'ಆ ಹುಡುಗನನ್ನ ಅವನ ಪಾಡಿಗೆ ಬಿಟ್ಟುಬಿಡಿ': ಟ್ರೋಲಿಗರಿಗೆ ಆಕಾಶ್ ಚೋಪ್ರಾ ಮನವಿ

ಐಪಿಎಲ್ 13ನೇ ಆವೃತ್ತಿಯ 23ನೇ ಪಂದ್ಯದಲ್ಲಿ ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ತಾನ್ ರಾಯಲ್ಸ್ ಹೀನಾಯ ಸೋಲು ಕಂಡಿತು. ಶಾರ್ಜಾ ಕ್ರಿಕೆಟ್ ಮೈದಾನಲ್ಲಿ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳು ಅದ್ಭುತ ಫೀಲ್ಡಿಂಗ್‌ಗೆ ಸಾಕ್ಷಿಯಾದವು.
ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 184ರನ್ ಕಲೆಹಾಕಿತು. ಹೀಗಾಗಿ 185 ರನ್ ಗುರಿ ಬೆನ್ನತ್ತಿದ ಸ್ಟೀವ್ ಸ್ಮಿತ್ ಬಳಗ ಡೆಲ್ಲಿ ಬೌಲಿಂಗ್ ಎದುರು ಮಂಕಾಯಿತು. ಪವರ್‌ಪ್ಲೇ ಒಳಗೆ ಪ್ರಮುಖ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡಿತು. ಸ್ಟೀವ್ ಸ್ಮಿತ್ 24ರನ್‌ಗೆ ಔಟಾದ್ರೆ, ಸಂಜು ಸ್ಯಾಮ್ಸನ್ ಮತ್ತೊಮ್ಮೆ ತಂಡದ ಕೈ ಹಿಡಿಯುವಲ್ಲಿ ವಿಫಲರಾದ್ರು.
ಇದರ ನಡುವೆ ಸ್ವಲ್ಪ ಗಟ್ಟಿ ತನ ಪ್ರದರ್ಶಿಸಿದ್ದು 19 ವರ್ಷದ ಹುಡುಗ, ಓಪನಿಂಗ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್. ಸ್ವಲ್ಪ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ರು ದೀರ್ಘ ಇನ್ನಿಂಗ್ಸ್ ಆಡುವ ಛಲ ತೋರಿಸಿದ್ರು. ಈತ ಎದುರಿಸಿದ 36 ಎಸೆತಗಳಲ್ಲಿ 94.44 ಸ್ಟ್ರೈಕ್‌ರೇಟ್ ಗಳಿಸಿದ್ದು 32ರನ್‌ಗಳು. ಈತನ ಇನ್ನಿಂಗ್ಸ್‌ನಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು.
ನಿಗದಿತ 20 ಓವರ್‌ಗಳಲ್ಲಿ ಗುರಿ ಮುಟ್ಟಲಾಗದ ರಾಜಸ್ಥಾನ್ ರಾಯಲ್ಸ್ ತಂಡ 134 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನ ಒಪ್ಪಿಕೊಂಡಿತು.ಮತ್ತೊಂದೆಡೆ ಡೆಲ್ಲಿ 46ರನ್‌ಗಳ ಗೆಲುವನ್ನು ಆಚರಿಸಿತು.
ಪಂದ್ಯ ಸೋತ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎಂದಿನಂತೆ ಸೋತ ತಂಡದ ಅಭಿಮಾನಿಗಳ ಆಹಾರವಾಗೋದು ಸಾಮಾನ್ಯವಾಗಿ ಬಿಟ್ಟಿದೆ. ಟೀಕೆಗಳ ಸುರಿಮಳೆಯ ಜೊತೆಗೆ ಈ ಮಧ್ಯೆ, ಯುವ ಆಟಗಾರ ಜೈಸ್ವಾಲ್ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಟೀಕೆಗಳನ್ನು ಎದುರಿಸಬೇಕಾಯಿತು. ಈತ ಪಿಚ್‌ನಲ್ಲಿ ನಿಧಾನವಾಗಿ ಆಡುತ್ತಿದ್ದಾನೆ ಎಂದು ಟೀಕಿಸಲಾಯಿತು, ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರನೆಂದು ಪರಿಗಣಿಸಲಾಗಿದೆ.
ಈ ವೇಳೆ ಜೈಸ್ವಾಲ್ ಬೆಂಬಲಕ್ಕೆ ನಿಂತ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ 'ಹೃದಯ ಹೊಂದಿರಿ' ಮತ್ತು ಆ ಹುಡುಗನನ್ನು ಆತನ ಪಾಡಿಗೆ ಬಿಟ್ಟು ಬಿಡಿ ಎಂದು ಕೇಳಿದರು. ಜೊತೆಗೆ ಒಬ್ಬ ಅನುಭವಿ ಕ್ರಿಕೆಟಿಗನಂತೆಯೇ ಪ್ರಬುದ್ಧತೆಯನ್ನು ತೋರಿಸಲು ಜೈಸ್ವಾಲ್ ಅವರಷ್ಟು ಚಿಕ್ಕವನಿಂದ ನಿರೀಕ್ಷಿಸುವುದು ನ್ಯಾಯವಲ್ಲ ಎಂದು ಚೋಪ್ರಾ ಸ್ಪಷ್ಟವಾಗಿ ಹೇಳಿದರು.
ಅಲ್ಲದೆ ಇದರ ನಡುವೆ ಟ್ರೋಲಿಗರಿಗೆ ಮನವಿ ಕೂಡ ಮಾಡಿದ್ದು, ಹಿರಿಯ ಆಟಗಾರರಿಗೆ ತಮಾಷೆ ಮಾಡಬಹುದೆಂದು ನನಗೆ ಖಾತ್ರಿಯಿದೆ ಆದರೆ 19 ವರ್ಷ ವಯಸ್ಸಿನವರಿಂದ ಅದೇ ಪ್ರಬುದ್ಧತೆಯನ್ನು ನಿರೀಕ್ಷಿಸುವುದು ಅನ್ಯಾಯವಾಗಿದೆ ಎಂದು ಆಕಾಶ್ ಚೋಪ್ರಾ ಮನವಿ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications