ಮೊದಲ 15 ಟಿ20 ಪಂದ್ಯಗಳಲ್ಲಿ ಅತಿಹೆಚ್ಚು ಪಂದ್ಯ ಗೆಲ್ಲಿಸಿದ ನಾಯಕರ ಪಟ್ಟಿ; ಭಾರತದ ಪರ ಓರ್ವ ನಾಯಕ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಕೈಗೊಂಡು ಟೀಮ್ ಇಂಡಿಯಾ ವಿರುದ್ಧ 5 ಪಂದ್ಯಗಳ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸಿ ಸರಣಿಯನ್ನು 2 - 2 ಅಂತರದಲ್ಲಿ ಹಂಚಿಕೊಂಡಿದೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ 5 ಪಂದ್ಯಗಳ ಪೈಕಿ ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ, 3 ಮತ್ತು 4ನೇ ಪಂದ್ಯಗಳಲ್ಲಿ ರಿಷಭ್ ಪಂತ್ ನಾಯಕತ್ವದ ಟೀಮ್ ಇಂಡಿಯಾ ಗೆದ್ದು ಬೀಗಿತು ಹಾಗೂ ಅಂತಿಮ ಪಂದ್ಯ ಮಳೆಗೆ ಆಹುತಿಯಾದ ಕಾರಣ ಸರಣಿ ಎರಡೂ ತಂಡಗಳ ಪಾಲಾಯಿತು.
ಹೀಗೆ ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವಿನ ಈ ಸರಣಿ ಅತಂತ್ರವಾದರೂ ಸಹ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಈ ಸರಣಿ ಮುಖಾಂತರ ದಾಖಲೆಯ ಪಟ್ಟಿ ಸೇರಿದ್ದಾರೆ. ಹೌದು, ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಟೆಂಬಾ ಬವುಮಾ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ದಕ್ಷಿಣ ಆಫ್ರಿಕಾ ಗೆದ್ದ ತರುವಾಯ 15 ಪಂದ್ಯಗಳು ಮುಕ್ತಾಯವಾದ ನಂತರ ಅತಿಹೆಚ್ಚು ಟಿ ಟ್ವೆಂಟಿ ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ಬವುಮಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಹಾಗಾದರೆ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ನಾಯಕನಾಗಿ ಮುನ್ನಡೆಸಿದ ಮೊದಲ 15 ಪಂದ್ಯಗಳ ಪೈಕಿ ಅತಿ ಹೆಚ್ಚು ಜಯ ಸಾಧಿಸಿರುವ ನಾಯಕರು ಯಾರು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

15 ಪಂದ್ಯಗಳು ಮುಕ್ತಾಯವಾದ ನಂತರ ಹೆಚ್ಚು ಗೆದ್ದ ನಾಯಕರಿವರು
ನಾಯಕರಾಗಿ 15 ಟಿ ಟ್ವೆಂಟಿ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ನಂತರ ಈ ಕೆಳಕಂಡ ಎಲ್ಲಾ ಆಟಗಾರರು ತಲಾ 12 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದು, 15 ಟಿ ಟ್ವೆಂಟಿ ಪಂದ್ಯಗಳು ಮುಕ್ತಾಯಗೊಂಡ ನಂತರ ಅತಿಹೆಚ್ಚು ಪಂದ್ಯಗಳಲ್ಲಿ ಗೆದ್ದ ನಾಯಕರು ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.
• ಟೆಂಬಾ ಬವುಮಾ - ದಕ್ಷಿಣ ಆಫ್ರಿಕಾ - 15ರಲ್ಲಿ 12 ಗೆಲುವು
• ರೋಹಿತ್ ಶರ್ಮಾ - ಭಾರತ - 15ರಲ್ಲಿ 12 ಗೆಲುವು
• ಅಸ್ಗರ್ ಆಫ್ಘನ್ - ಅಫ್ಘಾನಿಸ್ತಾನ - 15ರಲ್ಲಿ 12 ಗೆಲುವು
• ಮೈಕೆಲ್ ಕ್ಲಾರ್ಕ್ - ಆಸ್ಟ್ರೇಲಿಯಾ - 15ರಲ್ಲಿ 12 ಗೆಲುವು

ಟೀಮ್ ಇಂಡಿಯಾ ಪರ ಓರ್ವ ನಾಯಕ
ಹೀಗೆ ಮೊದಲ 15 ಪಂದ್ಯಗಳನ್ನು ನಾಯಕನಾಗಿ ಮುನ್ನಡೆಸಿದ ನಂತರ ಅತಿ ಹೆಚ್ಚು ಗೆಲುವು ಪಡೆದವರ ಪಟ್ಟಿಯಲ್ಲಿ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ತಾವು ನಾಯಕನಾಗಿ ಮುನ್ನಡೆಸಿದ್ದ 15 ಟಿ ಟ್ವೆಂಟಿ ಪಂದ್ಯಗಳ ಪೈಕಿ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.

ಸಾರ್ವಕಾಲಿಕ ದಾಖಲೆ ಕೈತಪ್ಪಿಸಿಕೊಂಡ ಟೀಮ್ ಇಂಡಿಯಾ
ಇನ್ನು ನಾಯಕರಾಗಿ ಮೊದಲ 15 ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದವರ ಪಟ್ಟಿ ಹೀಗಿದ್ದರೆ, ತಂಡವೊಂದು ಸತತವಾಗಿ ಅತಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳಲ್ಲಿ ಗೆದ್ದ ದಾಖಲೆಯನ್ನು ಟೀಮ್ ಇಂಡಿಯಾ ತನ್ನ ಹೆಸರಿಗೆ ಬರೆದುಕೊಳ್ಳುವ ಅವಕಾಶ ಇದೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಇತ್ತು. ಇದಕ್ಕೂ ಮುನ್ನ ಬರೋಬ್ಬರಿ 12 ಟಿ ಟ್ವೆಂಟಿ ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಸತತವಾಗಿ ಗೆದ್ದಿದ್ದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಪ್ರಥಮ ಪಂದ್ಯದಲ್ಲಿ ಜಯವನ್ನೇನಾದರೂ ದಾಖಲಿಸಿದ್ದರೆ ಸತತವಾಗಿ 13 ಟಿ ಟ್ವೆಂಟಿ ಪಂದ್ಯಗಳನ್ನು ಗೆದ್ದ ತಂಡ ಎಂಬ ದಾಖಲೆಯನ್ನು ಭಾರತ ಬರೆಯುತ್ತಿತ್ತು. ಆದರೆ ರಿಷಭ್ ಪಂತ್ ನಾಯಕತ್ವದ ಟೀಮ್ ಇಂಡಿಯಾ ಆ ಪಂದ್ಯವನ್ನು ಸೋತು ವಿಶ್ವದಾಖಲೆ ನಿರ್ಮಿಸುವುದನ್ನು ಕೈ ತಪ್ಪಿಸಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications