Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

25 ವರ್ಷ ವಯಸ್ಸಾಗುವ ಮುನ್ನ 'ಸೆನಾ' ದೇಶಗಳಲ್ಲಿ ಅತಿಹೆಚ್ಚು ರನ್ ಕಲೆಹಾಕಿರುವುದು ಪಂತ್ ಅಲ್ಲ ಆ ಕ್ರಿಕೆಟಿಗ!

List of Asian batsmen who scored most runs in SENA countries before 25 age

'ಸೆನಾ' ದೇಶಗಳು ಅಂದರೆ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ. ಈ 4 ದೇಶಗಳನ್ನು ಒಟ್ಟಾರೆಯಾಗಿ ಸೆನಾ ದೇಶಗಳು ಎಂದು ಕರೆಯಲಾಗುತ್ತದೆ. ಈ ಸೆನಾ ದೇಶಗಳ ಪಿಚ್‌ಗಳಲ್ಲಿ ರನ್ ಗಳಿಸುವುದು ತೀರಾ ಕಷ್ಟದ ಕೆಲಸ ಎಂಬ ಅಭಿಪ್ರಾಯ ದೊಡ್ಡ ಮಟ್ಟದಲ್ಲಿದೆ. ಅದರಲ್ಲಿಯೂ ಏಷ್ಯಾ ಖಂಡದ ಆಟಗಾರರಿಗೆ ಈ ಸೆನಾ ದೇಶಗಳ ಪಿಚ್‌ಗೆ ಹೊಂದಿಕೊಂಡು ಬ್ಯಾಟ್ ಬೀಸುವುದು ಸವಾಲೇ ಸರಿ.

ಹೀಗೆ ಕ್ರಿಕೆಟ್ ಆಟಗಾರರಲ್ಲಿ ಮತ್ತು ಕ್ರಿಕೆಟ್ ಅಭಿಮಾನಿಗಳಲ್ಲಿ ಬಲು ಕಠಿಣ ಎಂಬ ಭಾವನೆಯನ್ನು ಮೂಡಿಸುವಂಥ ಈ ಸೆನಾ ದೇಶಗಳ ಕ್ರೀಡಾಂಗಣಗಳಲ್ಲಿ ರನ್ ಗಳಿಸುವುದು ಅಷ್ಟೇನೂ ಕಷ್ಟವಲ್ಲ ಹಾಗೂ ಶತಕ ಬಾರಿಸುವುದು ಸುಲಭ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ತೋರಿಸಿಕೊಟ್ಟದ್ದು ರಿಷಭ್ ಪಂತ್. ಹೌದು, ರಿಷಭ್ ಪಂತ್ ಪ್ರಸ್ತುತ ಇಂಗ್ಲೆಂಡ್ ದೇಶದ ಎಡ್ಜ್ ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವುದರ ಮೂಲಕ ತಮ್ಮ ನಾಲ್ಕನೇ ಸೆನಾ ಶತಕವನ್ನು ದಾಖಲಿಸಿದರು.

ಹೀಗೆ ರಿಷಭ್ ಪಂತ್ ಎಡ್ಜ್ ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಯರಹಿತ ಶತಕ ಬಾರಿಸಿದ್ದು ಸದ್ಯ ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಚರ್ಚೆಯ ವಿಷಯವಾಗಿದೆ. 24 ವರ್ಷದ ಪಂತ್ ಕಿರಿಯ ವಯಸ್ಸಿನಲ್ಲಿಯೇ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಿಷಭ್ ಪಂತ್ ಅವರ ವಯಸ್ಸಿನಲ್ಲಿ ಈ ಹಿಂದೆ ಟೀಮ್ ಇಂಡಿಯಾದ ಮತ್ತೋರ್ವ ಕ್ರಿಕೆಟಿಗ ಸೆನಾ ದೇಶಗಳ ಪಿಚ್‌ನಲ್ಲಿ ರಿಷಬ್ ಪಂತ್ ಅವರಿಗಿಂತ ಹೆಚ್ಚಿನ ಮಟ್ಟದಲ್ಲಿ ರನ್ ಗಳಿಸಿದ್ದ ವಿಚಾರ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಿಷಭ್ ಪಂತ್ ಅವರನ್ನು ಸೆನಾ ದೇಶಗಳಲ್ಲಿ ಮೀರಿಸಿದ್ದ ಭಾರತದ ಆ ಕ್ರಿಕೆಟಿಗ ಯಾರು ಎಂಬುದರ ಕುರಿತಾದ ಪಟ್ಟಿ ಮುಂದೆ ಇದೆ ಓದಿ.

25 ವರ್ಷಕ್ಕೂ ಮುನ್ನ ಸೆನಾ ದೇಶಗಳಲ್ಲಿ ಹೆಚ್ಚು ರನ್ ಬಾರಿಸಿದ ಏಷ್ಯಾ ಕ್ರಿಕೆಟಿಗ

25 ವರ್ಷಕ್ಕೂ ಮುನ್ನ ಸೆನಾ ದೇಶಗಳಲ್ಲಿ ಹೆಚ್ಚು ರನ್ ಬಾರಿಸಿದ ಏಷ್ಯಾ ಕ್ರಿಕೆಟಿಗ

25 ವರ್ಷ ವಯಸ್ಸಾಗುವುದಕ್ಕೂ ಮುನ್ನ ಸೆನಾ ದೇಶಗಳಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿರುವ ಏಷ್ಯಾ ಕ್ರಿಕೆಟಿಗರ ಟಾಪ್ 3 ಪಟ್ಟಿ ಈ ಕೆಳಕಂಡಂತಿದೆ.

1. ಸಚಿನ್ ತೆಂಡೂಲ್ಕರ್ - 1882 ರನ್

2. ರಿಷಭ್ ಪಂತ್ - 1381 ರನ್

3. ಜಾವೇದ್ ಮಿಯಾಂದಾದ್ - 1088 ರನ್

ಈ ಮೂಲಕ ಸೆನಾ ದೇಶಗಳಲ್ಲಿ 25 ವರ್ಷಕ್ಕೂ ಮುನ್ನ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿದ ಏಷ್ಯಾ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನ ಪಡೆದುಕೊಂಡಿದ್ದರೆ, ಪಂತ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವೇಗವಾಗಿ 2000 ಟೆಸ್ಟ್ ರನ್ ಬಾರಿಸಿದ ವಿಕೆಟ್‌ ಕೀಪರ್ ಪಂತ್

ವೇಗವಾಗಿ 2000 ಟೆಸ್ಟ್ ರನ್ ಬಾರಿಸಿದ ವಿಕೆಟ್‌ ಕೀಪರ್ ಪಂತ್

ಇನ್ನು ರಿಷಭ್ ಪಂತ್ ಈ ಪಂದ್ಯದ ಮೂಲಕ 2000 ಟೆಸ್ಟ್ ರನ್ ಮೈಲಿಗಲ್ಲನ್ನು ಮುಟ್ಟಿದ್ದು, ವೇಗವಾಗಿ 2000 ಟೆಸ್ಟ್ ರನ್ ಕಲೆಹಾಕಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. 24 ಹರೆಯದರಲ್ಲೇ ರಿಷಭ್ ಪಂತ್ 2000 ಟೆಸ್ಟ್ ರನ್ ಪೂರೈಸಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.

100 ಸಿಕ್ಸರ್ ಬಾರಿಸಿದ ಭಾರತದ ಕಿರಿಯ ಕ್ರಿಕೆಟಿಗ

100 ಸಿಕ್ಸರ್ ಬಾರಿಸಿದ ಭಾರತದ ಕಿರಿಯ ಕ್ರಿಕೆಟಿಗ

ಈ ಪಂದ್ಯದ ಮೂಲಕ ರಿಷಭ್ ಪಂತ್ ನಿರ್ಮಿಸಿರುವ ಮತ್ತೊಂದು ದಾಖಲೆ ಎಂದರೆ 100 ಅಂತರರಾಷ್ಟ್ರೀಯ ಸಿಕ್ಸರ್ ಪೂರೈಸಿದ ಕಿರಿಯ ಭಾರತೀಯ ಕ್ರಿಕೆಟಿಗ ಎಂಬುದು. ಹೌದು 24 ವರ್ಷಕ್ಕೆ 100 ಅಂತರರಾಷ್ಟ್ರೀಯ ಸಿಕ್ಸರ್ ಪೂರೈಸಿದ ಪ್ರಥಮ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ.

Story first published: Monday, July 4, 2022, 17:08 [IST]
Other articles published on Jul 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+