Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ಘಾನಿಸ್ತಾನ ಕ್ರಿಕೆಟ್‌ ತಂಡಕ್ಕೆ ಮುಖ್ಯ ಕೋಚ್‌ ಆಗಿ ಲ್ಯಾನ್ಸ್ ಕ್ಲುಸೆನರ್ ಆಯ್ಕೆ

Lance Klusener named head coach of Afghanistan

ಕಾಬುಲ್, ಸೆಪ್ಟೆಂಬರ್ 30: ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್ ರೌಂಡರ್ ಲ್ಯಾನ್ಸ್ ಕ್ಲುಸೆನರ್ ಅಫ್ಘಾನಿಸ್ತಾನ ತಂಡದ ನೂತನ ಮುಖ್ಯ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಹಿಂದಿನ ಕೋಚ್ ಫಿಲ್ ಸಿಮ್ಮನ್ಸ್ ಒಪ್ಪಂದ ಮುಗಿದ ಬಳಿಕ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ತೆರವಾದ ಸ್ಥಾನಕ್ಕೆ ಅರ್ಜಿ ಕರೆದಿತ್ತು.

ಮುಖ್ಯಕೋಚ್ ಸ್ಥಾನಕ್ಕೆ ಬಂದ ಸುಮಾರು 50 ಅರ್ಜಿಗಳಲ್ಲಿ ಲೆವೆಲ್ 4ರ ಪ್ರಮಾಣೀಕೃತ ಕೋಚ್ ಕ್ಲುಸೆನರ್ ಅವರನ್ನು ಆಯ್ಕೆ ನಡೆಸಲಾಗಿದೆ. ನವೆಂಬರ್‌ನಲ್ಲಿ ಅಫ್ಘಾನಿಸ್ಥಾನ ಮತ್ತು ವೆಸ್ಟ್ ಇಂಡೀಸ್ ನಡುವಣ ಸರಣಿಯ ನಿಯೋಜನೆಯನ್ನು ಕ್ಲುಸೆನರ್‌ಗೆ ನೀಡಲಾಗಿದೆ.

'ಕ್ರಿಕೆಟ್ ಜಗತ್ತಿನಲ್ಲಿ ಲ್ಯಾನ್ಸ್ ಕ್ಲುಸೆನರ್ ಖ್ಯಾತ ಹೆಸರು. ಆಟಗಾರ ಮತ್ತು ಕೋಚ್‌ ಆಗಿ ಸಾಕಷ್ಟು ಅನುಭವ ಹೊಂದಿರುವ ಲ್ಯಾನ್ಸ್ ಅವರಿಂದ ನಮ್ಮ ಆಟಗಾರರಿಗೆ ಅನುಕೂಲ ಆಗಲಿದೆ ಎನ್ನಲು ಖುಷಿಯಾಗುತ್ತಿದೆ,' ಎಂದು ಎಸಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲುಟ್ಫುಲ್ಲಾ ಸ್ಟಾನಿಕ್ಜೈ ಹೇಳಿದ್ದಾರೆ.

'ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿರುವ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿದ್ದು ನನ್ನನ್ನು ತುಂಬಾ ಉತ್ಸುಕನನ್ನಾಗಿಸಿದೆ. ಪರಿಶ್ರಮದಿಂದ ನಾಳೆ ನಾವು ವಿಶ್ವದ ಶ್ರೇಷ್ಠ ತಂಡವಾಗಿ ಕಾಣಿಸಿಕೊಳ್ಳಲಿದ್ದೇವೆ ಎಂಬ ವಿಶ್ವಾಸ ನನಗಿದೆ,' ಎಂದು ಲ್ಯಾನ್ಸ್ ಕ್ಲುಸೆನರ್ ಹರ್ಷ ವ್ಯಕ್ತಪಡಿಸಿದ್ದಾರೆ.

Story first published: Sunday, September 29, 2019, 23:32 [IST]
Other articles published on Sep 29, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+