ಆಡಿದ್ದು 6, ಗೆದ್ದದ್ದೂ 6: ಇದು 'ರೋಹಿತ್ ಯುಗ'; ರೋಹಿತ್ ನಾಯಕತ್ವದಲ್ಲಿ ಗೆದ್ದ ಎಲ್ಲಾ ಸರಣಿಗಳ ಪಟ್ಟಿ

ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಅಡಿಯಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ಪ್ರಮುಖ ಲೀಗ್ ಪಂದ್ಯಗಳನ್ನು ಸೋಲುವುದರ ಮೂಲಕ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು. ಹೀಗೆ ಟೀಮ್ ಇಂಡಿಯಾ ತೀವ್ರ ಮುಖಭಂಗವನ್ನು ಅನುಭವಿಸಿದ ನಂತರ ಬಿಸಿಸಿಐ ನಾಯಕತ್ವದ ಬದಲಾವಣೆಗೆ ಕೈ ಹಾಕಿತು.
ಪರಿಣಾಮವಾಗಿ ಮೊದಲಿಗೆ ವಿರಾಟ್ ಕೊಹ್ಲಿ ಸೀಮಿತ ಓವರ್ ನಾಯಕತ್ವದಿಂದ ಕೆಳಗಿಳಿದು ರೋಹಿತ್ ಶರ್ಮಾ ಟೀಮ್ ಇಂಡಿಯಾದ ನೂತನ ಸೀಮಿತ ಓವರ್ ತಂಡಗಳ ನಾಯಕನಾಗಿ ಆಯ್ಕೆಗೊಂಡರು. ಕಾಲಕ್ರಮೇಣ ಟೆಸ್ಟ್ ತಂಡದ ನಾಯಕತ್ವವನ್ನು ಕೂಡ ವಿರಾಟ್ ಕೊಹ್ಲಿ ತ್ಯಜಿಸಿದರು ಹಾಗೂ ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕತ್ವವನ್ನೂ ಸಹ ವಹಿಸಿಕೊಂಡರು.
ಹೀಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಫುಲ್ ಟೈಮ್ ನಾಯಕನಾಗಿ ಅಧಿಕಾರವನ್ನು ಸ್ವೀಕರಿಸಿದ ನಂತರ ಇಲ್ಲಿಯವರೆಗೂ ಒಟ್ಟು 6 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ ಹಾಗೂ ಈ ಎಲ್ಲಾ ಸರಣಿಗಳಲ್ಲಿಯೂ ತಂಡವನ್ನು ಗೆಲ್ಲಿಸಿದ ಸಾಧನೆ ಮಾಡಿದ್ದಾರೆ. ಮೊದಲಿಗೆ 2021ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮೂಲಕ ಗೆಲುವಿನ ನಾಗಾಲೋಟವನ್ನು ಆರಂಭಿಸಿದ ರೋಹಿತ್ ಶರ್ಮಾ ಇಲ್ಲಿಯವರೆಗೂ ( ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯ ಮುಕ್ತಾಯದವರೆಗೆ ) ಮುನ್ನಡೆಸಿರುವ ಸರಣಿಗಳು ಹಾಗೂ ಅವುಗಳ ಫಲಿತಾಂಶದ ವಿವರದ ಪಟ್ಟಿ ಮುಂದೆ ಇದೆ ಓದಿ.

ರೋಹಿತ್ ಶರ್ಮಾ ನಾಯಕತ್ವದ ಸರಣಿಗಳು ಮತ್ತು ಫಲಿತಾಂಶ
ರೋಹಿತ್ ಶರ್ಮಾ ಪೂರ್ಣಾವಧಿ ನಾಯಕತ್ವವನ್ನು ವಹಿಸಿಕೊಂಡ ನಂತರ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ಎಲ್ಲಾ ಸರಣಿ ಪಟ್ಟಿ ಮತ್ತು ಫಲಿತಾಂಶದ ವಿವರ ಕೆಳಕಂಡಂತಿದೆ.
1. ಭಾರತ vs ನ್ಯೂಜಿಲೆಂಡ್ 3 ಪಂದ್ಯಗಳ ಟಿ ಟ್ವೆಂಟಿ ಸರಣಿ: ಎಲ್ಲಾ ಪಂದ್ಯಗಳಲ್ಲೂ ಟೀಮ್ ಇಂಡಿಯಾಗೆ ಜಯ
2. ಭಾರತ vs ವೆಸ್ಟ್ ಇಂಡೀಸ್ 3 ಪಂದ್ಯಗಳ ಏಕದಿನ ಸರಣಿ: ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾಗೆ ಜಯ
3. ಭಾರತ vs ವೆಸ್ಟ್ ಇಂಡೀಸ್ 3 ಪಂದ್ಯಗಳ ಟಿ ಟ್ವೆಂಟಿ ಸರಣಿ: ಎಲ್ಲಾ ಪಂದ್ಯಗಳಲ್ಲೂ ಟೀಮ್ ಇಂಡಿಯಾಗೆ ಗೆಲುವು
4. ಭಾರತ vs ಶ್ರೀಲಂಕಾ 3 ಪಂದ್ಯಗಳ ಟಿ ಟ್ವೆಂಟಿ ಸರಣಿ: ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾಗೆ ಗೆಲುವು
5. ಭಾರತ vs ಶ್ರೀಲಂಕಾ 2 ಪಂದ್ಯಗಳ ಟೆಸ್ಟ್ ಸರಣಿ: ಎರಡೂ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾಗೆ ಗೆಲುವು
6. ಭಾರತ vs ಇಂಗ್ಲೆಂಡ್ 3 ಪಂದ್ಯಗಳ ಟಿ ಟ್ವೆಂಟಿ ಸರಣಿ: ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾಗೆ ಗೆಲುವು, ಅಂತಿಮ ಪಂದ್ಯ ಬಾಕಿ

ಎಲ್ಲಾ ಸರಣಿಯಲ್ಲಿಯೂ ವೈಟ್ ವಾಶ್
ವಿಶೇಷವೆಂದರೆ ರೋಹಿತ್ ಶರ್ಮಾ ಮುನ್ನಡೆಸಿರುವ ಈ ಎಲ್ಲಾ ಸರಣಿಯಲ್ಲಿಯೂ ಟೀಮ್ ಇಂಡಿಯಾ ವೈಟ್ ವಾಷ್ ಸಾಧನೆ ಮಾಡಿದೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟ್ವೆಂಟಿ ಸರಣಿಯಲ್ಲಿಯೂ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದು ವೈಟ್ ವಾಷ್ ಮಾಡುವ ಸನಿಹದಲ್ಲಿದೆ.

ಪಾಂಟಿಂಗ್ ದಾಖಲೆ ಮುರಿಯುವ ಹಂತದಲ್ಲಿ ರೋಹಿತ್
ಇನ್ನು ಎಲ್ಲಾ ಮಾದರಿಯ ಕ್ರಿಕೆಟ್ ಸೇರಿ ಸತತ 19 ಪಂದ್ಯಗಳಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಜಯ ಸಾಧಿಸಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಜಯ ಸಾಧಿಸಿದರೂ 2003ರಲ್ಲಿ ಸತತ 20 ಪಂದ್ಯಗಳಲ್ಲಿ ನಾಯಕನಾಗಿ ಯಶಸ್ವಿಯಾಗಿದ್ದ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ರೋಹಿತ್ ಶರ್ಮಾ ಸರಿಗಟ್ಟಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications