2024ರ ಟಿ20 ವಿಶ್ವಕಪ್‌ಗೆ ಎಲ್ಲಾ 20 ತಂಡಗಳ ನಾಯಕರ ಪಟ್ಟಿ
2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭದ ದಿನಾಂಕ ಹತ್ತಿರವಾಗುತ್ತಿರುವಂತೆ, ಭಾಗವಹಿಸುವ ಎಲ್ಲಾ 20 ತಂಡಗಳು ತಮ್ಮ ಅತ್ಯುತ್ತಮ ಸಂಯೋಜನೆಯೊಂದಿಗೆ ಸಜ್ಜಾಗುತ್ತಿದ್ದಾರೆ. ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಮೊದಲ ಬಾರಿಗೆ ಅತಿದೊಡ್ಡ ಐಸಿಸಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿವೆ.
ಜೂನ್ 2ರಂದು ಆರಂಭಗೊಳ್ಳುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಹುತೇಕ ತಂಡಗಳು ಈಗಾಗಲೇ ತಮ್ಮ 15 ಸದಸ್ಯರ ತಂಡವನ್ನು ಪ್ರಕಟಿಸಿ ಐಸಿಸಿಗೆ ಕಳುಹಿಸಿವೆ.

9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಾಗಿದೆ.
ಪಂದ್ಯಾವಳಿಯನ್ನು ಸಾಮಾನ್ಯವಾಗಿ ಕೆಲವು ವಿನಾಯಿತಿಗಳೊಂದಿಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. 2007ರಲ್ಲಿ ಪ್ರಾರಂಭವಾದಾಗಿನಿಂದ ಎಂಟು ಬಾರಿ ನಡೆದಿದೆ. ಭಾರತ ಕ್ರಿಕೆಟ್ ತಂಡವು 2007ರಲ್ಲಿ ಟಿ20 ವಿಶ್ವಕಪ್ ಉದ್ಘಾಟನಾ ಆವೃತ್ತಿಯನ್ನು ಗೆದ್ದುಕೊಂಡಿತು ಮತ್ತು ಇಂಗ್ಲೆಂಡ್ 2022ರಲ್ಲಿ ಕೊನೆಯ ಆವೃತ್ತಿಯನ್ನು ಗೆದ್ದಿದೆ.

ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಟೂರ್ನಿಯಲ್ಲಿ ಇದುವರೆಗಿನ ಅತ್ಯಂತ ಯಶಸ್ವಿ ತಂಡಗಳಾಗಿವೆ. ಉಭಯ ತಂಡಗಳು ತಲಾ ಎರಡು ಬಾರಿ ಪ್ರಶಸ್ತಿ ಗೆದ್ದಿವೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಒಂದೇ ಬಾರಿ ಟ್ರೋಫಿಯನ್ನು ಗೆದ್ದಿವೆ.
2024ರ ಟಿ20 ವಿಶ್ವಕಪ್ ದೊಡ್ಡ ಪಂದ್ಯಾವಳಿಯಾಗಿರುವುದರಿಂದ, ಆಯಾ ತಂಡಗಳ ನೇತೃತ್ವ ವಹಿಸಲಿರುವ ಎಲ್ಲಾ 20 ನಾಯಕರ ಮೇಲೆ ಸಾಕಷ್ಟು ಒತ್ತಡವಿದೆ. ಈ 20 ಓವರ್ ಪಂದ್ಯಾವಳಿಗಾಗಿ ಎಲ್ಲಾ ನಾಯಕರು ತಮ್ಮ ಸ್ಟಾರ್-ಸ್ಟಡ್ಡ್ ತಂಡಗಳೊಂದಿಗೆ ಸಜ್ಜಾಗುತ್ತಿವೆ.
2024ರ ಟಿ20 ವಿಶ್ವಕಪ್ ತಂಡಗಳ ನಾಯಕರ ಪಟ್ಟಿ
1) ರೋಹಿತ್ ಶರ್ಮಾ - ಭಾರತ
2) ಮಿಚೆಲ್ ಮಾರ್ಷ್ - ಆಸ್ಟ್ರೇಲಿಯಾ
3) ಬಾಬರ್ ಅಜಂ - ಪಾಕಿಸ್ತಾನ
4) ಜೋಸ್ ಬಟ್ಲರ್ - ಇಂಗ್ಲೆಂಡ್
5) ಏಡೆನ್ ಮಾರ್ಕ್ರಾಮ್ - ದಕ್ಷಿಣ ಆಫ್ರಿಕಾ
6) ಕೇನ್ ವಿಲಿಯಮ್ಸನ್ - ನ್ಯೂಜಿಲೆಂಡ್
7) ರೋವ್ಮನ್ ಪೊವೆಲ್ - ವೆಸ್ಟ್ ಇಂಡೀಸ್
8) ರಶೀದ್ ಖಾನ್ - ಅಫ್ಘಾನಿಸ್ತಾನ
9) ನಜ್ಮುಲ್ ಹೊಸೈನ್ ಶಾಂಟೊ - ಬಾಂಗ್ಲಾದೇಶ
10) ಅಕೀಬ್ ಇಲ್ಯಾಸ್ - ಓಮನ್
11) ಸಾದ್ ಬಿನ್ ಜಾಫರ್ - ಕೆನಡಾ
12) ಮೋನಾಂಕ್ ಪಟೇಲ್ - ಯುಎಸ್ಎ
13) ರಿಚ್ಚಿ ಬೆರ್ರಿಂಗ್ಟನ್ - ಸ್ಕಾಟ್ಲೆಂಡ್
14) ಬ್ರಿಯಾನ್ ಮಸಾಬ - ಉಗಾಂಡಾ
15) ಪಾಲ್ ಸ್ಟ್ರಿಲಿಂಗ್ - ಐರ್ಲೆಂಡ್
16) ರೋಹಿತ್ ಪೌಡೆಲ್ - ನೇಪಾಳ
17) ಅಸ್ಸಾದೊಲ್ಲಾ ವಾಲಾ - ಪಪುವಾ ನ್ಯೂ ಗಿನಿಯಾ
18) ಶ್ರೀಲಂಕಾ - ವನಿಂದು ಹಸರಂಗ
19) ನಮಿಬಿಯಾ - ಪ್ರಕಟಿಸಿಲ್ಲ
20) ನೆದರ್ಲ್ಯಾಂಡ್ಸ್ - ಪ್ರಕಟಿಸಿಲ್ಲ
ಮತ್ತೊಮ್ಮೆ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾದ ರೋಹಿತ್ ಶರ್ಮಾ
ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಮತ್ತೊಮ್ಮೆ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ವಿವಿಧ ಕಾರಣಗಳಿಂದಾಗಿ ರೋಹಿತ್ ಶರ್ಮಾ ಬಹುಶಃ ಇತರ ನಾಯಕರಿಗಿಂತ ಹೆಚ್ಚಿನ ಒತ್ತಡದಲ್ಲಿದ್ದಾರೆ.
ಮೊದಲನೆಯದಾಗಿ, ಇದು ಸಂಭಾವ್ಯವಾಗಿ ಅವರ ಕೊನೆಯ ದೊಡ್ಡ ಐಸಿಸಿ ಪಂದ್ಯಾವಳಿಯಾಗಿರಬಹುದು. ಕೇವಲ ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಸಹ ರೋಹಿತ್ ಶರ್ಮಾ ಕೊನೆಯ ವಿಶ್ವಕಪ್ ಆಡಲಿದ್ದಾರೆ.
ಎರಡನೆಯದಾಗಿ, ರೋಹಿತ್ ಶರ್ಮಾ 2022ರ ಟಿ20 ವಿಶ್ವಕಪ್‌ನ ಎಲ್ಲಾ ನೋವುಗಳನ್ನು ನಿವಾರಿಸಲು ಎದುರು ನೋಡುತ್ತಾರೆ. ಅಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೆಮಿಫೈನಲ್‌ನಲ್ಲಿ 10 ವಿಕೆಟ್‌ಗಳಿಂದ ಸೋತಿತ್ತು.
ರೋಹಿತ್ ಶರ್ಮಾ ಭಾರತ ತಂಡವನ್ನು ತನ್ನ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಬಹುದೇ ಅಥವಾ ಇಲ್ಲವೇ ಎಂಬುದು ಕುತೂಹಲಕಾರಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications