂರೇ ಅವಕಾಶ
ಆದರೆ ಈ ಬಾರಿ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಸೀಸನ್‌ನಲ್ಲಿ ಕುಲ್‌ದೀಪ್‌ಗೆ ಸಿಕ್ಕಿದ್ದು ಕೇವಲ ಮೂರು ಪಂದ್ಯಗಳ ಅವಕಾಶ. ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೂರ ಬಾರಿ ಅವಕಾಶ ಪಡೆದು ಕೇವಲ 1 ವಿಕೆಟ್ ಗಳಿಸಿದ್ದಾರೆ. ಹೀಗಾಗಿ ಅವರಿಗೆ ತಂಡದಿಂದ ಹೊರಗಿಡಲಾಗಿದೆ.
ಡಿಕೆಗೆ ಟಾಂಗ್ ಕೊಂಡುವಂತಿದೆ ಕುಲ್‌ದೀಪ್ ಸಂದೇಶ
ಗೌತಮ್ ಗಂಭೀರ್‌ಗೆ ಕುಲ್‌ದೀಪ್ ರ ಬರ್ತ್‌ಡೇ ಸಂದೇಶವು ನಾಯಕ ದಿನೇಶ್ ಕಾರ್ತಿಕ್‌ಗೆ ಟಾಂಗ್ ನೀಡುವಂತಿದೆ ಎಂದು ಫ್ಯಾನ್ಸ್ ಆರೋಪಿಸಿದ್ದಾರೆ.
''"ಯಾವಾಗಲೂ ನನ್ನ ಮೇಲೆ ಅಪಾರ ನಂಬಿಕೆಯನ್ನು ತೋರಿಸಿದ ಮತ್ತು ನನಗೆ ಆಟದ ಬಗ್ಗೆ ತುಂಬಾ ಕಲಿಸಿದವರಿಗೆ ಜನ್ಮದಿನದ ಶುಭಾಶಯಗಳು @ ಗೌತಮ್‌ಗಂಭೀರ್ ಭಾಯ್. ದೇವರು ನಿಮ್ಮನ್ನು ಆಶೀರ್ವದಿಸಲಿ. " ಎಂದು ಕುಲ್‌ದೀಪ್ ಯಾದವ್ ಟ್ವೀಟ್ ಮಾಡಿದ್ದಾರೆ.
ಈ ಸಂದೇಶವನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸಿರುವ ಟ್ವಿಟ್ಟರಿಗರು, ದಿನೇಶ್ ಕಾರ್ತಿಕ್‌ಗೆ ತನ್ನ ಮೇಲೆ ನಂಬಿಕೆ ಇಟ್ಟಿಲ್ಲ ಎಂದು ಪರೋಕ್ಷವಾಗಿ ಕುಲ್‌ದೀಪ್ ಯಾದವ್ ಹೇಳಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications