ಟಿ20 ಪಂದ್ಯಗಳಲ್ಲಿ ಅತಿಹೆಚ್ಚು ಬಾರಿ 100 ರನ್‌ಗಳ ಜತೆಯಾಟವಾಡಿರುವ ಜೋಡಿ ಯಾವುದು? ಇಲ್ಲಿದೆ ಪಟ್ಟಿ

ಪ್ರಸ್ತುತ 2022ರ ಜೂನ್ ತಿಂಗಳಿನಲ್ಲಿ ಸಾಲು ಸಾಲು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಆಯೋಜನೆಯಾಗಿದ್ದು, ವಿವಿಧ ಕ್ರಿಕೆಟ್ ತಂಡಗಳು ವಿವಿಧ ಸರಣಿಗಳಲ್ಲಿ ಕಣಕ್ಕಿಳಿದು ಭಾಗವಹಿಸುತ್ತಿವೆ. ಹೌದು, ವಿಶ್ವ ಕ್ರಿಕೆಟ್‌ನ ಅತ್ಯಂತ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿ ಕಳೆದೆರೆಡು ತಿಂಗಳುಗಳ ಕಾಲ ನಡೆದ ಕಾರಣ ಆ ಸಮಯದಲ್ಲಿ ಹೆಚ್ಚೇನೂ ಅಂತರರಾಷ್ಟ್ರೀಯ ಪಂದ್ಯಗಳು ಆಯೋಜನೆಯಾಗಿರಲಿಲ್ಲ. ಆದರೆ ಇದೀಗ ಅಂತರರಾಷ್ಟ್ರೀಯ ಪಂದ್ಯಗಳು ಗರಿಗೆದರಿದ್ದು, ಟೀಮ್ ಇಂಡಿಯಾ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೂಲಕ ತನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಪಯಣವನ್ನು ಪುನರಾರಂಭ ಮಾಡಿದೆ.
ಇನ್ನು ಈ ವರ್ಷ ಏಕದಿನ ಮತ್ತು ಟೆಸ್ಟ್ ಸರಣಿಗಳಿಗಿಂತ ಅತಿ ಹೆಚ್ಚಾಗಿ ಟಿಟ್ವೆಂಟಿ ಪಂದ್ಯಗಳು ಆಯೋಜನೆಯಾಗಿದ್ದು, ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಾಗಿ ವಿವಿಧ ತಂಡಗಳು ಸಿದ್ಧತೆ ನಡೆಸಿಕೊಳ್ಳುತ್ತಿವೆ.
ಇನ್ನು ಇಲ್ಲಿಯವರೆಗೂ ನಡೆದಿರುವ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳಲ್ಲಿ ಹಲವಾರು ಕ್ರಿಕೆಟಿಗರು ಅಬ್ಬರಿಸಿದ್ದು ವಿವಿಧ ದಾಖಲೆಗಳನ್ನು ಮಾಡಿದ್ದಾರೆ. ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ವಿವಿಧ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹಲವರು ನಿರ್ಮಿಸಿದ್ದರೆ, ಜೋಡಿಯೊಂದು ಅತಿ ಹೆಚ್ಚು ಬಾರಿ ಶತಕದ ಜತೆಯಾಟವಾಡಿದ ದಾಖಲೆಯೂ ಕೂಡ ಈ ಚುಟುಕು ಕ್ರಿಕೆಟ್ ಕದನದಲ್ಲಿದೆ. ಅಂತಹ ವಿಭಿನ್ನ ದಾಖಲೆ ಮಾಡಿರುವ ಜೋಡಿ ಯಾವುದು ಮತ್ತು ಅತಿ ಹೆಚ್ಚು ಬಾರಿ ಶತಕದ ಜತೆಯಾಟವನ್ನು ಆಡಿರುವ ಆಟಗಾರರ ಟಾಪ್ 5 ಪಟ್ಟಿಯ ವಿವರ ಈ ಕೆಳಕಂಡಂತಿದೆ.

ಹೆಚ್ಚು ಬಾರಿ ಶತಕದ ಜತೆಯಾಟವಾಡಿದವರು
ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶತಕದ ಜತೆಯಾಟವಾಡಿದ ಜೋಡಿ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿರುವ ಜೋಡಿ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್. ಈ ಜೋಡಿ ಬರೋಬ್ಬರಿ 6 ಬಾರಿ ಶತಕದ ಜತೆಯಾಟವಾಡಿದೆ ಹಾಗೂ ಒಟ್ಟು 896 ರನ್ ಕಲೆಹಾಕಿದ್ದಾರೆ.

ಟಾಪ್ 5 ಪಟ್ಟಿ
1. ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ - 6 ಬಾರಿ ಶತಕದ ಜತೆಯಾಟ - 896 ರನ್
2. ಭಾರತದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ - 5 ಬಾರಿ ಶತಕದ ಜತೆಯಾಟ - 680 ರನ್
3. ಭಾರತದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ - 4 ಬಾರಿ ಶತಕಸ ಜತೆಯಾಟ - 559 ರನ್
4. ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ - 4 ಬಾರಿ ಶತಕದ ಜತೆಯಾಟ - 540 ರನ್
5. ಆಸ್ಟ್ರೇಲಿಯಾದ ಆ್ಯರನ್ ಫಿಂಚ್ ಮತ್ತು ಡೇವಿಡ್ ವಾರ್ನರ್ - 4 ಬಾರಿ ಶತಕದ ಜತೆಯಾಟ - 485 ರನ್

2 ಸ್ಥಾನ ಟೀಮ್ ಇಂಡಿಯಾ ಆಟಗಾರರದ್ದು
ಇನ್ನು ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಬಾರಿ ಶತಕದ ಜತೆಯಾಟವನ್ನು ಆಡಿರುವ ಆಟಗಾರರ ಟಾಪ್ 5 ಪಟ್ಟಿಯಲ್ಲಿ 2 ಸ್ಥಾನಗಳನ್ನು ಟೀಮ್ ಇಂಡಿಯಾ ಆಟಗಾರರೇ ಆಕ್ರಮಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಜೋಡಿ ದ್ವಿತೀಯ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ತೃತೀಯ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications