ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2022ರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿರುವ ಟಾಪ್ 4 ಬ್ಯಾಟ್ಸ್‌ಮನ್‌ಗಳಿವರು; ಯಾರು ನಂಬರ್ 1?

List of batsmen who have scored most test centuries in 2022 so far

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿ ಮುಕ್ತಾಯವಾದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಮತ್ತೆ ಆರಂಭವಾಗಿದ್ದು, ಈ ಪೈಕಿ ಟೆಸ್ಟ್ ಪಂದ್ಯಗಳು ಕೂಡ ಗರಿಗೆದರಿವೆ. ಒಂದೆಡೆ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಟೆಸ್ಟ್ ಸರಣಿ ನಡೆದರೆ, ಮತ್ತೊಂದೆಡೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸಿದೆ.

ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಜತೆ ಅರ್ಜುನ್ ತೆಂಡೂಲ್ಕರ್ ಡೇಟಿಂಗ್; ವೈರಲ್ ಆದ್ವು ಫೋಟೋಸ್!ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಜತೆ ಅರ್ಜುನ್ ತೆಂಡೂಲ್ಕರ್ ಡೇಟಿಂಗ್; ವೈರಲ್ ಆದ್ವು ಫೋಟೋಸ್!

ಇನ್ನು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ನ್ಯೂಜಿಲೆಂಡ್ ಎಲ್ಲಾ 3 ಪಂದ್ಯಗಳಲ್ಲಿಯೂ ಹೀನಾಯವಾಗಿ ಸೋಲುಂಡು ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿ ತವರಿಗೆ ವಾಪಸ್ ಆಗಿದೆ. ಲಂಡನ್‌ನ ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್‍ಗಳ ಗೆಲುವನ್ನು ದಾಖಲಿಸಿತು ಹಾಗೂ ನಾಟಿಂಗ್ ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೂ ಇಂಗ್ಲೆಂಡ್ 5 ವಿಕೆಟ್‍ಗಳ ಜಯವನ್ನು ದಾಖಲಿಸಿತು ಹಾಗೂ ತೃತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್‍ಗಳ ಭರ್ಜರಿ ಜಯವನ್ನು ದಾಖಲಿಸಿತು.

ಇಯಾನ್ ಮಾರ್ಗನ್ ನಿವೃತ್ತಿ: ಇಲ್ಲಿವೆ ಮಾರ್ಗನ್ ಹೆಸರಿನಲ್ಲಿರುವ ಕ್ರಿಕೆಟ್ ದಾಖಲೆಗಳ ಪಟ್ಟಿಇಯಾನ್ ಮಾರ್ಗನ್ ನಿವೃತ್ತಿ: ಇಲ್ಲಿವೆ ಮಾರ್ಗನ್ ಹೆಸರಿನಲ್ಲಿರುವ ಕ್ರಿಕೆಟ್ ದಾಖಲೆಗಳ ಪಟ್ಟಿ

ಈ ಸರಣಿಯೊಂದರಲ್ಲಿಯೇ 3 ಆಕರ್ಷಕ ಶತಕಗಳನ್ನು ಸಿಡಿಸಿದ ಜೋ ರೂಟ್ ಎದುರಾಳಿ ನ್ಯೂಜಿಲೆಂಡ್ ತಂಡದ ಪರ ಮಿಂಚಿದ ಡೆರಿಲ್ ಮಿಚೆಲ್ ಜೊತೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಂಡರು. ಇಂಗ್ಲೆಂಡ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಜಾನಿ ಬೈರ್ ಸ್ಟೋ ಕೂಡ 2 ಶತಕಗಳನ್ನು ಈ ಸರಣಿಯಲ್ಲಿ ಚಚ್ಚಿದರು. ಹೀಗೆ ಈ ಟೆಸ್ಟ್ ಸರಣಿಯಲ್ಲಿ ಹಲವಾರು ಶತಕಗಳು ಹರಿದುಬಂದಿದ್ದು, 2022ರಲ್ಲಿ ಯಾವ ಆಟಗಾರರು ಹೆಚ್ಚು ಟೆಸ್ಟ್ ಶತಕ ಬಾರಿಸಿದ್ದಾರೆ ಎಂಬುದರ ಕುರಿತಾದ ಪಟ್ಟಿ ಕೆಳಕಂಡಂತಿದೆ.

2022ರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದವರು

2022ರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದವರು

2022ನೇ ಸಾಲಿನಲ್ಲಿ ಇಲ್ಲಿಯವರೆಗೂ ಅತಿ ಹೆಚ್ಚು ಟೆಸ್ಟ್ ಶತಕ ದಾಖಲಿಸಿರುವ ಆಟಗಾರರ ಟಾಪ್ 4 ಪಟ್ಟಿ ಈ ಕೆಳಕಂಡಂತಿದೆ

1. ಜೋ ರೂಟ್ - ಇಂಗ್ಲೆಂಡ್ - 4 ಶತಕಗಳು

2. ಉಸ್ಮಾನ್ ಖವಾಜಾ - ಆಸ್ಟ್ರೇಲಿಯಾ - 4 ಶತಕಗಳು

3. ಜಾನಿ ಬೈರ್ ಸ್ಟೋವ್ - ಇಂಗ್ಲೆಂಡ್ - 4 ಶತಕಗಳು

4. ಡೆರಿಲ್ ಮಿಚೆಲ್ - ನ್ಯೂಜಿಲೆಂಡ್‌ - 3 ಶತಕಗಳು

ಹೆಚ್ಚು ಅರ್ಧ ಶತಕ ಬಾರಿಸಿದವರು

ಹೆಚ್ಚು ಅರ್ಧ ಶತಕ ಬಾರಿಸಿದವರು

ಇನ್ನು 2022ರಲ್ಲಿ ಇಲ್ಲಿಯವರೆಗೂ ಅತಿಹೆಚ್ಚು ಟೆಸ್ಟ್ ಅರ್ಧಶತಕ ಬಾರಿಸಿದ ಆಟಗಾರ ಎನಿಸಿಕೊಂಡಿರುವುದು ನ್ಯೂಜಿಲೆಂಡ್‌ ತಂಡದ ಟಾಮ್ ಬ್ಲಂಡೆಲ್. ಟಾಮ್ ಬ್ಲಂಡೆಲ್ ಈ ವರ್ಷ ಒಟ್ಟು 5 ಟೆಸ್ಟ್ ಅರ್ಧಶತಕಗಳನ್ನು ಬಾರಿಸಿದ್ದಾರೆ ಹಾಗೂ 1 ಟೆಸ್ಟ್ ಶತಕ ದಾಖಲಿಸಿದ್ದಾರೆ.

ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದರು

ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದರು

ಈ ವರ್ಷ ಇಲ್ಲಿಯವರೆಗೂ ನಡೆದಿರುವ ಟೆಸ್ಟ್ ಪಂದ್ಯಗಳ ಪೈಕಿ ಅತಿ ಹೆಚ್ಚು ರನ್ ಕಲೆಹಾಕಿರುವ ಆಟಗಾರರ ಟಾಪ್ 5 ಪಟ್ಟಿ ಕೆಳಕಂಡಂತಿದೆ

1. ಜಾನಿ ಬೈರ್ ಸ್ಟೋ - ಇಂಗ್ಲೆಂಡ್ - 774 ರನ್‌ಗಳು

2. ಜೋ ರೂಟ್ - ಇಂಗ್ಲೆಂಡ್ - 754 ರನ್‌ಗಳು

3. ಉಸ್ಮಾನ್ ಖವಾಜ - ಆಸ್ಪ್ರೇಲಿಯಾ - 751 ರನ್‌ಗಳು

4. ಲಿಟನ್ ದಾಸ್ - ಬಾಂಗ್ಲಾದೇಶ - 659 ರನ್‌ಗಳು

5. ಡೆರಿಲ್ ಮಿಚೆಲ್ - ನ್ಯೂಜಿಲೆಂಡ್‌ - 641 ರನ್‌ಗಳು

Story first published: Tuesday, June 28, 2022, 23:57 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X