ಟೆಸ್ಟ್ ಕ್ರಿಕೆಟ್‍ನಲ್ಲಿ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿಹೆಚ್ಚು ರನ್ ಬಾರಿಸಿರುವ ಆಟಗಾರ ಯಾರು?

ಕ್ರಿಕೆಟ್‍ನ ಯಾವುದೇ ಮಾದರಿ ಇರಲಿ ಬೌಲರ್‌ಗಳಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗುವುದು ಕಡಿಮೆ. ಅದರಲ್ಲಿಯೂ ಹನ್ನೊಂದನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆಟಗಾರನಿಗೆ ಹೆಚ್ಚು ಬ್ಯಾಟ್ ಮಾಡುವ ಅವಕಾಶ ಸಿಕ್ಕಿರುವುದು ತೀರಾ ಕಡಿಮೆ ಎಂದೇ ಹೇಳಬಹುದು. ಹೌದು, ತಂಡದ ಕೊನೆಯ ಆಟಗಾರನಿಗೆ ಬ್ಯಾಟಿಂಗ್ ಮಾಡುವ ಅವಕಾಶ ಯಥೇಚ್ಚವಾಗಿ ದೊರೆಯುವುದಿಲ್ಲ.
ಬೌಲರ್‌ಗಳಿಗೂ ಮುನ್ನ ಕಣಕ್ಕಿಳಿಯುವ ಆರಂಭಿಕ ಆಟಗಾರರು, ಮಧ್ಯಮ ಕ್ರಮಾಂಕದ ಆಟಗಾರರು ಹಾಗೂ ಕೆಳ ಕ್ರಮಾಂಕದ ಆಟಗಾರರು ಉತ್ತಮವಾಗಿ ಬ್ಯಾಟ್ ಬೀಸಿ ವಿಕೆಟ್ ಕಾಯ್ದುಕೊಂಡರೆ ಬೌಲರ್‌ಗಳಿಗೆ ಬ್ಯಾಟ್ ಬೀಸುವ ಕೆಲಸವೇ ಇರುವುದಿಲ್ಲ. ಒಂದುವೇಳೆ ಎದುರಾಳಿ ಬೌಲರ್‌ಗಳು ತಂಡದ 9 ವಿಕೆಟ್‍ಗಳನ್ನು ಉರುಳಿಸಿದರೆ ಆಗ ಮಾತ್ರ ಹನ್ನೊಂದನೇ ಆಟಗಾರನಿಗೆ ಕಣಕ್ಕಿಳಿದು ಬ್ಯಾಟ್ ಬೀಸುವ ಅವಕಾಶ ಸಿಗಲಿದೆ. ಇನ್ನು ತಂಡದ ಪರ ಅಂತಿಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆಟಗಾರ ತಂಡದ ಪ್ರಮುಖ ಬೌಲರ್ ಆಗಿರುತ್ತಾನೆಯೇ ಹೊರತು ಬ್ಯಾಟ್ ಬೀಸುವಲ್ಲಿ ಆತ ನಿಪುಣನಾಗಿರುವುದಿಲ್ಲ.
ಹೀಗಾಗಿ ಕೊನೆಯ ಕ್ರಮಾಂಕದಲ್ಲಿ ಕಣಕ್ಕಿಳಿಯಲಿರುವ ಆಟಗಾರ ಹೆಚ್ಚೇನೂ ರನ್ ಕಲೆ ಹಾಕುವುದಿಲ್ಲ. ಹೀಗಾಗಿ ಹನ್ನೊಂದನೇ ಕ್ರಮಾಂಕದಲ್ಲಿ ಹರಿದಿರುವ ರನ್ ಸಂಖ್ಯೆ ಕಡಿಮೆ ಇದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಇದರ ಸಂಖ್ಯೆ ಮತ್ತಷ್ಟು ಕಡಿಮೆ ಎನ್ನಬಹುದು. ಇನ್ನು ಈ ರೀತಿ ಕಡಿಮೆ ರನ್ ಹರಿದು ಬಂದಿರುವ ಕ್ರಮಾಂಕದಲ್ಲಿ ಕಣಕ್ಕಿಳಿದು ಹೆಚ್ಚು ರನ್ ಬಾರಿಸಿರುವ ಆಟಗಾರರ ಟಾಪ್ 4 ಪಟ್ಟಿ ಹೇಗಿದೆ ಹಾಗೂ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವವರು ಯಾರು ಎಂಬುದರ ಕುರಿತಾದ ಅಂಕಿ ಅಂಶ ಕೆಳಕಂಡಂತಿದೆ ಓದಿ ತಿಳಿಯಿರಿ.

11ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಟಾಪ್ 4 ಪಟ್ಟಿ
ಟೆಸ್ಟ್ ಕ್ರಿಕೆಟ್‍ನಲ್ಲಿ ಇಲ್ಲಿಯವರೆಗೂ ಹನ್ನೊಂದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ರನ್ ಕಲೆ ಹಾಕಿರುವ ಟಾಪ್ 4 ಆಟಗಾರರ ಪಟ್ಟಿ ಕೆಳಕಂಡಂತಿದೆ.
1. ಟ್ರೆಂಟ್ ಬೌಲ್ಟ್ - ನ್ಯೂಜಿಲೆಂಡ್ - 623 ರನ್‌ಗಳು ( ಸಕ್ರಿಯ ಆಟಗಾರ )
2. ಮುತ್ತಯ್ಯ ಮುರಳೀಧರನ್ - ಶ್ರೀಲಂಕಾ - 623 ರನ್‌ಗಳು ( ನಿವೃತ್ತ ಕ್ರಿಕೆಟಿಗ )
3. ಜೇಮ್ಸ್ ಆ್ಯಂಡರ್ಸನ್ - ಇಂಗ್ಲೆಂಡ್ - 609 ರನ್‌ಗಳು ( ಸಕ್ರಿಯ ಆಟಗಾರ )
4. ಗ್ಲೆನ್ ಮೆಕ್ ಗ್ರಾ - ಆಸ್ಟ್ರೇಲಿಯಾ - 603 ರನ್‌ಗಳು ( ನಿವೃತ್ತ ಕ್ರಿಕೆಟಿಗ )

ಮುತ್ತಯ್ಯ ಮುರಳೀಧರನ್ ದಾಖಲೆ ಮುರಿಯಲಿದ್ದಾರೆ ಟ್ರೆಂಟ್ ಬೌಲ್ಟ್
ಸದ್ಯ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದ ಮೊಲನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಪರ ಹನ್ನೊಂದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟ್ರೆಂಟ್ ಬೌಲ್ಟ್ ಅಜೇಯ 16 ರನ್ ಗಳಿಸಿ ಮುತ್ತಯ್ಯ ಮುರಳೀಧರನ್ ಅವರನ್ನು ಈ ದಾಖಲೆಯಲ್ಲಿ ಸರಿದೂಗಿಸಿದ್ದಾರೆ. ಈ ಮೂಲಕ ಇನ್ನಷ್ಟು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಟ್ರೆಂಟ್ ಬೌಲ್ಟ್ ಈ ದಾಖಲೆಯಲ್ಲಿ ಮುರಳೀಧರನ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‍ನಲ್ಲಿ ಹನ್ನೊಂದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.

ಈ ನಾಲ್ವರಲ್ಲಿ ಹೆಚ್ಚು ಟೆಸ್ಟ್ ಪಂದ್ಯ ಆಡಿದವರು
ಇನ್ನು ಹನ್ನೊಂದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ರನ್ ಕಲೆ ಹಾಕಿರುವ ಈ ನಾಲ್ವರು ಆಟಗಾರರು ಒಟ್ಟು ಎಷ್ಟು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ ಎಂಬುದರ ಕುರಿತ ವಿವರ ಕೆಳಕಂಡಂತಿದೆ.
ಟ್ರೆಂಟ್ ಬೌಲ್ಟ್ - 76 ಟೆಸ್ಟ್ ಪಂದ್ಯಗಳು
ಮುತ್ತಯ್ಯ ಮುರಳೀಧರನ್ - 133 ಟೆಸ್ಟ್ ಪಂದ್ಯಗಳು
ಜೇಮ್ಸ್ ಆ್ಯಂಡರ್ಸನ್ - 170 ಟೆಸ್ಟ್ ಪಂದ್ಯಗಳು
ಗ್ಲೆನ್ ಮೆಕ್ ಗ್ರಾ - 124 ಟೆಸ್ಟ್ ಪಂದ್ಯಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications