Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LLC 2023: ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್ ಟಾಸ್ ವರದಿ, ಆಡುವ 11ರ ಬಳಗ, ಲೈವ್ ಸ್ಕೋರ್

Legends League Cricket: India Maharajas vs Asia Lions Toss Report Match, Playing 11 And Live Score

ಮಂಗಳವಾರ, ಮಾರ್ಚ್ 14ರಂದು ಕತಾರ್‌ನ ದೋಹಾದಲ್ಲಿರುವ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಮಾಸ್ಟರ್ಸ್‌ನ ಮೂರನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಇಂಡಿಯಾ ಮಹಾರಾಜಸ್ ಮತ್ತು ಏಷ್ಯಾ ಲಯನ್ಸ್ ತಂಡಗಳು ಎರಡನೇ ಬಾರಿಗೆ ಸೆಣಸಾಡುತ್ತಿವೆ.

ಟಾಸ್ ಗೆದ್ದ ಇಂಡಿಯಾ ಮಹಾರಾಜಸ್ ನಾಯಕ ಗೌತಮ್ ಗಂಭೀರ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದು, ಹೀಗಾಗಿ ಮಿಸ್ಬಾ-ಉಲ್-ಹಕ್ ನಾಯಕತ್ವದ ಏಷ್ಯಾ ಲಯನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ಶುಕ್ರವಾರ, ಮಾರ್ಚ್ 10ರಂದು ನಡೆದ ಉದ್ಘಾಟನಾ ಪಂದ್ಯದಲ್ಲಿ ಶಾಹಿದ್ ಅಫ್ರಿದಿ ನಾಯಕತ್ವದ ಏಷ್ಯಾ ಲಯನ್ಸ್ ತಂಡವು ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ತಂಡವನ್ನು 9 ರನ್‌ಗಳಿಂದ ಸೋಲಿಸಿತ್ತು.

ಇನ್ನು ಇಂಡಿಯಾ ಮಹಾರಾಜಸ್ ತಂಡ ಆಡಿದ ಎರಡೂ ಪಂದ್ಯಗಳನ್ನು ಸೋತಿದ್ದರೆ, ಏಷ್ಯಾ ಲಯನ್ಸ್ ತಂಡವು ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಆರೋನ್ ಫಿಂಚ್ ನಾಯಕತ್ವದ ವರ್ಲ್ಡ್ ಜೈಂಟ್ಸ್ ತಂಡ ಇಂಡಿಯಾ ಮಹಾರಾಜಸ್ ವಿರುದ್ಧ ಗೆದ್ದು, ಏಷ್ಯಾ ಲಯನ್ಸ್ ತಂಡದ ವಿರುದ್ಧ ಸೋತಿದೆ.

Legends League Cricket: India Maharajas vs Asia Lions Toss Report Match, Playing 11 And Live Score

ಇದೀಗ ಗೌತಮ್ ಗಂಭೀರ್ ಪಡೆ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದರೆ, ಶಾಹಿದ್ ಅಫ್ರಿದಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿರುವ ಮಿಸ್ಬಾ-ಉಲ್-ಹಕ್ ತಂಡಕ್ಕೆ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಲು ಎದುರು ನೋಡುತ್ತಿದೆ.

LLC 2023 ಟಿವಿ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್
ಲೆಜೆಂಡ್ ಲೀಗ್ ಕ್ರಿಕೆಟ್ ಪಂದ್ಯಗಳು ಡಿಸ್ನಿ + ಹಾಟ್‌ಸ್ಟಾರ್ ಮತ್ತು ಫ್ಯಾನ್‌ಕೋಡ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ. ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳು ಟಿವಿ ನೇರಪ್ರಸಾರ ಮಾಡಲಿವೆ.

ಬ್ರಿಟನ್‌ನಲ್ಲಿ ಲೆಜೆಂಡ್ ಲೀಗ್ ಕ್ರಿಕೆಟ್ ಪಂದ್ಯಗಳನ್ನು Psyched4 ಡಿಜಿಟಲ್ ಸ್ಟ್ರೀಮಿಂಗ್‌ನಲ್ಲಿ ವೀಕ್ಷಿಸಬಹುದು. ಇನ್ನು ಆಸ್ಟ್ರೇಲಿಯಾದಲ್ಲಿ ಫಾಕ್ಸ್ ಕ್ರಿಕೆಟ್ ಲೆಜೆಂಡ್ ಲೀಗ್‌ನ ಅಧಿಕೃತ ಪ್ರಸಾರಕವಾಗಿದೆ.

ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್ ಆಡುವ 11ರ ಬಳಗ
ಇಂಡಿಯಾ ಮಹಾರಾಜಸ್: ಗೌತಮ್ ಗಂಭೀರ್ (ನಾಯಕ), ಮೊಹಮ್ಮದ್ ಕೈಫ್, ಮನ್ವಿಂದರ್ ಬಿಸ್ಲಾ, ಸುರೇಶ್ ರೈನಾ, ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಅಶೋಕ್ ದಿಂಡಾ, ಪ್ರವೀಣ್ ತಾಂಬೆ.

ಏಷ್ಯಾ ಲಯನ್ಸ್: ತಿಲಕರತ್ನೆ ದಿಲ್ಶನ್, ಉಪುಲ್ ತರಂಗ (ವಿಕೆಟ್ ಕೀಪರ್), ಮಿಸ್ಬಾ-ಉಲ್-ಹಕ್ (ನಾಯಕ), ಪರಸ್ ಖಡ್ಕಾ, ಅಸ್ಗರ್ ಅಫ್ಘಾನ್, ಇಸುರ್ ಉದಾನಾ, ಅಬ್ದುಲ್ ರಜಾಕ್, ತಿಸಾರಾ ಪೆರೇರಾ, ಅಬ್ದುಲ್ ರಜಾಕ್, ಅಬ್ದುರ್ ರಜಾಕ್, ಸೊಹೈಲ್ ತನ್ವೀರ್, ಶೊಯೆಬ್ ಅಖ್ತರ್.

Story first published: Tuesday, March 14, 2023, 19:42 [IST]
Other articles published on Mar 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+