Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Lionel Messi: ಹ್ಯಾಟ್ರಿಕ್‌ ಗೋಲು ಬಾರಿಸಿದ ಮೆಸ್ಸಿ; ದಾಖಲೆ ಬರೆದ ಸೂಪರ್ ಸ್ಟಾರ್

ವಿಶ್ವ ಫುಟ್ಬಾಲ್‌ ಲೋಕದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಕಣಕ್ಕೆ ಇಳಿಯುತ್ತಿದ್ದಂತೆ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. 23ನೇ ಆವೃತ್ತಿಯ ಫಿಫಾ ವಿಶ್ವಕಪ್ನಲ್ಲಿ ಅರ್ಜೆಂಟೀನಾ ಹಾಗೂ ಅಲ್ಜೀರಿಯಾ ತಂಡಗಳು 'ಜೆ' ಗುಂಪಿನಲ್ಲಿ ಕಾದಾಟ ನಡೆಸಿದವು. ಈ ವಿಶ್ವಕಪ್‌ನ ಮೊದಲ ಪಂದ್ಯವನ್ನು ಆಡಿದ ಅರ್ಜೆಂಟೀನಾ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಹ್ಯಾಟ್ರಿಕ್‌ ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ಮೆಸ್ಸಿ ಮೂರು ಗೋಲು ಬಾರಿಸುತ್ತಿದ್ದಂತೆ ಇತಿಹಾಸ ಬರೆದಿದ್ದಾರೆ.

ಅಲ್ಜೇರಿಯಾ ವಿರುದ್ಧದ ಪಂದ್ಯದಲ್ಲಿ ಲಿಯೋನೆಲ್‌ ಮೆಸ್ಸಿ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿ ಗಮನ ಸೆಳೆದರು. ಪಂದ್ಯದ ಆರಂಭದಿಂದಲೂ ಮೆಸ್ಸಿ ತಮ್ಮ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದರು. ಪಂದ್ಯದ 17ನೇ ನಿಮಿಷದಲ್ಲಿ ಮೆಸ್ಸಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಪರಿಣಾಮ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು. ಸಹ ಆಟಗಾರ ನೀಡಿದ ಪಾಸ್‌ನ್ನು ಪಡೆದ ಮೆಸ್ಸಿ ಚೆಂಡಿನ ಮೇಲೆ ಹಿಡಿತ ಸಾಧಿಸಿ ಡಿ ಕ್ಷೇತ್ರದತ್ತ ಚೆಂಡನ್ನು ತಂದು, ಅಲ್ಲಿಂದ ಅಮೋಘ ಗೋಲು ಬಾರಿಸಿ ತಂಡಕ್ಕೆ ಆಧಾರವಾದರು.

Lionel Messi

ಮೊದಲಾವಧಿಯ ಆರಂಭದಲ್ಲಿ ಅರ್ಜೆಂಟೀನಾ ಪರ ಮೆಸ್ಸಿ ಒಂದು ಗೋಲು ಬಾರಿಸಿದ್ದರು. ಆದರೆ ಅದು ಫಾಲ್‌ ಆಗಿತ್ತು. ಹಾಗೇಯೆ ಅಲ್ಜೆರಿಯಾ ತಂಡದ ಪರವೂ ಒಂದು ಫಾಲ್‌ ಗೋಲ್ ಆಯಿತು. ಪರಿಣಾಮ ಮೊದಲಾವಧಿಯಲ್ಲಿ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು.

ಮೆಸ್ಸಿ ಕಮಾಲ್‌

ಎರಡನೇ ಅವಧಿಯ ಆರಂಭದಿಂದಲೂ ಅರ್ಜೆಂಟೀನಾ ಭರ್ಜರಿ ಪ್ರದರ್ಶನ ನೀಡಿ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಪಂದ್ಯದ 60ನೇ ನಿಮಿಷದಲ್ಲಿ ಅರ್ಜೆಂಟೀನಾ ತಂಡಕ್ಕೆ ಮತ್ತೊಂದು ಗೋಲು ಬಾರಿಸುವ ಅವಕಾಶ ಲಭಿಸಿತು. ಈ ಸಮಯದಲ್ಲಿ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಚೆಂಡಿನ ಮೇಲೆ ಹಿಡಿತ ಸಾಧಿಸಿ ಚೆಂಡನ್ನು ಗೋಲು ಪೆಟ್ಟಿಗೆಯ ಬಳಿ ನೂಕಿದರು. ಆದರೆ ಚೆಂಡು ಗೋಲ್‌ ಕೀಪರ್ ಅವರ ಕೈಗೆ ಬಡಿದು ಮುಂದೆ ಸಾಗಿತು. ಆಗ ಅಲ್ಲಿಯೇ ಹೊಂಚು ಹಾಕಿಕೊಂಡು ಕುಳಿತಿದ್ದ ಮೆಸ್ಸಿ ಸುಲಭ ಗೋಲು ಬಾರಿಸಿ ತಂಡದ ಮುನ್ನಡೆಯನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು.

Messi vs Ronaldo: ಶತಕೋಟಿಗಳ ಒಡೆಯರಿಗೆ ಇದು ಲಾಸ್ಟ್‌ ಚಾನ್ಸ್‌

Messi vs Ronaldo: ಶತಕೋಟಿಗಳ ಒಡೆಯರಿಗೆ ಇದು ಲಾಸ್ಟ್‌ ಚಾನ್ಸ್‌

ಮೆಸ್ಸಿ ಇದೇ ಅವಧಿಯಲ್ಲಿ ಮತ್ತೊಮ್ಮೆ ಗೋಲು ಬಾರಿಸುವ ಪ್ರಯತ್ನವನ್ನು ಮಾಡಿದರು. ಆದರೆ ಚೆಂಡು ಅಲ್ಜೇರಿಯಾದ ಗೋಲ್ ಕೀಪರ್ ಅವರ ಕೈ ತಾಕಿ ಸೇವ್ ಆಯಿತು.

ಮೆಸ್ಸಿ ಹ್ಯಾಟ್ರಿಕ್ ಗೋಲು

ಪಂದ್ಯದ 76ನೇ ನಿಮಿಷದಲ್ಲಿ ಗೋಲು ಪೆಟ್ಟಿಗೆಯ ಬಲಭಾಗದಿಂದ ಸಹ ಆಟಗಾರ ನೀಡಿದ ಪಾಸ್‌ನ ಲಾಭ ಪಡೆದ ಮೆಸ್ಸಿ ಅಬ್ಬರಿಸಿದರು. ಇವರು ಚೆಂಡಿನ ಮೇಲೆ ಹಿಡಿತ ಸಾಧಿಸಿ ಡಿ ಕ್ಷೇತ್ರದ ಪಕ್ಕದಿಂದಲೇ ಎಡಗಾಲಿನಿಂದ ಚೆಂಡಿಗೆ ಗೋಲು ಪೆಟ್ಟಿಗೆಗೆ ನೂಕುವಲ್ಲಿ ಸಫಲರಾದರು. ಇವರು ಬಾರಿಸಿದ ಚೆಂಡು ಗೋಲು ಪೆಟ್ಟಿಗೆಯ ಮುಂದೆ ನಿಂತಿದ್ದ ಇಬ್ಬರು ರಕ್ಷಣಾ ಆಟಗಾರರು ಹಾಗೂ ಗೋಲಿಯನ್ನು ವಂಚಿಸುವಲ್ಲಿ ಸಫಲವಾಯಿತು. ಕಾನ್ಸಾಸ್ ಸಿಟಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.

FIFA World Cup: ಮೆಸ್ಸಿ ಕಣ್ಣು ನೆಟ್ಟಿರುವ ಟಾಪ್‌ 5 ದಾಖಲೆಗಳು

FIFA World Cup: ಮೆಸ್ಸಿ ಕಣ್ಣು ನೆಟ್ಟಿರುವ ಟಾಪ್‌ 5 ದಾಖಲೆಗಳು

ವೃತ್ತಿ ಜೀವನದ ಆರನೇ ವಿಶ್ವಕಪ್ ಆಡುತ್ತಿರುವ ಮೆಸ್ಸಿ ಕಮಾಲ್‌ ಮಾಡಿದರು. ಈ ವಿಶ್ವಕಪ್‌ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿ ಅಬ್ಬರಿಸಿದರು. ಈ ಮೂಲಕ ಅರ್ಜೆಂಟೀನಾ ಸುಲಭ ಜಯ ದಾಖಲಿಸುವಲ್ಲಿ ದೊಡ್ಡ ಕಾಣಿಕೆ ನೀಡಿದರು. ಈ ಮೂರು ಗೋಲುಗಳ ಮೂಲಕ ಮೆಸ್ಸಿ ಜರ್ಮನಿಯ ಮಿರಾಸ್ಲೋವಾ ಕ್ಲೋಸ್ ಅವರ 16 ಗೋಲು ದಾಖಲೆಯ ಸಮಕ್ಕೆ ನಿಂತರು. ಇನ್ನೊಂದು ಗೋಲನ್ನು ಮೆಸ್ಸಿ ಬಾರಿಸಿದರೆ ವಿಶ್ವದಾಖಲೆ ನಿರ್ಮಾಣವಾಗಲಿದೆ.

ಫ್ರಾನ್ಸ್‌ಗೆ 3-1 ಗೋಲುಗಳ ಜಯ

ಇನ್ನು ಐ ಗುಂಪಿನ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಫ್ರಾನ್ಸ್ ತಂಡವು ಬಲಿಷ್ಠ ಸೆನೆಗಲ್ ವಿರುದ್ಧ 3-1 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಈ ರೋಮಾಂಚಕಾರಿ ಪಂದ್ಯದ ಮೊದಲಾರ್ಧದಲ್ಲಿ ಸೆನೆಗಲ್ ತಂಡವು ಫ್ರಾನ್ಸ್‌ಗೆ ತೀವ್ರ ಪೈಪೋಟಿ ನೀಡಿ ಯಾವುದೇ ಗೋಲು ಬಾರದಂತೆ ತಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪಂದ್ಯದ ಚಿತ್ರಣ ಬದಲಾಯಿತು. ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಪ್ಪೆ 66ನೇ ನಿಮಿಷ ಹಾಗೂ ಹೆಚ್ಚುವರಿ ಸಮಯದಲ್ಲಿ ಗೋಲು ಬಾರಿಸಿ ಮಿಂಚಿದರು. ಇನ್ನು ಬ್ರಾಡ್ಲಿ ಬಾರ್ಕೋಲಾ ಸಹ ಗೋಲು ಬಾರಿಸಿದರು. ಸೆನೆಗಲ್ ತಂಡದ ಯುವ ಆಟಗಾರ ಇಬ್ರಾಹಿಂ ಎಂಬಾಯೆ ಒಂದು ಗೋಲು ಹೊಡೆದು ಹಿನ್ನಡೆಯನ್ನು ತಗ್ಗಿಸಿದರಾದರು.

Story first published: Wednesday, June 17, 2026, 9:02 [IST]
Other articles published on Jun 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+