For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 8 ಹರಾಜು: ಯುವರಾಜ್ ಮತ್ತೆ ಹೆಚ್ಚು ಮೊತ್ತಕ್ಕೆ ಸೇಲ್

By Mahesh

ಬೆಂಗಳೂರು, ಫೆ.16: ಇಂಡಿಯನ್ ಪ್ರಿಮಿಯರ್ ಲೀಗ್ 8ನೇ ಆವೃತ್ತಿ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆದಿದೆ. ಐಪಿಎಲ್ 8 ಟೂರ್ನಿ ಏಪ್ರಿಲ್ 8 ರಿಂದ ಮೇ 24ರ ತನಕ ನಡೆಯಲಿದೆ.

ಸುಮಾರು 343 ಆಟಗಾರರು ಹರಾಜಿಗೆ ಮುಕ್ತರಾಗಿದ್ದರು. ಯುವರಾಜ್ ಸಿಂಗ್, ಹಶೀಂ ಆಮ್ಲಾ, ಕೆವಿನ್ ಪೀಟರ್ಸನ್, ದಿನೇಶ್ ಕಾರ್ತಿಕ್ ಮೇಲೆ ಎಲ್ಲರ ಕಣ್ಣು ನೆಟ್ಟಿತು. ಶ್ರೀಲಂಕಾದ ದಿಗ್ಗಜರಾದ ಮಹೇಲ ಜಯವರ್ದನೆ, ಕುಮಾರ್ ಸಂಗಕ್ಕಾರ ಅವರು ಸೇಲ್ ಆಗುವರೇ? ಎಂಬ ಕುತೂಹಲವೂ ಮನೆ ಮಾಡಿತ್ತು. [ವಿಶ್ವಕಪ್ ತಂಡದಿಂದ ಯುವಿ ಹೊರ ಹಾಕಿದ್ದು ಧೋನಿ]

LIVE: IPL 8 Players' Auction - Yuvraj Singh gets Rs 16 crores

2016 ಮತ್ತು 2017 ಐಪಿಎಲ್ ವೇಳಾಪಟ್ಟಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಗಿದೆ. 2016ರ (9ನೇ) ಆವೃತ್ತಿಯ ಪಂದ್ಯಗಳು ಏಪ್ರಿಲ್‌ 8ಕ್ಕೆ ಆರಂಭವಾಗಿ ಮೇ 30ಕ್ಕೆ ಕೊನೆಗೊಂಡರೆ, 2017ರ (10ನೇ) ಆವೃತ್ತಿಯ ಟೂರ್ನಿಯು ಏಪ್ರಿಲ್‌ 5ರಿಂದ ಮೇ 21ರವರೆಗೆ ನಡೆಯಲಿದೆ. ತಂಡದ ಒಟ್ಟು ಆಟಗಾರರ ಸಂಖ್ಯೆ 27 ಮೀರಬಾರದು, ವಿದೇಶಿ ಆಟಗಾರರು 9ಕ್ಕಿಂತ ಅಧಿಕ ಇರಬಾರದು.

ಹರಾಜು ಅಪ್ದೇಟ್ಸ್:
5.05 PM : ಐಪಿಎಲ್ 8 ಹರಾಜು ಪ್ರಕ್ರಿಯೆ ಮುಕ್ತಾಯ.
* ಹರಾಜು ಮುಗಿಯುತ್ತಿದ್ದಂತೆ ತಂಡಗಳ ಬಳಿ ಇರುವ ಮೊತ್ತ, ಸದಸ್ಯರ ಸಂಖ್ಯೆ
* ಸಿಎಸ್ ಕೆ: 70 ಲಕ್ಷ ರು (ತಂಡದ ಬಲ 25)
* ಡಿಡಿ: 1.35 ಕೋಟಿ ರು (25)
* ಕಿಂಗ್ಸ್ ‍XI ಪಂಜಾಬ್: 9.2 ಕೋಟಿ ರು. (22)
* ಕೆಕೆಆರ್ : 9.2 ಕೋಟಿ ರು. (23)
* ಮುಂಬೈ ಇಂಡಿಯನ್ಸ್ : 4.95 ಕೋಟಿ ರು (23)
* ರಾಜಸ್ಥಾನ ರಾಯಲ್ಸ್ : 10.65 ಕೋಟಿ ರು (25)
* ಆರ್ ಸಿಬಿ : 9.35 ಕೋಟಿ ರು (23)
* 23 ವಿದೇಶಿ ಆಟಗಾರರು ಸೇರಿ ಒಟ್ಟು 67 ಆಟಗಾರರು ಹರಾಜು. 87.6 ಕೋಟಿ ರು ಖರ್ಚು,
* ಕುಮಾರ್ ಸಂಗಕ್ಕಾರ ಯಾವ ತಂಡವೂ ಖರೀದಿಸಿಲ್ಲ.

* ಎಸ್ ವಿ ತ್ರಿವೇದಿ 10 ಲಕ್ಷ ರು ಖರೀದಿಸಿದ ರಾಜಸ್ಥಾನ ರಾಯಲ್ಸ್.
* ರಾಜಸ್ಥಾನ ರಾಯಲ್ಸ್ ತಂಡಕ್ಕೆ ಜುವಾನ್ ಥೆರಾನ್ 30 ಲಕ್ಷಕ್ಕೆ ಹರಾಜು.
* ಮುಂಬೈ ತಂಡಕ್ಕೆ ಐಡೆನ್ ಬ್ಲಿಜ್ಜಾರ್ಡ್ 30 ಲಕ್ಷಕ್ಕೆ ಸೇಲ್.
* ಸಿಎಸ್ ಕೆ ತಂಡಕ್ಕೆ ಏಕಲವ್ಯ ದ್ವಿವೇದಿ 10 ಲಕ್ಷ ರು.ಗೆ.
* ಕನ್ನಡಿಗ ಅಭಿಮನ್ಯು ಮಿಥುನ್ 30 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲು.
*
ಸಿದ್ದಾಥ್ ಕೌಲ್ ಸನ್ ರೈಸರ್ಸ್ ತಂಡಕ್ಕೆ (10 ಲಕ್ಷ ರು)
* ಚೆನ್ನೈ ಪಾಲಾದ ಆಂಡ್ರ್ಯೂ ಟೈ(20 ಲಕ್ಷ ರು)
* ಡೆಲ್ಲಿ ಪಾಲಾದ ಕೆಕೆ ಜಿಯಾಜ್ (10 ಲಕ್ಷ ರು)
* ಜಹೀರ್ ಖಾನ್ ಗಾಗಿ ಮುಂಬೈ ಹಾಗೂ ಡಿಡಿ ಕಿತ್ತಾಟ, ಕೊನೆಗೆ 4 ಕೋಟಿ ರು ಕೊಟ್ಟು ಖರೀದಿಸಿದ ಡೆಲ್ಲಿ ತಂಡ.

LIVE: IPL 8 Players' Auction - Yuvraj Singh gets Rs 16 crores

* ಕಿಂಗ್ಸ್ XI ತಂಡಕ್ಕೆ ಯೋಗೇಶ್ ಗೊಲ್ವಕರ್ (10 ಲಕ್ಷ ರು),
* ಮುಂಬೈ ತಂಡಕ್ಕೆ ಹಾರ್ದಿಕ್ ಪಾಂಡ್ಯ(10 ಲಕ್ಷ ರು)
* ರಾಜಸ್ಥಾನ ತಂಡಕ್ಕೆ ದಿನೇಶ್ ಸಾಲುಂಖೆ (10 ಲಕ್ಷ ರು)
* ಚೆನ್ನೈ ತಂಡ ಸೇರಿದ ಪ್ರತ್ಯೂಷ್ ಸಿಂಗ್ (10 ಲಕ್ಷ ರು)
* ಜೆ ಸುಚಿತ್ ಮುಂಬೈಗೆ(10 ಲಕ್ಷ ರು)
* ಮಾರ್ಕಸ್ ಸ್ಟಯಿನಿಸ್ ಡೆಲ್ಲಿಗೆ (25 ಲಕ್ಷ ರು)
* ಪಿ ಪದ್ಮನಾಭನ್ ಸನ್ ರೈಸರ್ಸ್ ತಂಡಕ್ಕೆ (10 ಲಕ್ಷ ರು)
* ಮುಂಬೈ ತಂಡಕ್ಕೆ ನಿತೀಶ್ ರಾಣಾ (10 ಲಕ್ಷ ರುಗೆ)
* ರಾಜಸ್ಥಾನ ತಂಡಕ್ಕೆ ಪ್ರದೀಪ್ ಸಾಹು (10 ಲಕ್ಷ ರು)
* ಕೆಕೆಆರ್ ತಂಡಕ್ಕೆ ವೈಭವ್ ರಾವಲ್ (10 ಲಕ್ಷ ರು)
4.05: ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ ವೇಗಿ ಇರ್ಫಾನ್ ಪಠಾಣ್ (1.5 ಕೋಟಿ ರು)
* ಸೇಲ್ ಆಗದ ಆಟಗಾರರು:
ಕ್ರೇಗ್ ಸಿಮನ್ಸ್, ನಿಖಿಲ್ ಗಂಗ್ಟ, ಪ್ರಶಾಂತ್ ಛೋಪ್ರಾ, ಸುಜಿತ್ ನಾಯಕ್, ಅಖಿಲ್ ಹೆರ್ವಾಡ್ಕರ್, ಅರ್ಜಿತ್ ಗುಪ್ತ, ರಾಬಿನ್ ಬಿಸ್ತ್
* ಕೆಕೆಆರ್ ಗೆ ಶೆಲ್ಡನ್ ಜಾಕ್ಸನ್ (50 ಲಕ್ಷ ರು.ಗೆ)
* ಚೆನ್ನೈ ತಂಡಕ್ಕೆ ಅಂಕುನ್ ಬೈನ್ಸ್ (10 ಲಕ್ಷ ರು. ಗೆ)
* ಆರ್ ಸಿಬಿ ತಂಡಕ್ಕೆ ಶಿಶಿರ್ ಭವಾನೆ (10 ಲಕ್ಷ ರು.ಗೆ)
* ಡೆಲ್ಲಿ ತಂಡಕ್ಕೆ ಟ್ರಾವೀಸ್ ಹೆಡ್ (30 ಲಕ್ಷ ರು.ಗೆ)
* ಸೇಲ್ ಆಗದ ಆಟಗಾರರು:
ಏಕಲವ್ಯ ದ್ವಿವೇದಿ, ಮೈಕಲ್ ಕ್ಲಿಂಗರ್, ಮನ್ ಪ್ರೀತ್ ಜುನೇಜ, ಅಂಕೀತ್ ಬವಾನೆ.

* 1.55 ರಿಂದ ಭೋಜನ ವಿರಾಮ:
156 ಅಟಗಾರರ ಮಾರಾಟ ಪೂರ್ಣ. 39 ಜನ ಸೇಲ್, 78.8 ಕೋಟಿ ಖರ್ಚು, ಕೆಕೆಆರ್, ಆರ್ ಸಿಬಿಯಲ್ಲಿ ವಿದೇಶಿ ಆಟಗಾರರು ಸೇರ್ಪಡೆಯಾಗಿಲ್ಲ. 3.15PM ರ ನಂತರ ಮುಂದಿನ ಹರಾಜು.

* ಕೆಕೆಆರ್ ನಿಂದ ಅಚ್ಚರಿಯ ಖರೀದಿ, ಲೆಗ್ ಸ್ಪಿನ್ನರ್ ಕೆಸಿ ಕಾರಿಯಪ್ಪ 2.4 ಕೋಟಿ ರುಗೆ ಬಿಕರಿ.

IPL 8 Players' Auction - Yuvraj Singh gets Rs 16 crores


* ಸೇಲ್ ಆಗದ ಲೆಗ್ ಸ್ಪಿನ್ನರ್ಸ್ : ಶಬಾದ್ ಜಕಾತಿ, ಭಾರ್ಗವ್ ಭಟ್, ರಾಹುಲ್ ಎಸ್ ಶಾ.

* ಮುಂಬೈ ಇಂಡಿಯನ್ಸ್ ಪಾಲಾದ ಅಕ್ಷಯ್ ವಾಖರೆ(10 ಲಕ್ಷ ರು)
* ಸೇಲ್ ಆಗದ ಸ್ಪಿನ್ನರ್ಸ್: ಅಲಿ ಮುರ್ತಜಾ, ಮಿಹಿರ್ ಹಿರ್ವಾನಿ, ಸರಬ್ಜಿತ್ ಲಡ್ಡಾ.
* ಡಿಜೆ ಮುತ್ತುಸ್ವಾಮಿ ಡೆಲ್ಲಿ ಡೇರ್ ಡೆವಿಲ್ಸ್ ಗೆ 75 ಲಕ್ಷಕ್ಕೆ ಸೇಲ್.
* ಸೇಲ್ ಆಗದ ವೇಗಿಗಳು: ಕೃಷ್ಣಕಾಂತ್ ಉಪಾಧ್ಯಾಯ್, ಬಾಸಿಲ್ ಥಮಿ, ರಾಹುಲ್ ಶುಕ್ಲಾ, ಅಮಿತ್ ಮಿಶ್ರಾ(ವೇಗಿ), ಪ್ರದೀಪ್ ಸಂಗ್ವಾನ್, ಕರ್ನಾಟಕದ ಎಸ್ ಅರವಿಂದ್, ಎಚ್ ಎಸ್ ಶರತ್.
* ಸೇಲ್ ಆಗದ ಆಟಗಾರರು: ಐರ್ಲೆಂಡ್ ನ ಕೆವಿನ್ ಓ ಬ್ರಿಯಾನ್, ಅಶೋಕ್ ಮನೇರಿಯಾ, ರಾಬ್ಬಿ ಫ್ರಾಯ್ ಲಿಂಕ್, ಆಂಡ್ರ್ಯೂ ಟೈ.

* ಸುಮಿತ್ ನರ್ವಾಲ್ ಕೆಕೆಆರ್ ಪಾಲು (10 ಲಕ್ಷ ರು)

* ಕೆಕೆಆರ್ ಪಾಲಾದ ಆದಿತ್ಯಾ ಗರ್ಹ್ವಾಲ್ (25 ಲಕ್ಷ ರು).
* ಸೇಲ್ ಆಗದ ಯುವ ಆಲ್ ರೌಂಡರ್ಸ್:
ಜೇಸಲ್ ಕಾರಿಯ, ರಾಮ್ ದಯಾಳ್ ಪೂನಿಯಾ, ಕೆವಾನ್ ಕೂಪರ್,
* ಸೇಲ್ ಆಗದ ಯುವ ಪ್ರತಿಭೆಗಳು:
ಅಮಿತ್ ಪೌನಿಕರ್, ಅಂಕುಶ್ ಬೇನ್ಸ್, ಸ್ಮಿತ್ ಪಟೇಲ್, ಸುಶಾಂತ್ ಮರಾಠೆ.

* ಕಿಂಗ್ಸ್ ‍XI ಪಂಜಾಬ್ ಸೇರಿದ ನಿಖಿಲ್ ನಾಯಕ್ (30 ಲಕ್ಷರು)

* ಆರ್ ಸಿಬಿ ತಂಡ ಸೇರಿದ 17 ವರ್ಷ ವಯಸ್ಸಿನ ಮುಂಬೈನ ಸರ್ಫಾಝ್ ಖಾನ್ (50 ಲಕ್ಷ ರು)
* ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಿಎಂ ಗೌತಮ್ ರನ್ನು 20 ಲಕ್ಷ ರು ನೀಡಿ ಪಡೆದ ಡೆಲ್ಲಿ ಡೇರ್ ಡೆವಿಲ್ಸ್.

* ಸೇಲ್ ಆಗದ ವಿಕೆಟ್ ಕೀಪರ್:
ಡೇವಿ ಜಾಕಬ್ಸ್, ಶ್ರೀವತ್ಸ್ ಗೋಸ್ವಾಮಿ, ಕೆಬಿ ಅರುಣ್ ಕಾರ್ತಿಕ್,

* ಸೇಲ್ ಆಗದ ಆಟಗಾರರು:
ಶೇಲ್ಡನ್ ಜಾಕ್ಸನ್, ಮೊಹ್ನಿಶ್ ಮಿಶ್ರಾ, ದೇವವ್ರತ ದಾಸ್, ಬ್ಲಿಜ್ಜಾರ್ಡ್, ಯೋಗೇಶ್ ನಗರ್, ಪರದ್ ಡೋಗ್ರಾ.

* ಹೈದರಾಬಾದ್ ಸೇರಿದ ಹನುಮ ವಿಹಾರಿ 10 ಲಕ್ಷ ರು ಬೆಲೆಗೆ ಮಾರಾಟ.

* ಡೆಲ್ಲಿ ತಂಡದಿಂದ ಅಚ್ಚರಿಯ ಖರೀದಿ. 10 ಲಕ್ಷ ಮುಖಬೆಲೆಯ ಶ್ರೇಯಸ್ ಅಯ್ಯರ್ ಗೆ 2.6 ಕೋಟಿ ರು ನೀಡಿ ಖರೀದಿ.

* ಸೇಲ್ ಆಗದಿರುವ ಆಟಗಾರರು:
ಆಸ್ಟನ್ ಅಗರ್, ಸೀಕುಗೆ ಪ್ರಸನ್ನ, ಕಾರ್ಲೊಸ್ ಬ್ರಥ್ವೈಟ್, ವಾನ್ ಡರ್ ಮರ್ವೆ, ಎಲ್ಟಾನ್ ಚಿಗುಂಬರ, ಜಸ್ಟಿನ್ ಆನ್ ಟಾಂಗ್, ಕ್ರಿಸ್ಟೋಫರ್ ಬಾರ್ನ್ ವೆಲ್, ಪೀಟರ್ ಸಿಡ್ಲ್, ಧಮ್ಮಿಕ ಪ್ರಸಾದ್, ಕೃಷ್ಮಾರ್ ಸಂಟೋಕಿ, ಥಿಲಾನ್ ತುಷರ, ಲೊಂವಾಬೊ ಸೊಸೊಬೆ, ಸುರಂಗಾ ಲಕ್ಮಲ್, ಸುದೀಪ್ ತ್ಯಾಗಿ, ಶಾನ್ ಟೈಟ್, ಡಿರ್ಕ್ ನ್ಯಾನ್ಸ್, ನುವಾನ್ ಕುಲಶೇಖರ, ಹಮೀಷ್ ಬೆನೆಟ್.

* ಸೇಲ್ ಆಗದ ಆಲ್ ರೌಂಡರ್ಸ್: ಸೂರಜ್ ರಂಧೀವ್, ಫರ್ವೇಜ್ ಮಹರೂಫ್, ಫರ್ಹಾನ್ ಬೆಹರ್ದೀನ್, ಜೋಗಿಂದರ್ ಶರ್ಮ, ಜೋನಾಥನ್ ಕಾರ್ಟರ್, ನಾಥನ್ ರೀರ್ಡನ್, ಡಾಗ್ ಬ್ರೇಸ್ ವೆಲ್, ಗ್ರಾಂಡ್ ಎಲಿಯಟ್, ಅಂಟೋನ್ ಡೆವ್ ಕಿಚ್.

* ಸೇಲ್ ಆಗದ ವೇಗಿಗಳು: ಲಕ್ಷ್ಮಿಪತಿ ಬಾಲಾಜಿ, ಆರ್ ಪಿ ಸಿಂಗ್.
*
2008ರಲ್ಲಿ ಐಪಿಎಲ್ ಪಂದ್ಯಾವಳಿ ಆರಂಭವಾದಾಗಿನಿಂದಲೂ ಆಟಗಾರರ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಂಡು ಬಂದಿರುವ ಇಂಗ್ಲೆಂಡ್‌ನ ರಿಚರ್ಡ್ ಮಡ್ಲೆ ಅವರೇ ಈ ಬಾರಿಯ ಆಟಗಾರರ ಹರಾಜನ್ನೂ ನಡೆಸಿಕೊಡುತ್ತಿರುವುದು ವಿಶೇಷ.

* ಚೆನ್ನೈ ಸೂಪರ್ ಕಿಂಗ್ಸ್ : 4.8 ಕೋಟಿ ರು .
* ಡೆಲ್ಲಿ ಡೇರ್ ಡೆವಿಲ್ಸ್ : 39.75 ಕೋಟಿ ರು .
* ಕಿಂಗ್ಸ್ XI ಪಂಜಾಬ್ : 12.60 ಕೋಟಿ ರು .
* ಕೋಲ್ಕತ್ತಾ ನೈಟ್ ರೈಡರ್ಸ್ : 13.2 ಕೋಟಿ ರು .
* ಮುಂಬೈ ಇಂಡಿಯನ್ಸ್: 10.05 ಕೋಟಿ ರು .
* ರಾಜಸ್ಥಾನ್ ರಾಯಲ್ಸ್: 12.75 ಕೋಟಿ ರು .
* ರಾಯಲ್ ಚಾಲೆಂಜರ್ಸ್ ಬೆಂಗಳೂರು : 20.80 ಕೋಟಿ ರು .
* ಸನ್ ರೈಸರ್ಸ್ ಹೈದರಾಬಾದ್ : 21.05 ಕೋಟಿ ರು.

ಹರಾಜು ಅಪ್ದೇಟ್ಸ್:

ಮೊದಲ ಸೆಷನ್ ಹರಾಜು
* ಯುವರಾಜ್ ಸಿಂಗ್ : 16 ಕೋಟಿ (ಡಿಡಿ)
* ದಿನೇಶ್ ಕಾರ್ತಿಕ್: 10.5 ಕೋಟಿ (ಆರ್ ಸಿಬಿ)
* ಏಂಜೆಲೋ ಮ್ಯಾಥ್ಯೂಸ್ : 7.5 ಕೋಟಿ ರು (ಡಿಡಿ)
* ಅಮಿತ್ ಮಿಶ್ರಾ: 3.5 ಕೋಟಿ ರು (ಡಿಡಿ)
* ಅರೋನ್ ಫಿಂಚ್: 3.2 ಕೋಟಿ ರು (ಡಿಡಿ)
* ಮುರಳಿ ವಿಜಯ್ : 3 ಕೋಟಿ ರು (ಕಿಂಗ್ಸ್ ‍XI)
* ಕೆವಿನ್ ಪೀಟರ್ಸನ್ : 2 ಕೋಟಿ ರು (ಸನ್ ರೈಸರ್ಸ್ ಹೈದರಾಬಾದ್)
* ಇಯಾನ್ ಮಾರ್ಗನ್ : 1.5 ಕೊಟಿ ರು (ಸನ್ ರೈಸರ್ಸ್ ಹೈದರಾಬಾದ್)
* ಕೇನ್ ವಿಲಿಯಮ್ಸನ್ : 60 ಲಕ್ಷ (ಸನ್ ರೈಸರ್ಸ್ ಹೈದರಾಬಾದ್)

ಎರಡನೇ ಸೆಷನ್ (ಬ್ಯಾಟ್ಸ್ ಮನ್, ವಿಕೆಟ್ ಕೀಪರ್, ಆಲ್ ರೌಂಡರ್, ಬೌಲರ್ಸ್)
ಬ್ಯಾಟ್ಸ್ ಮನ್
* ಎಸ್ ಬದ್ರಿನಾಥ್ : 30 ಲಕ್ಷ (ಆರ್ ಸಿಬಿ)
* ಅರೋನ್ ಫಿಂಚ್ : 3.2 ಕೋಟಿ ರು (ಮುಂಬೈ ಇಂಡಿಯನ್ಸ್)
* ಮೈಕಲ್ ಹಸ್ಸಿ : 1.5 ಕೋಟಿ ರು (ಸಿಎಸ್ ಕೆ)
*****
ಆಲ್ ರೌಂಡರ್ಸ್
* ಜೇಮ್ಸ್ ನೀಷಂ: 50 ಲಕ್ಷ ರು (ಕೆಕೆಆರ್)
* ರವಿ ಬೋಪಾರಾ: 1 ಕೋಟಿ ರು (ಸನ್ ರೈಸರ್ಸ್ ಹೈದರಾಬಾದ್)
* ಕ್ರಿಸ್ ಮೋರಿಸ್: 1.8 ಕೋಟಿ ರು (ಆರ್ ಆರ್)
* ಲಕ್ಷ್ಮಿ ರತನ್ ಶುಕ್ಲಾ : 30 ಲಕ್ಷ (ಎಸ್ ಆರ್ ಎಚ್)
* ಡರೇನ್ ಸಾಮಿ : 2.8 ಕೋಟಿ ರು (ಆರ್ ಸಿಬಿ)
* ಡೇವಿಡ್ ವೈಸಿ : 2.8 ಕೋಟಿ ರು (ಆರ್ ಸಿಬಿ)
*****
ವೇಗದ ಬೌಲರ್ಸ್
* ಪ್ರವೀಣ್ ಕುಮಾರ್ : 2.2 ಕೋಟಿ ರು (ಎಸ್ ಆರ್ ಎಚ್)
* ಟ್ರೆಂಟ್ ಬೋಲ್ಟ್: 3.8 ಕೋಟಿ ರು (ಎಸ್ ಆರ್ ಎಚ್)
* ಜಯದೇವ್ ಉನದ್ಕಟ್ 1.1 ಕೋಟಿ ರು (ಡಿಡಿ)
* ಆಡಂ ಮಿಲ್ನೆ: 70 ಲಕ್ಷ ರು (ಆರ್ ಸಿಬಿ)
**
ಸ್ಪಿನ್ನರ್ಸ್
* ಪ್ರಗ್ನಾನ್ ಓಜಾ : 50 ಲಕ್ಷ ರು (ಮುಂಬೈ ಇಂಡಿಯನ್ಸ್)
* ರಾಹುಲ್ ಶರ್ಮ : 30 ಲಕ್ಷ ರು ( ಸಿಎಸ್ ಕೆ)
* ಬ್ರಾಡ್ ಹಾಗ್ : 50 ಲಕ್ಷ ರು (ಕೆಕೆಆರ್)

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+