ಅತಿಹೆಚ್ಚು ಟೆಸ್ಟ್ ರನ್ ಬಾರಿಸಿರುವ ನಿವೃತ್ತಿ ಹೊಂದದ ಆಟಗಾರರ ಟಾಪ್ 10 ಪಟ್ಟಿ; ಕೊಹ್ಲಿ ಅಲ್ಲ ನಂಬರ್ 1!

ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿ ಮುಕ್ತಾಯವಾದ ಬೆನ್ನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಗರಿಗೆದರಿದ್ದು ಹಲವಾರು ಸರಣಿಗಳು ಆಯೋಜನೆಯಾಗಿವೆ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಹೆಚ್ಚಿನ ಅಂತರರಾಷ್ಟ್ರೀಯ ಪಂದ್ಯಗಳು ನಡೆದಿರಲಿಲ್ಲ ಆದರೆ ಇದೀಗ ಸಾಲು ಸಾಲು ಸರಣಿಗಳು ನಡೆಯುತ್ತಿದ್ದು, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯೂ ಕೂಡ ಆರಂಭವಾಗಿದೆ.
ಇನ್ನು ಇತ್ತಂಡಗಳ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದ್ದು, ಜೂನ್ 2ರಿಂದ ಆರಂಭಗೊಂಡಿದ್ದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್‍ಗಳ ಜಯವನ್ನು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ 115 ರನ್‌ಗಳ ಅಜೇಯ ಆಟವನ್ನು ಆಡುವುದರ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಈ ಮಹತ್ವದ ಪಂದ್ಯದಲ್ಲಿ ಶತಕ ಬಾರಿಸುವುದರ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 10000 ರನ್‌ಗಳನ್ನು ಪೂರೈಸಿದ ಜೋ ರೂಟ್ ಟೆಸ್ಟ್ ಕ್ರಿಕೆಟ್‍ನಲ್ಲಿ ಈ ಮೈಲಿಗಲ್ಲನ್ನು ಮುಟ್ಟಿದ 14ನೇ ಕ್ರಿಕೆಟಿಗ ಎನಿಸಿಕೊಂಡರು. ಇನ್ನು ನಿವೃತ್ತಿ ಹೊಂದದೇ ಈಗಲೂ ಕ್ರಿಕೆಟ್ ಆಡುತ್ತಿರುವ ಆಟಗಾರರ ಪೈಕಿ ಹೆಚ್ಚು ಟೆಸ್ಟ್ ರನ್ ಬಾರಿಸಿರುವ ಆಟಗಾರ ಯಾರು ಮತ್ತು ಇದರ ಟಾಪ್ 10 ಪಟ್ಟಿ ಹೇಗಿದೆ ಎಂಬುದರ ಕುರಿತ ವಿವರ ಕೆಳಕಂಡಂತಿದೆ.

ಹೆಚ್ಚು ಟೆಸ್ಟ್ ರಬ್ ಬಾರಿಸಿರುವ ಸಕ್ರಿಯರಾಗಿರುವ ಆಟಗಾರರ ಟಾಪ್ 10 ಪಟ್ಟಿ
ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಸಕ್ರಿಯ ಆಟಗಾರರ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ.
1. ಜೋ ರೂಟ್ - ಇಂಗ್ಲೆಂಡ್ - 10015 ರನ್
2. ವಿರಾಟ್ ಕೊಹ್ಲಿ - ಭಾರತ - 8043 ರನ್
3. ಸ್ಟೀವ್ ಸ್ಮಿತ್ - ಆಸ್ಟ್ರೇಲಿಯಾ - 8010 ರನ್
4. ಡೇವಿಡ್ ವಾರ್ನರ್ - ಆಸ್ಟ್ರೇಲಿಯಾ - 7753 ರನ್
5. ಕೇನ್ ವಿಲಿಯಮ್ಸನ್ - ನ್ಯೂಜಿಲೆಂಡ್ - 7289 ರನ್
6. ಅಜರ್ ಅಲಿ - ಪಾಕಿಸ್ತಾನ - 7021 ರನ್
7. ಏಂಜೆಲೊ ಮ್ಯಾಥ್ಯೂಸ್ - ಶ್ರೀಲಂಕಾ - 6776 ರನ್
8. ಚೇತೇಶ್ವರ್ ಪೂಜಾರ - ಭಾರತ - 6713 ರನ್
9. ದಿಮುತ್ ಕರುಣರತ್ನೆ - ಶ್ರೀಲಂಕಾ - 5768 ರನ್
10. ಮುಷ್ಫಿಕರ್ ರಹೀಮ್ - ಬಾಂಗ್ಲಾದೇಶ - 5235 ರನ್

ವಿರಾಟ್ ಕೊಹ್ಲಿಗೆ ಎರಡನೇ ಸ್ಥಾನ
ಸಕ್ರಿಯವಾಗಿರುವ ಆಟಗಾರರ ಪೈಕಿ ಅತಿ ಹೆಚ್ಚು ಟೆಸ್ಟ್ ರನ್ ಬಾರಿಸಿರುವವರ ಪಟ್ಟಿಯಲ್ಲಿ ಜೋ ರೂಟ್ ಪ್ರಥಮ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 101 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 8043 ರನ್ ಕಲೆಹಾಕಿದ್ದಾರೆ. ಅತ್ತ ಒಟ್ಟು 118 ಟೆಸ್ಟ್ ಪಂದ್ಯಗಳನ್ನಾಡಿರುವ ರೂಟ್ 10015 ರನ್ ಬಾರಿಸಿದ್ದಾರೆ.

ಶತಕದ ವಿಚಾರದಲ್ಲಿ ಸ್ಮಿತ್, ಕೊಹ್ಲಿಯೇ ಟಾಪ್
ಇನ್ನು ಸಕ್ರಿಯರಾಗಿರುವ ಆಟಗಾರರ ಪೈಕಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿರುವ ಆಟಗಾರ ಎಂಬ ಮೈಲಿಗಲ್ಲನ್ನು ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ನೆಟ್ಟಿದ್ದಾರೆ. ಇಬ್ಬರೂ ಸಹ ತಲಾ 27 ಟೆಸ್ಟ್ ಶತಕಗಳನ್ನು ಬಾರಿಸಿದ್ದು, ಸಕ್ರಿಯರಾಗಿರುವ ಆಟಗಾರರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಆಟಗಾರರು ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications