ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಲು ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ಲೆಜೆಂಡ್ ಕ್ರಿಕೆಟಿಗ

ಭಾನುವಾರ (ಅಕ್ಟೋಬರ್ 23)ರಂದು ನಡೆಯುವ ಮೆಲ್ಬೋರ್ನ್‌ನಲ್ಲಿ ನಡೆಯುವ 2022ರ ಟಿ20 ವಿಶ್ವಕಪ್‌ನ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಎರಡು ದೇಶಗಳ ಕ್ರಿಕೆಟ್ ಅಭಿಮಾನಿಗಳು ಚಾತಕ-ಪಕ್ಷಿಯಂತೆ ಕಾಯುತ್ತಿದ್ದಾರೆ. ಈಗಾಗಲೇ ತಮ್ಮ ತಮ್ಮ ದೇಶಗಳ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ.
ಇದೇ ವೇಳೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕುರಿತು ಮಾತನಾಡಿದ್ದು, 2022ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ದೊಡ್ಡ ಮೊತ್ತವನ್ನು ನೀಡಲು ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಸುಧಾರಿತ ಶಾಟ್ ಆಯ್ಕೆಯನ್ನು ಎತ್ತಿ ತೋರಿಸಿರುವ ಸುನಿಲ್ ಗವಾಸ್ಕರ್ ಅವರು, ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಮೈದಾನಗಳಲ್ಲಿ ಒಂದಾದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತೆರಳಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಸುಧಾರಿತ ಫಾರ್ಮ್ ಅನ್ನು ಉತ್ತಮವಾಗಿ ಬಳಸಿಕೊಳ್ಳಲು ಮಾಜಿ ಕ್ರಿಕೆಟಿಗ ಸಲಹೆ ನೀಡಿದ್ದಾರೆ.

21 ಪಂದ್ಯಗಳಲ್ಲಿ 70ಕ್ಕಿಂತ ಹೆಚ್ಚು ಸರಾಸರಿಯಲ್ಲಿ 847 ರನ್
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸುನಿಲ್ ಗವಾಸ್ಕರ್, "ವಿರಾಟ್ ಕೊಹ್ಲಿ ತುಂಬಾ ಹತಾಶರಾಗುತ್ತಿದ್ದಾರೆ ಮತ್ತು ಏಷ್ಯಾ ಕಪ್‌ಗೆ ಮೊದಲು ಆಡಿದಂತೆ ಆಡಬಾರದೆಂದು ಅಪಾಯಕಾರಿ ಎಸೆತಗಳಿಗೆ ಹೊರಗುಳಿಯುತ್ತಿದ್ದಾರೆ. ಏಷ್ಯಾ ಕಪ್ ಟೂರ್ನಾಮೆಂಟ್‌ನಲ್ಲಿ ವಿರಾಟ್ ಕೊಹ್ಲಿ ಸ್ಥಿರತೆಯತ್ತ ಗಮನ ಹರಿಸುವುದನ್ನು ಮತ್ತು ಶಾಟ್ ಆಯ್ಕೆ ಸುಧಾರಿಸುವುದನ್ನು ನೋಡಲು ನನಗೆ ಸಂತೋಷವಾಗಿದೆ," ಎಂದು ಬ್ಯಾಟಿಂಗ್ ಶ್ರೇಷ್ಠ ಸುನಿಲ್ ಗವಾಸ್ಕರ್ ಹೇಳಿದರು.
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. 21 ಪಂದ್ಯಗಳಲ್ಲಿ 70ಕ್ಕಿಂತ ಹೆಚ್ಚು ಸರಾಸರಿಯಲ್ಲಿ 847 ರನ್ ಗಳಿಸಿದ್ದಾರೆ ಮತ್ತು ಮಾಜಿ ನಾಯಕ ಆಸ್ಟ್ರೇಲಿಯಾದಲ್ಲಿ ಪ್ರಮುಖ ಐಸಿಸಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ.

ಮೊದಲು ಕೊಹ್ಲಿ ಶಾಟ್ ಆಯ್ಕೆಯು ಸ್ವಲ್ಪ ಎಡವಟ್ಟಾಗಿತ್ತು
"ದೊಡ್ಡ ಪಂದ್ಯ ಇದ್ದಾಗ ಸ್ಟಾರ್ ಆಟಗಾರನೊಬ್ಬ ಕೈ ಎತ್ತಿ "ನಾನು ಈ ಯುದ್ಧಕ್ಕೆ ಸಿದ್ಧ ಮತ್ತು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆ' ಎಂದು ಹೇಳುತ್ತಾನೆ. ಏಷ್ಯಾ ಕಪ್‌ನಿಂದ ವಿರಾಟ್ ಕೊಹ್ಲಿಯ ಶಾಟ್ ಆಯ್ಕೆ ಇನ್ನಷ್ಟು ಸುಧಾರಿಸಿದೆ," ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.
"ಅದಕ್ಕೂ ಮೊದಲು ಕೊಹ್ಲಿ ಶಾಟ್ ಆಯ್ಕೆಯು ಸ್ವಲ್ಪ ಎಡವಟ್ಟಾಗಿತ್ತು, ಇದರಿಂದಾಗಿ ಅವರು ಸ್ಥಿರವಾಗಿ ರನ್ ಮಾಡಲು ಸಾಧ್ಯವಾಗಲಿಲ್ಲ. ಅವರು ಹೊರಗೆ ಹೋಗುತ್ತಿದ್ದ ಎಸೆತಗಳನ್ನು ಆಡುತ್ತಿದ್ದರು ಮತ್ತು ಔಟ್ ಆಗುತ್ತಿದ್ದರು. ಆದರೆ ಏಷ್ಯಾಕಪ್ ನಂತರ, ಅವರ ಶಾಟ್ ಆಯ್ಕೆಯು ತುಂಬಾ ಸುಧಾರಿಸಿದೆ, ಯಾವಾಗ ಯಾವ ಶಾಟ್ ಅನ್ನು ಆಡಬೇಕು ಎಂದು ಅವರು ತಿಳಿದಿದ್ದಾರೆ".

ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ಗೆ ಮರಳಿದರು
ಟಿ20 ವಿಶ್ವಕಪ್‌ಗೆ ಮುನ್ನ ವಿರಾಟ್ ಕೊಹ್ಲಿ 4 ಪಂದ್ಯಗಳಲ್ಲಿ ಕೇವಲ 81 ರನ್ ಗಳಿಸಿದ್ದರಿಂದ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನವನ್ನು ಪ್ರಶ್ನಿಸಲಾಗಿದೆ. ಆದಾಗ್ಯೂ, ಯುಎಇಯಲ್ಲಿ ನಡೆದ ಕಾಂಟಿನೆಂಟಲ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ಗೆ ಮರಳಿದರು. ಇದೀಗ ವಿಶ್ವಕಪ್‌ನಲ್ಲಿಯೂ ಅದೇ ಲಯ ಮುಂದುವರೆಸಬೇಕಿದೆ.
ಏಷ್ಯಾ ಕಪ್‌ನಲ್ಲಿ ಕೊಹ್ಲಿ ಅವರು ಎರಡು ಅರ್ಧಶತಕ ಮತ್ತು ಚೊಚ್ಚಲ ಟಿ20 ಶತಕವನ್ನು ಗಳಿಸಿದರು. ಅಫ್ಘಾನಿಸ್ತಾನದ ವಿರುದ್ಧ 66 ಎಸೆತಗಳಲ್ಲಿ 122 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದರು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಸರಣಿಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದರು.
ಇನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ತನ್ನ ಟಿ20 ವಿಶ್ವಕಪ್ 2022ರ ಅಭಿಯಾನವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾನುವಾರ ಮೆಲ್ಬೋರ್ನ್‌ನಲ್ಲಿ ಪ್ರಾರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications