
ರೋಹಿತ್ ಶರ್ಮಾ ಪ್ರಸ್ತುತ ಟೀಮ್ ಇಂಡಿಯಾವನ್ನು ಎಲ್ಲಾ ಮೂರು ಮಾದರಿಯಲ್ಲಿಯೂ ನಾಯಕನಾಗಿ ಮುನ್ನಡೆಸುತ್ತಿರುವ ಆಟಗಾರ. ಸದ್ಯ ಟೀಮ್ ಇಂಡಿಯಾದಲ್ಲಿರುವ ಎಲ್ಲಾ ಆಟಗಾರರಿಗಿಂತ ಸೀನಿಯರ್ ಎನಿಸಿಕೊಂಡಿರುವ ರೋಹಿತ್ ಶರ್ಮಾ 2007ರಲ್ಲಿಯೇ ಏಕದಿನ ಹಾಗೂ ಟಿ ಟ್ವೆಂಟಿ ಮಾದರಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು.
ಮೊದಲಿಗೆ ಅವಕಾಶಕ್ಕಾಗಿ ಕಷ್ಟದ ದಿನಗಳನ್ನು ಎದುರಿಸಿದ್ದ ರೋಹಿತ್ ಶರ್ಮಾ ಸಿಕ್ಕ ಅವಕಾಶಗಳನ್ನು ಸದುಪಯೋಗಿಸಿಕೊಂಡು ತಂಡದ ಖಾಯಂ ಸದಸ್ಯನಾಗಿ ಬಡ್ತಿ ಪಡೆದು ಸದ್ಯ ನಾಯಕನಾಗಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ನಾಯಕನಾಗಿ ಹಾಗೂ ಆಟಗಾರನಾಗಿ ರೋಹಿತ್ ಶರ್ಮಾ ಅನೇಕ ದಾಖಲೆಗಳನ್ನು ಮಾಡಿದ್ದು, ಆ ಪೈಕಿ ಈ ಕೆಳಕಂಡ ದಾಖಲೆಗಳನ್ನು ಮುರಿಯುವುದು ತೀರ ಕಷ್ಟ ಎಂದೇ ಹೇಳಬಹುದು.
* ಅತ್ಯಧಿಕ ಏಕದಿನ ರನ್: 2014ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 264 ರನ್‌ಗಳನ್ನು ಬಾರಿಸಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್ ಓರ್ವ ಬಾರಿಸಿರುವ ಅತ್ಯಧಿಕ ರನ್ ಆಗಿದ್ದು, ಈ ದಾಖಲೆಯನ್ನು ಇತರೆ ಆಟಗಾರರು ಮುರಿಯುವುದು ಕನಸಿನ ಮಾತು ಎಂದೇ ಹೇಳಬಹುದು.
* ಇದೇ ಇನ್ನಿಂಗ್ಸ್‌ನಲ್ಲಿ ರೋಹಿತ್ 33 ಬೌಂಡರಿಗಳನ್ನು ( 4 ) ಬಾರಿಸಿದ್ದರು. ಇದೂ ಸಹ ದಾಖಲೆಯಾಗಿದ್ದು, ಈ ದಾಖಲೆಯನ್ನು ಮುರಿಯುವುದೂ ಕೂಡ ಕಷ್ಟಸಾಧ್ಯ.
* ಏಕದಿನ ಕ್ರಿಕೆಟ್‌ನಲ್ಲಿ 3 ಬಾರಿ ದ್ವಿಶತಕ ಬಾರಿಸಿರುವ ಏಕೈಕ ಬ್ಯಾಟ್ಸ್‌ಮನ್ ಎಂಬ ದಾಖಲೆ ಸಹ ರೋಹಿತ್ ಶರ್ಮಾ ಹೆಸರಿನಲ್ಲಿದ್ದು, ಈ ದಾಖಲೆ ಮುರಿಯುವದೂ ಸಹ ಕಷ್ಟದ ಕೆಲಸವೇ.
* ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 150+ ರನ್ ಬಾರಿಸಿರುವ ಆಟಗಾರ ಎಂಬ ದಾಖಲೆ ಸಹ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ ಶರ್ಮಾ ಒಟ್ಟು 8 ಬಾರಿ 150+ ರನ್‌ಗಳನ್ನು ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ್ದಾರೆ.
* ವಿಶ್ವಕಪ್ ಟೂರ್ನಿಯೊಂದರಲ್ಲಿ ಅತಿಹೆಚ್ಚು ಶತಕ ಬಾರಿಸಿದ ದಾಖಲೆ ಸಹ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹೌದು, 2019ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 5 ಶತಕಗಳನ್ನು ಬಾರಿಸಿದ್ದರು.
* ವರ್ಷವೊಂದರಲ್ಲಿ ಏಳು ವಿವಿಧ ತಂಡಗಳ ವಿರುದ್ಧ ಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಸಹ ರೋಹಿತ್ ಶರ್ಮಾ ಹೆಸರಿನಲ್ಲಿದೆ. 2019ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಹೀಗೆ ಐದು ವಿವಿಧ ದೇಶಗಳ ವಿರುದ್ಧ ಶತಕಗಳನ್ನು ಬಾರಿಸಿದ್ದ ರೋಹಿತ್ ಶರ್ಮಾ ಅದೇ ವರ್ಷ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ವಿರುದ್ಧ ನಡೆದಿದ್ದ ಸರಣಿಗಳಲ್ಲಿಯೂ ಸಹ ತಲಾ ಒಂದೊಂದು ಶತಕ ಬಾರಿಸಿ ವರ್ಷವೊಂದರಲ್ಲಿ 7 ವಿವಿಧ ತಂಡಗಳ ವಿರುದ್ಧ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
* ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು ಐದು ಬಾರಿ ಟ್ರೋಫಿ ಗೆಲ್ಲಿಸಿರುವ ರೋಹಿತ್ ಶರ್ಮಾ ಐಪಿಎಲ್‌ನ ಅತ್ಯಂತ ಯಶಸ್ವಿಯುತ ನಾಯಕ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.