For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಮುನ್ನಡೆ ಪಡೆದ ದಾಖಲೆಗಳ ಪಟ್ಟಿ

List of Highest 1st innings lead taken by England vs India in Test Cricket

ಲೀಡ್ಸ್: ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳು ಆರಂಭಿಕ ಇನ್ನಿಂಗ್ಸ್‌ ಮುಗಿಸಿವೆ. ಆತಿಥೇಯ ಇಂಗ್ಲೆಂಡ್ ತಂಡ ಭಾರ್ಜರಿ ಮುನ್ನಡೆ ಪಡೆದುಕೊಂಡಿದೆ. ನಾಯಕ ಜೋ ರೂಟ್‌ ಶತಕದ ಕೊಡುಗೆಯೊಂದಿಗೆ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ 354 ರನ್ ಮುನ್ನಡೆ ಪಡೆದುಕೊಂಡಿತ್ತು. ಟೀಮ್ ಇಂಡಿಯಾ ಈಗ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ.

ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆರಂಭಿಕ ಪಂದ್ಯದಲ್ಲಿ ಭಾರತ ಗೆಲ್ಲುವ ನಿರೀಕ್ಷೆಯಲ್ಲಿತ್ತಾದರೂ ಆ ಪಂದ್ಯ ಡ್ರಾ ಅನ್ನಿಸಿತ್ತು. ದ್ವಿತೀಯ ಪಂದ್ಯ ಇಂಗ್ಲೆಂಡ್ ಪರವಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಪಂದ್ಯ ಸಂಪೂರ್ಣ ಭಾರತದ ಪರವಾಗಿ ತಿರುಗಿತ್ತು. ಆದರೆ ತೃತೀಯ ಪಂದ್ಯದಲ್ಲಿ ಇಂಗ್ಲೆಂಡ್ ಪಂದ್ಯವನ್ನು ತನ್ನ ಹತೋಟಿಯಲ್ಲಿ ಇರಿಸಿಕೊಂಡಿದೆ. ಭಾರತ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ.

ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ ಕೆಟ್ಟ ಬ್ಯಾಟಿಂಗ್
ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಯಾವುದೇ ಬ್ಯಾಟ್ಸ್‌ಮನ್‌ 20ಕ್ಕೂ ಅಧಿಕ ರನ್ ಗಳಿಸದೆ ದುರ್ಬಲ ಬ್ಯಾಟಿಂಗ್‌ಗೆ ಸಾಕ್ಷಿ ಹೇಳಿತ್ತು. ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ ಗಳಿಸಿದ್ದೆಂದರೆ ರೋಹಿತ್ ಶರ್ಮಾ 19, ಅಜಿಂಕ್ಯ ರಹಾನೆ 18. ಉಳಿದಂತೆ ಎಲ್ಲರೂ 10ರೊಳಗಿನ ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ದರು. ರೋಹಿತ್ ಶರ್ಮಾ 19, ಕೆಎಲ್ ರಾಹುಲ್ 0, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ಅಜಿಂಕ್ಯ ರಹಾನೆ 18, ರಿಷಭ್ ಪಂತ್ 2, ರವೀಂದ್ರ ಜಡೇಜಾ 4, ಮೊಹಮ್ಮದ್ ಶಮಿ 0, ಇಶಾಂತ್ ಶರ್ಮಾ 8, ಜಸ್ಪ್ರೀತ್ ಬೂಮ್ರಾ ೦, ಮೊಹಮ್ಮದ್ ಸಿರಾಜ್ 3 ರನ್‌ನೊಂದಿಗೆ ಭಾರತ 40.4 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 78 ರನ್ ಗಳಿಸಿತ್ತು. ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳಾದ ಜೇಮ್ಸ್ ಆ್ಯಂಡರ್ಸನ್ 6 ರನ್‌ಗೆ 3, ಕ್ರೆಗ್ ಓವರ್‌ಟನ್ 14 ರನ್‌ಗೆ 3, ಆಲಿ ರಾಬಿನ್ಸನ್ 2, ಸ್ಯಾಮ್ ಕರನ್ 2 ವಿಕೆಟ್‌ನೊಂದಿಗೆ ಪಾರಮ್ಯ ಮೆರೆದರು.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಭರ್ಜರಿ ಮುನ್ನಡೆ
ಆರಂಭಿಕ ಇನ್ನಿಂಗ್ಸ್‌ ನಲ್ಲಿ ಇಂಗ್ಲೆಂಡ್ ಭರ್ಜರಿ ಮುನ್ನಡೆ ಗಳಿಸಿತ್ತು. ಶುಕ್ರವಾರ ಆರಂಭಿಕ ಇನ್ನಿಂಗ್ಸ್‌ ಅನ್ನು 132.2 ಓವರ್‌ಗೆ 10 ವಿಕೆಟ್ ಕಳೆದು 432 ರನ್ ಗಳಿಸಿ ಮುಗಿಸುವಾಗ ಇಂಗ್ಲೆಂಡ್ 354 ರನ್ ಮುನ್ನಡೆ ಪಡೆದುಕೊಂಡಿತ್ತು. ರೋರಿ ಬರ್ನ್ಸ್ 61, ಹಸೀಬ್ ಹಮೀದ್ 68, ಡೇವಿಡ್ ಮಲನ್ 70, ಜೋ ರೂಟ್ 121, ಜಾನಿ ಬೈರ್‌ಸ್ಟೊ 29, ಜೋಸ್ ಬಟ್ಲರ್ 7, ಮೊಯೀನ್ ಅಲಿ 8, ಸ್ಯಾಮ್ ಕರನ್ 15, ಕ್ರೇಗ್ ಓವರ್‌ಟನ್ 32 ರನ್‌ ಬಾರಿಸಿದ್ದರು. ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ಭಾರತದ ಜಸ್‌ಪ್ರೀತ್‌ ಬೂಮ್ರಾ 2, ಮೊಹಮ್ಮದ್ ಶಮಿ 4, ಮೊಹಮ್ಮದ್ ಸಿರಾಜ್ 2, ರವೀಂದ್ರ ಜಡೇಜಾ 2 ವಿಕೆಟ್ ಪಡೆದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಇಷ್ಟು ಹೆಚ್ಚು ಮುನ್ನಡೆ ಪಡೆದುಕೊಂಡಿದ್ದು ಅಪರೂಪ. ಹೀಗಾಗಿ ಈ ಮುನ್ನಡೆಯ ರನ್, ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಪಡೆದುಕೊಂಡ ಐದನೇ ಅತೀ ಹೆಚ್ಚಿನ ಮುನ್ನಡೆಯ ರನ್ ಆಗಿ ಗುರುತಿಸಿಕೊಂಡಿದೆ.

ಭಾರತ ವಿರುದ್ಧ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದುಕೊಂಡ ದಾಖಲೆಗಳು
(ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಆರಂಭಿಕ ಇನ್ನಿಂಗ್ಸ್‌ನಲ್ಲಿ ಪಡೆದುಕೊಂಡ ಐದನೇ ದೊಡ್ಡ ಸಂಖ್ಯೆಯ ಮುನ್ನಡೆಯಾಗಿ ಇಂಗ್ಲೆಂಡ್ ಸಾಧನೆ ದಾಖಲೆ ಪಟ್ಟಿ ಸೇರಿದೆ. ಅಂದ್ಹಾಗೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆ ಪಡೆದಿದ್ದಾಗ ಹೆಚ್ಚಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದೆ)
* 486 ಎಜ್‌ಬಾಸ್ಟನ್ 2011 (ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿತ್ತು)
* 380 ಚೆನ್ನೈ 1984/85 (ಇಂಗ್ಲೆಂಡ್‌ಗೆ ಜಯ)
* 386 ಲೀಡ್ಸ್ 1967 (ಇಂಗ್ಲೆಂಡ್‌ಗೆ ಜಯ)
* 368 ಓಲ್ಡ್ ಟ್ರಾಫರ್ಡ್ (ಪಂದ್ಯ ಡ್ರಾ)
* 354 ಲೀಡ್ಸ್ 2021* (ಫಲಿತಾಂಶ ಇನ್ನು ಗೊತ್ತಾಗಬೇಕಷ್ಟೆ)

Story first published: Friday, August 27, 2021, 23:46 [IST]
Other articles published on Aug 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+