ಏಕದಿನ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ 4000 ರನ್ ಪೂರೈಸಿ ಅಬ್ಬರಿಸಿರುವ ಮೂವರು ಆಟಗಾರರಿವರು

ಟಿ ಟ್ವೆಂಟಿ ಕ್ರಿಕೆಟ್ ಮಾದರಿ ಕ್ರಿಕೆಟ್ ಜಗತ್ತಿಗೆ ಪರಿಚಯವಾದ ನಂತರ ಆಟಗಾರರು ಹೊಡಿಬಡಿ ಆಟವನ್ನು ಹೆಚ್ಚಾಗಿ ಅಡಲು ಶುರು ಮಾಡಿದರು ಎಂದರೆ ತಪ್ಪಾಗಲಾರದು. ಈ ಟಿ ಟ್ವೆಂಟಿ ಮಾದರಿ ಪರಿಚಯವಾದ ನಂತರ ಬ್ಯಾಟ್ಸ್‌ಮನ್‌ಗಳು ಏಕದಿನ ಹಾಗೂ ಕೆಲವು ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಪಂದ್ಯಗಳಲ್ಲಿಯೂ ಅಬ್ಬರದ ಬ್ಯಾಟಿಂಗ್ ನಡೆಸುವುದನ್ನು ರೂಢಿ ಮಾಡಿಕೊಂಡಿದ್ದಾರೆ.
ಹೀಗಾಗಿಯೇ ಇತ್ತೀಚೆಗಿನ ಏಕದಿನ ಪಂದ್ಯಗಳಲ್ಲಿ ಈ ಹಿಂದೆಗಿಂತ ಹೆಚ್ಚು ರನ್ ಹೊಳೆ ಹರಿಯುತ್ತಿದ್ದು, ತಂಡದ ಮೊತ್ತವೂ ಸಹ ದೊಡ್ಡ ಮಟ್ಟದಲ್ಲಿದೆ. ಇನ್ನು ಆಟಗಾರರು ವೈಯಕ್ತಿಕವಾಗಿ ಏಕದಿನ ಕ್ರಿಕೆಟ್‌ನಲ್ಲಿ ವಿವಿಧ ದಾಖಲೆಗಳನ್ನು ನಿರ್ಮಿಸಿದ್ದು, ಬ್ಯಾಟ್ಸ್‌ಮನ್‌ಗಳು ಅತಿ ಹೆಚ್ಚು ಶತಕ, ಅತಿ ವೇಗದ ಶತಕ ಹೀಗೆ ಹಲವಾರು ದಾಖಲೆಗಳನ್ನು ಬರೆದು ಅಬ್ಬರಿಸಿದ್ದಾರೆ.
ಆದರೆ, ಕೆಲವು ಬ್ಯಾಟ್ಸ್‌ಮನ್‌ಗಳು ಮಾತ್ತ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಬಲು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ಅಪರೂಪದ ದಾಖಲೆಗಳ ಪೈಕಿ ಅತಿ ಕಡಿಮೆ ಎಸೆತಗಳಲ್ಲಿ 4000 ಏಕದಿನ ರನ್ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೂಡ ಒಂದು. ಈ ದಾಖಲೆಯನ್ನು ಈ ಹಿಂದೆ ಪಾಕಿಸ್ತಾನದ ಶಾಹಿದ್ ಅಫ್ರದಿ ತಮ್ಮ ಹೆಸರಿನಲ್ಲಿ ಹೊಂದಿದ್ದರು. ಆದರೆ, ಇತ್ತೀಚೆಗಷ್ಟೆ ಈ ವಿಶೇಷ ದಾಖಲೆಯಲ್ಲಿ ಶಾಹಿದ್ ಅಫ್ರಿದಿ ಅವರನ್ನು ಆಟಗಾರನೋರ್ವ ಹಿಂದಿಕ್ಕಿದ್ದು, ಅತಿ ಕಡಿಮೆ ಎಸೆತಗಳಲ್ಲಿ 4000 ಏಕದಿನ ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಹೀಗೆ ಏಕದಿನ ಕ್ರಿಕೆಟ್ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 4000 ರನ್ ಬಾರಿಸಿದ ಆಟಗಾರರ ಟಾಪ್ 3 ಪಟ್ಟಿ ಈ ಕೆಳಕಂಡಂತಿದೆ.

3. ಡೇವಿಡ್ ವಾರ್ನರ್
ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 4128 ಎಸೆತಗಳಲ್ಲಿ 4000 ಏಕದಿನ ರನ್ ಪೂರೈಸಿ ಏಕದಿನ ಕ್ರಿಕೆಟ್‍ನಲ್ಲಿ ಅತಿವೇಗವಾಗಿ 4000 ರನ್ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

2. ಶಾಹಿದ್ ಅಫ್ರಿದಿ
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ 3930 ಎಸೆತಗಳಲ್ಲಿ 4000 ಏಕದಿನ ರನ್ ಬಾರಿಸಿ ಏಕದಿನ ಕ್ರಿಕೆಟ್ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 4000 ರನ್ ಕಲೆಹಾಕಿದ್ದು, ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

1. ಜೋಸ್ ಬಟ್ಲರ್
ಇತ್ತೀಚಿಗಷ್ಟೇ ನಡೆದ ನೆದರ್ಲೆಂಡ್ಸ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ 70 ಎಸೆತಗಳಲ್ಲಿ ಅಜೇಯ 162 ರನ್ ಹಾಗೂ ತೃತೀಯ ಪಂದ್ಯದಲ್ಲಿ 64 ಎಸೆತಗಳಲ್ಲಿ ಅಜೇಯ 86 ರನ್ ಚಚ್ಚಿ ಮಿಂಚಿದ ಜೋಸ್ ಬಟ್ಲರ್ ಅತಿ ಕಡಿಮೆ ಎಸೆತಗಳಲ್ಲಿ 4000 ಏಕದಿನ ರನ್‌ಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಜೋಸ್ ಬಟ್ಲರ್ ಕೇವಲ 3281 ಎಸೆತಗಳಲ್ಲಿ 4000 ಏಕದಿನ ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications