ಟಿ20 ಪಂದ್ಯಗಳ ಡೆತ್ ಓವರ್‌ಗಳಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಆಟಗಾರರಲ್ಲಿ ಈ ಭಾರತೀಯನೇ ಟಾಪ್

ಟಿ ಟ್ವೆಂಟಿ ಕ್ರಿಕೆಟ್, ಈ ಮಾದರಿಯ ಕ್ರಿಕೆಟ್ ಪರಿಚಯವಾದ ನಂತರ ಕ್ರೀಡಾಂಗಣದಲ್ಲಿ ರನ್ ಹೊಳೆ ಯಥೇಚ್ಚವಾಗಿ ಹರಿಯಲು ಆರಂಭಿಸಿತು ಎಂದರೆ ತಪ್ಪಾಗಲಾರದು. 2005ರಲ್ಲಿ ಮೊದಲ ಬಾರಿಗೆ ಪುರುಷರ ಕ್ರಿಕೆಟ್‍ನಲ್ಲಿ ಈ ಮಾದರಿಯ ಪಂದ್ಯವನ್ನು ಆಡಿಸಲಾಯಿತು. ಅಂದು ಪ್ರೇಕ್ಷಕರ ಮನಗೆದ್ದ ಈ ಚುಟುಕು ಕ್ರಿಕೆಟ್ ಮಾದರಿ ಇಂದು ದೈತ್ಯವಾಗಿ ಬೆಳೆದು ಜನಪ್ರಿಯ ಕ್ರಿಕೆಟ್ ಮಾದರಿಯಾಗಿ ದೊಡ್ಡ ಮಟ್ಟದ ಖ್ಯಾತಿ ಪಡೆದಿದೆ.
ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳು ಮಾತ್ರವಲ್ಲದೇ ವಿವಿಧ ದೇಶಗಳಲ್ಲಿ ಟಿ ಟ್ವೆಂಟಿ ಮಾದರಿಯಡಿಯಲ್ಲಿ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳು ದೊಡ್ಡ ಮಟ್ಟದಲ್ಲಿ ಆಯೋಜನೆಯಾಗುತ್ತಿವೆ. ಮೊದಲಿಗೆ ಭಾರತದ ನೆಲದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ಸು ಕಂಡ ನಂತರ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ಮುಂತಾದ ದೇಶಗಳು ಟಿಟ್ವೆಂಟಿ ಮಾದರಿಯಡಿಯಲ್ಲಿ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲು ಮುಂದಾದವು.
ಹೀಗೆ ಟಿ ಟ್ವೆಂಟಿ ಕ್ರಿಕೆಟ್ ಬೆಳೆಯುತ್ತಾ ಹೋದಂತೆ ಈ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ನಿರ್ಮಿಸುವ ದಾಖಲೆಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತಾ ಹೋಗುತ್ತಿದೆ. ಅದರಲ್ಲಿಯೂ ಟಿ ಟ್ವೆಂಟಿ ಮಾದರಿಯಡಿಯಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಗಳು ಕೂಡ ಆಯೋಜನೆಯಾಗುತ್ತಿದ್ದು, ತಂಡಗಳ ನಡುವೆ ಅಂತರರಾಷ್ಟ್ರೀಯ ಟಿ ಟ್ವೆಂಟಿ ಸರಣಿಗಳು ಕೂಡ ದೊಡ್ಡ ಮಟ್ಟದಲ್ಲಿಯೇ ಆಯೋಜನೆಯಾಗುತ್ತಿವೆ. ಇನ್ನು ಅಂತರರಾಷ್ಟ್ರೀಯ ಮಟ್ಟದ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ವಿವಿಧ ದೇಶಗಳ ಹಲವಾರು ಕ್ರಿಕೆಟಿಗರು ಹೊಡಿ ಬಡಿ ಆಟವನ್ನಾಡಿ ಭಿನ್ನ ವಿಭಿನ್ನ ದಾಖಲೆಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ಡೆತ್ ಓವರ್‌ಗಳಲ್ಲಿ ಅಧಿಕ ರನ್ ಗಳಿಸಿದ ಬ್ಯಾಟ್ಸ್ ಮನ್ ಎಂಬ ದಾಖಲೆ ಕೂಡ ಒಂದು. ಹೀಗೆ ಈ ದಾಖಲೆ ನಿರ್ಮಿಸಿರುವ ಆಟಗಾರ ಯಾರು ಎಂಬುದರ ಕುರಿತ ಮಾಹಿತಿ ಮುಂದೆ ಇದೆ ಓದಿ.

ಡೆತ್ ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಟಾಪ್ 4 ಪಟ್ಟಿ
1. ಎಂಎಸ್ ಧೋನಿ - ಭಾರತ - 856 ರನ್
2. ಡೇವಿಡ್ ಮಿಲ್ಲರ್ - ದಕ್ಷಿಣ ಆಫ್ರಿಕಾ - 787 ರನ್
3. ಶೋಯಬ್ ಮಲಿಕ್ - ಪಾಕಿಸ್ತಾನ - 747 ರನ್
4. ಮೊಹಮ್ಮದ್ ನಬಿ - ಅಫ್ಘಾನಿಸ್ತಾನ - 670 ರನ್

ಎಂ ಎಸ್ ಧೋನಿಯೇ ಟಾಪ್
ಫಿನಿಶರ್ ಎಂದೇ ಖ್ಯಾತಿಯನ್ನು ಪಡೆದಿರುವ ಎಂ ಎಸ್ ಧೋನಿ ಟಿ ಟ್ವೆಂಟಿ ಕ್ರಿಕೆಟ್‍ನ ಡೆತ್ ಓವರ್‌ಗಳಲ್ಲಿ 856 ರನ್ ಚಚ್ಚಿ ಈ ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ವಿಶ್ವದ ನಂಬರ್ 1 ಆಟಗಾರ ಎನಿಸಿಕೊಂಡಿದ್ದಾರೆ.

ಡೆತ್ ಓವರ್ ಎಂದರೆ ಯಾವುದು?
ಡೆತ್ ಓವರ್ ಎಂದರೆ ಇನ್ನಿಂಗ್ಸ್‌ನ ಕೊನೆಯ 5 ಓವರ್‌ಗಳು. ಅಂದರೆ ಟಿ ಟ್ವೆಂಟಿ ಪಂದ್ಯದ 16ರಿಂದ 20 ಓವರ್‌ಗಳನ್ನು ಡೆತ್ ಓವರ್ ಎಂದು ಕರೆಯಲಾಗುತ್ತದೆ. ಈ ಓವರ್‌ಗಳಲ್ಲಿ ಕಣದಲ್ಲಿರುವ ಆಟಗಾರ ಅಬ್ಬರಿಸಿ ರನ್ ಗಳಿಸಿದರೆ ಮಾತ್ರ ತಂಡದ ಮೊತ್ತ ಹೆಚ್ಚಾಗಲಿದ್ದು ಎದುರಾಳಿಗಳ ಮೇಲೆ ಒತ್ತಡ ಹೇರಬಹುದಾಗಿದೆ. ಹಾಗೂ ಈ ಓವರ್‌ಗಳಲ್ಲಿ ವಿಶ್ವ ಶ್ರೇಷ್ಠ ಬೌಲರ್‌ಗಳನ್ನು ಎದುರಿಸಿ ಬ್ಯಾಟ್ ಬೀಸುವುದು ಸುಲಭದ ಮಾತು ಕೂಡ ಅಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications