For Quick Alerts
ALLOW NOTIFICATIONS  
For Daily Alerts
 

Legends League Cricket 2023: ಪಂದ್ಯಗಳ ವೇಳಾಪಟ್ಟಿ, ಪೂರ್ಣ ತಂಡಗಳು; ಟಿವಿ, ಲೈವ್ ಸ್ಟ್ರೀಮಿಂಗ್ ವಿವರ

Legends League Cricket 2023: LLC Match Schedule, LLC Full Squads; TV And Live Streaming Details

2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ (ಎಲ್‌ಎಲ್‌ಸಿ 2023) ಆವೃತ್ತಿಯು ಇಂಡಿಯಾ ಮಹಾರಾಜಸ್ ಮತ್ತು ಏಷ್ಯಾ ಲಯನ್ಸ್ ನಡುವಿನ ಮೊದಲ ಪಂದ್ಯದೊಂದಿಗೆ ಶುಕ್ರವಾರ, ಮಾರ್ಚ್ 10ರಂದು ಆರಂಭವಾಗಲಿದೆ. ಕಳೆದ ಬಾರಿಯಂತೆ ಇಂಡಿಯಾ ಮಹಾರಾಜಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜೈಂಟ್ಸ್ ಮೂರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ.

ಗಮನಾರ್ಹ ಸಂಗತಿಯೆಂದರೆ, ಈ ವರ್ಷ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಪಂದ್ಯಾವಳಿಯನ್ನು ಕತಾರ್‌ನ ದೋಹಾದಲ್ಲಿ ಆಯೋಜಿಸಲಾಗಿದ್ದು, ಪಾಕಿಸ್ತಾನದ ಮಾಜಿ ಕ್ರಿಕೆಟಿಗರೂ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಏಷ್ಯಾ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ.

ಭಾರತದ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಇಂಡಿಯಾ ಮಹಾರಾಜಸ್ ತಂಡವನ್ನು ಮುನ್ನಡೆಸಲಿದ್ದು, ವರ್ಲ್ಡ್ ಜೈಂಟ್ಸ್ ತಂಡಕ್ಕೆ ಆಸ್ಟ್ರೇಲಿಯಾದ ಆರೋನ್ ಫಿಂಚ್ ನಾಯಕತ್ವ ವಹಿಸಲಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಗೌತಮ್ ಗಂಭೀರ್ ಮತ್ತು ಶಾಹಿದ್ ಅಫ್ರಿದಿ ಕ್ರಿಕೆಟ್‌ನಲ್ಲಿ ಪರಸ್ಪರ ಎದುರುಬದುರಾಗಲಿದ್ದಾರೆ.

ಇಂಡಿಯಾ ಮಹಾರಾಜಸ್ ತಂಡದಲ್ಲಿ ಮುರಳಿ ವಿಜಯ್, ಇರ್ಫಾನ್ ಪಠಾಣ್, ಸುರೇಶ್ ರೈನಾ, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಎಸ್ ಶ್ರೀಶಾಂತ್ ಸೇರಿದಂತೆ ಹಲವು ಸ್ಟಾರ್ ಆಟಗಾರರ ಹೆಸರನ್ನು ಒಳಗೊಂಡಿದೆ.

Legends League Cricket 2023: LLC Match Schedule, LLC Full Squads; TV And Live Streaming Details

ಏಷ್ಯಾ ಲಯನ್ಸ್ ತಂಡದಲ್ಲಿ ಶಾಹಿದ್ ಅಫ್ರಿದಿ, ಅಬ್ದುಲ್ ರಜಾಕ್, ಮಿಸ್ಬಾ-ಉಲ್-ಹಕ್, ಮೊಹಮ್ಮದ್ ಹಫೀಜ್ ಅವರಂತಹ ಪ್ರಬಲ ಆಟಗಾರರು ಇದ್ದಾರೆ.

ಇತ್ತೀಚೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದ ಆರೋನ್ ಫಿಂಚ್ ವರ್ಲ್ಡ್‌ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರೋನ್ ಫಿಂಚ್ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು. ಕ್ರಿಸ್ ಗೇಲ್, ಹಾಶಿಮ್ ಆಮ್ಲಾ, ರಾಸ್ ಟೇಲರ್, ಶೇನ್ ವ್ಯಾಟ್ಸನ್ ಅವರಂತಹ ಸ್ಟಾರ್ ಆಟಗಾರರು ವರ್ಲ್ಡ್‌ ಜೈಂಟ್ಸ್ ತಂಡದಲ್ಲಿದ್ದಾರೆ.

Legends League Cricket 2023: LLC Match Schedule, LLC Full Squads; TV And Live Streaming Details

ಎಲ್‌ಎಲ್‌ಸಿ 2023 ಸಂಪೂರ್ಣ ವೇಳಾಪಟ್ಟಿ

ಶುಕ್ರವಾರ, ಮಾರ್ಚ್ 10: ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್

ಶನಿವಾರ, ಮಾರ್ಚ್ 11: ವರ್ಲ್ಡ್‌ ಜೈಂಟ್ಸ್ vs ಇಂಡಿಯಾ ಮಹಾರಾಜಸ್

ಸೋಮವಾರ, ಮಾರ್ಚ್ 13: ಏಷ್ಯಾ ಲಯನ್ಸ್ vs ವರ್ಲ್ಡ್ ಜೈಂಟ್ಸ್

ಮಂಗಳವಾರ, ಮಾರ್ಚ್ 14: ಏಷ್ಯಾ ಲಯನ್ಸ್ vs ಇಂಡಿಯಾ ಮಹಾರಾಜಸ್

ಬುಧವಾರ, ಮಾರ್ಚ್ 15: ಇಂಡಿಯಾ ಮಹಾರಾಜಸ್ vs ವರ್ಲ್ಡ್‌ ಜೈಂಟ್ಸ್

ಗುರುವಾರ, ಮಾರ್ಚ್ 16: ವರ್ಲ್ಡ್‌ ಜೈಂಟ್ಸ್ vs ಏಷ್ಯಾ ಲಯನ್ಸ್

ಶನಿವಾರ, ಮಾರ್ಚ್ 18: ಎಲಿಮಿನೇಟರ್ (2ನೇ ಸ್ಥಾನ vs 3ನೇ ಸ್ಥಾನ)

ಸೋಮವಾರ, ಮಾರ್ಚ್ 20: ಫೈನಲ್ (1ನೇ ಸ್ಥಾನ vs ಎಲಿಮಿನೇಟರ್ ವಿಜೇತ ತಂಡ)

LLC 2023 ಸಂಪೂರ್ಣ ತಂಡಗಳು
ವರ್ಲ್ಡ್‌ ಜೈಂಟ್ಸ್ ತಂಡ: ಆರೋನ್ ಫಿಂಚ್ (ನಾಯಕ), ಕ್ರಿಸ್ ಗೇಲ್, ಹಾಶಿಮ್ ಆಮ್ಲಾ, ರಾಸ್ ಟೇಲರ್, ಶೇನ್ ವ್ಯಾಟ್ಸನ್, ಅಲ್ಬಿ ಮೊರ್ಕೆಲ್, ಜಾಕ್ವೆಸ್ ಕಾಲಿಸ್, ಕೆವಿನ್ ಒ'ಬ್ರೇನ್, ಮೋರ್ನೆ ವ್ಯಾನ್ ವೈಕ್, ಬ್ರೆಟ್ ಲೀ, ಮಾಂಟಿ ಪನೇಸರ್, ಲೆಂಡ್ಲ್ ಸಿಮನ್ಸ್, ಪಾಲ್ ಕಾಲಿಂಗ್, ಮೊರ್ನೆ ಮೊರ್ಕೆಲ್.

ಇಂಡಿಯಾ ಮಹಾರಾಜಸ್ ತಂಡ:
ಗೌತಮ್ ಗಂಭೀರ್ (ನಾಯಕ), ಮೊಹಮ್ಮದ್ ಕೈಫ್, ಮುರಳಿ ವಿಜಯ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಮನ್ವಿಂದರ್ ಬಿಸ್ಲಾ, ರಾಬಿನ್ ಉತ್ತಪ್ಪ, ಅಶೋಕ್ ದಿಂಡಾ, ಹರ್ಭಜನ್ ಸಿಂಗ್, ಜೋಗಿಂದರ್ ಶರ್ಮಾ, ಪರ್ವಿಂದರ್ ಅವಾನಾ, ಪ್ರಗ್ಯಾನ್ ಓಜಾ, ಪ್ರವೀಣ್ ಕುಮಾರ್, ಪ್ರವೀಣ್ ತಾಂಬೆ, ಎಸ್ ಶ್ರೀಶಾಂತ್, ಸ್ಟುವರ್ಟ್ ಬಿನ್ನಿ.

ಏಷ್ಯಾ ಲಯನ್ಸ್ ತಂಡ:
ಶಾಹಿದ್ ಅಫ್ರಿದಿ (ನಾಯಕ), ಮುತ್ತಯ್ಯ ಮುರಳೀಧರನ್, ಅಸ್ಗರ್ ಅಫ್ಘಾನ್, ಮಿಸ್ಬಾ-ಉಲ್-ಹಕ್, ರಜಿನ್ ಸಲೇಹ್, ಅಬ್ದುಲ್ ರಜಾಕ್, ಪರಸ್ ಖಡ್ಕಾ, ತಿಸಾರ ಪೆರೇರಾ, ತಿಲಕರತ್ನೆ ದಿಲ್ಶಾನ್, ಉಪುಲ್ ತರಂಗ, ಅಬ್ದುರ್ ರಜಾಕ್, ದಿಲ್ಹರಾ ಫೆರ್ನಾಂಡೋ, ಶೋಹಮ್ ಫರ್ನಾಂಡೋ ಹಫೀಜ್, ಸೊಹೈಲ್ ತನ್ವೀರ್, ಮೊಹಮ್ಮದ್ ಅಮೀರ್.

LLC 2023 ಟಿವಿ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್
ಲೆಜೆಂಡ್ ಲೀಗ್ ಕ್ರಿಕೆಟ್ ಪಂದ್ಯಗಳು ಡಿಸ್ನಿ + ಹಾಟ್‌ಸ್ಟಾರ್ ಮತ್ತು ಫ್ಯಾನ್‌ಕೋಡ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ.

ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳು ಟಿವಿ ನೇರಪ್ರಸಾರ ಮಾಡಲಿವೆ. ಬ್ರಿಟನ್‌ನಲ್ಲಿ ಲೆಜೆಂಡ್ ಲೀಗ್ ಕ್ರಿಕೆಟ್ ಪಂದ್ಯಗಳನ್ನು Psyched4 ಡಿಜಿಟಲ್ ಸ್ಟ್ರೀಮಿಂಗ್‌ನಲ್ಲಿ ವೀಕ್ಷಿಸಬಹುದು. ಇನ್ನು ಆಸ್ಟ್ರೇಲಿಯಾದಲ್ಲಿ ಫಾಕ್ಸ್ ಕ್ರಿಕೆಟ್ ಲೆಜೆಂಡ್ ಲೀಗ್‌ನ ಅಧಿಕೃತ ಪ್ರಸಾರಕವಾಗಿದೆ.

Story first published: Thursday, March 9, 2023, 17:54 [IST]
Other articles published on Mar 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+