ಭಾರತ ಹಾಗೂ ಆಸ್ಟ್ರೇಲಿಯಾ ಸೆಮಿಫೈನಲ್ ಅಪ್ಡೇಟ್ಸ್
ಸಿಡ್ನಿ, ಮಾ.26: ಸಿಡ್ನಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ 2015ರ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗಳಿಗೆ ಭಾರಿ ಮುಖಭಂಗವಾಗಿದೆ. ಭಾರತ ವಿರುದ್ಧ 95ರನ್ ಗಳಿಂದ ಪಂದ್ಯ ಗೆದ್ದ ಅತಿಥೇಯ ಆಸ್ಟ್ರೇಲಿಯಾ ಮಾ. 29ರಂದು ನ್ಯೂಜಿಲೆಂಡ್ ತಂಡವನ್ನು ಮೆಲ್ಬೋರ್ನ್ ನಲ್ಲಿ ಅಂತಿಮ ಹಣಾಹಣಿಯಲ್ಲಿ ಎದುರಿಸಲಿದೆ.

ಗ್ಯಾಲರಿ: ಆಸ್ಟ್ರೇಲಿಯಾ vs ಭಾರತ ಪಂದ್ಯ ಸಿಡ್ನಿಯಿಂದ ನೇರ ಚಿತ್ರಗಳು
ಟೀಂ ಇಂಡಿಯಾ ಚೇಸ್:
* ವಿಶ್ವಕಪ್ ಫೈನಲ್ ಗೆ ತಂಡ ಸೇರಿಸಲಾಗಲಿಲ್ಲ ಎಂಬ ಕೊರಗಿದೆ. ಆದರೆ, ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ ಎಂದು ಎಂಎಸ್ ಧೋನಿ.
* ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾಕ್ಕೆ 95ರನ್ ಗಳ ಅಂತರದ ಜಯ. 7ನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶ.
* 46.5 ಓವರ್ ಗಳಲ್ಲಿ 233 ಸ್ಕೋರಿಗೆ ಟೀಂ ಇಂಡಿಯಾ ಆಲೌಟ್
* ಆಸ್ಟ್ರೇಲಿಯಾ ಪರ ಫಾಲ್ಕ್ನರ್ 3, ಸ್ಟಾರ್ಕ್ ಹಾಗೂ ಜಾನ್ಸನ್ 2 ವಿಕೆಟ್, ಹೇಜಲ್ ವುಡ್ 1 ವಿಕೆಟ್.
* ಫಾಲ್ಕ್ನರ್ ಗೆ ಸತತ ಎರಡು ವಿಕೆಟ್, ಆರ್ ಅಶ್ವಿನ್ ಕ್ಲೀನ್ ಬೋಲ್ಡ್.. ಮೋಹಿತ್ ಶರ್ಮ ಶೂನ್ಯ ಸುತ್ತಿ ಪೆವಿಲಿಯನ್ ಗೆ.
* 65 ಎಸೆತಗಳಲ್ಲಿ 65ರನ್ ಗಳಿಸಿ ಔಟ್.. ಮ್ಯಾಕ್ಸ್ ವೆಲ್ ಎಸೆತ ಅದ್ಭುತ ಎಸೆತಕ್ಕೆ ರನೌಟ್ 3 ಬೌಂಡರಿ, 2 ಸಿಕ್ಸ್ ಸಿಡಿಸಿದ್ದ ಧೋನಿ.
* 50 ಎಸೆತಗಳಲ್ಲಿ 121ರನ್ ಗುರಿ ಬೇಕು. ಜಡೇಜ ರನೌಟ್
* 39.1 ಓವರ್ ಗಳಲ್ಲಿ 192/5, ಧೋನಿ ಮೇಲೆ ಇಂಡಿಯಾ ಭರವಸೆ.
* 80ಎಸೆತಗಳಲ್ಲಿ 150ರನ್ ಬೇಕು.
* ಅಜಿಂಕ್ಯ ರಹಾನೆ 44ರನ್ ಗಳಿಸಿ ಔಟ್.. ಡಿಆರ್ ಎಸ್ ಲಾಭ ಆಸ್ಟ್ರೇಲಿಯಾಕ್ಕೆ
* 36 ಓವರ್ ಗಳ ನಂತರ 177/4, ಧೋನಿ
* 90 ಎಸೆತಗಳಲ್ಲಿ 159 ರನ್ ಟಾರ್ಗೆಟ್..6 ವಿಕೆಟ್ ಉಳಿದಿದೆ. 35 ಓವರ್ ಗಳಲ್ಲಿ 170/4.
* ಸಿಡ್ನಿ ಮೈದಾನ ತೊರೆಯುತ್ತಿರುವ ಫ್ಯಾನ್ಸ್
* 31ಓವರ್ ಗಳಲ್ಲಿ 148/4, ಧೋನಿ ಹಾಗೂ ರಹಾನೆ ಬ್ಯಾಟಿಂಗ್.
* 23 ಓವರ್ ಗಳಲ್ಲಿ 108/4 ಸುರೇಶ್ ರೈನಾ 7 ರನ್ ಗಳಿಸಿ ಹಡ್ಡೀನ್ ಹಿಡಿದ ಸೂಪರ್ ಕ್ಯಾಚಿಗೆ ಬಲಿ.
* 21.3 ಓವರ್ ಗಳಲ್ಲಿ 100/3 ಇದೇ ಸಮಯದಲ್ಲಿ ಆಸ್ಟ್ರೇಲಿಯಾ 111/1.
* ರೋಹಿತ್ ಶರ್ಮ 34 ರನ್ (48 ಎಸೆತ, 1x4, 2x6) ಗಳಿಸಿ ಔಟ್, ಸಂಕಷ್ಟದಲ್ಲಿ ಟೀಂ ಇಂಡಿಯಾ.
* 18 ಓವರ್ ಗಳಲ್ಲಿ 91/3, ಜಾನ್ಸನ್ ಎಸೆತವನ್ನು ಸಿಕ್ಸ್ ಎತ್ತ್ತಿ ಮರು ಎಸೆತದಲ್ಲೇ ಕ್ಲೀನ್ ಬೋಲ್ಡ್ ಆದ ರೋಹಿತ್ ಶರ್ಮ.
* 16 ಓವರ್ ಗಳ ನಂತರ ಟೀಂ ಇಂಡಿಯಾ 80/2, ರೋಹಿರ್ 26, ರಹಾನೆ 1
* ಕೇವಲ 1 ರನ್ ಗಳಿಸಿ ವಿರಾಟ್ ಕೊಹ್ಲಿ ಔಟ್, ಅನುಷ್ಕಾ ಶರ್ಮ ಪೆಚ್ಚು ಮೋರೆ ಕಿಸ್ ಮಿಸ್, ಕ್ಯಾಚ್ ಹಿಡಿದ ಹಡ್ಡೀನ್.
* 15 ಓವರ್ ಮೇಡನ್, ವಿರಾಟ್ ಕೊಹ್ಲಿ ಕಟ್ಟಿ ಹಾಕಿದ ಹೇಜಲ್ ವುಡ್ ಎಸೆತಗಳು.
* 14 ಓವರ್ ಗಳ ನಂತರ 77/1. ಕೊಹ್ಲಿ, ರೋಹಿತ್ ಬ್ಯಾಟಿಂಗ್.

* ಶಿಖರ್ ಧವನ್ 41 ಎಸೆತಗಳಲ್ಲಿ 45ರನ್ (41ಎಸೆತ, 6x4, 1x6) ಉಪಯುಕ್ತ ಸ್ಕೋರ್.
* 12.5 ಓವರ್ ನಲ್ಲಿ ತಂಡದ ಮೊತ್ತ 76 ಆಗಿದ್ದಾಗ ಹೇಜಲ್ ವುಡ್ ಬೌಲಿಂಗ್ ನಲ್ಲಿ ಮ್ಯಾಕ್ಸ್ ವೆಲ್ ಗೆ ಕ್ಯಾಚಿತ್ತು ಶಿಖರ್ ಧವನ್ ಔಟ್
* 10 ಓವರ್ ಗಳಲ್ಲಿ 55/0 ಭಾರತದಿಂದ ಉತ್ತಮ ಆರಂಭ.
* ಎರಡನೇ ಓವರ್ ಅಂತ್ಯಕ್ಕೆ 7/0
* ಮೊದಲ ಓವರ್ ಅಂತ್ಯಕ್ಕೆ 4/0. ರೋಹಿತ್ ಹಾಗೂ ಶಿಖರ್ ಬ್ಯಾಟಿಂಗ್.
* 5ನೇ ಎಸೆತ ಬೌಂಡರಿಗಟ್ಟಿದ ರೋಹಿತ್, ಇನ್ನಿಂಗ್ಸ್ ನ ಮೊದಲ ಬೌಂಡರಿ. ವಿಶ್ವಕಪ್ ನಲ್ಲಿ 300ರನ್ ಪೂರೈಸಿದ ರೋಹಿತ್.
* 3ನೇ ಎಸೆತದಲ್ಲೇ ಶೇನ್ ವಾಟ್ಸನ್ ಗೆ ಕ್ಯಾಚಿತ್ತ ರೋಹಿತ್ ಶರ್ಮ, ಥರ್ಡ್ ಅಂಪೈರ್ ನಿಂದ ನಾಟೌಟ್ ಎಂದು ನಿರ್ಣಯ.
* ಸ್ಟಾರ್ಕ್ ಮೊದಲ ಓವರ್ ನಲ್ಲಿ ಎರಡು ಬಾರಿ ಎಡ್ಜ್ ಮಾಡಿದ ರೋಹಿತ್ ಶರ್ಮ.
***
ಆಸ್ಟ್ರೇಲಿಯಾ ಇನ್ನಿಂಗ್ಸ್ :
* 50 ಓವರ್ ಗಳಲ್ಲಿ 328/7 ರನ್ ಸ್ಕೋರ್ ಮಾಡಿದ ಆಸ್ಟ್ರೇಲಿಯಾ. ಟೀಂ ಇಂಡಿಯಾಕ್ಕೆ ಗೆಲ್ಲಲು 329ರನ್ ಗುರಿ.
* ಭಾರತದ ಪರ ಉಮೇಶ್ ಯಾದವ್ 4 ವಿಕೆಟ್, ಮೋಹಿತ್ 2 ಹಾಗೂ ಆರ್ ಅಶ್ವಿನ್ 1 ವಿಕೆಟ್.
* ವೇಗಿ ಮಿಚೆಲ್ ಜಾನ್ಸನ್ 9 ಎಸೆತದಲ್ಲಿ 27ರನ್ (4x4, 1x6).
* ಕೊನೆ ಓವರ್ 2.1.1(ಹಡ್ಡೀನ್ ಕ್ಯಾಚ್ ಬಿಟ್ಟ ಕೊಹ್ಲಿ) 4, 6. 1ರನ್ ಮೋಹಿತ್ ಶರ್ಮ ಕಳಪೆ ಥರಾ ಬೌಲಿಂಗ್.
* 48.3 ಓವರ್ ಗಳಲ್ಲಿ 304/5. ಜಾನ್ಸನ್ ನಿಂದ ಬೌಂಡರಿ ಮೇಲೆ ಬೌಂಡರಿ ಓವರ್ ಅಂತ್ಯಕ್ಕೆ 313/5.
* 48ನೇ ಓವರ್ ಮೋಹಿತ್ ಶರ್ಮ ಬೌಲಿಂಗ್.. 30 ಎಸೆತಗಳಲ್ಲಿ 28ರನ್ ಗಳಿಸಿ ವಾಟ್ಸನ್ ಔಟ್. ರಹಾನೆ ಬೌಂಡರಿ ಬಳಿ ಕ್ಯಾಚ್ ಹಿಡಿದರು. ಓವರ್ ಅಂತ್ಯಕ್ಕೆ 299/7.
* 47ನೇ ಓವರ್ ನಲ್ಲಿ ಫಾಲ್ಕ್ನರ್ ವಿಕೆಟ್ ಪತನ 12 ಎಸೆತಗಳಲ್ಲಿ 21 ರನ್ ಗಳಿಸಿದರು. ಯಾದವ್ ಗೆ 4 ವಿಕೆಟ್
* 46 ಓವರ್ ಗಳಲ್ಲಿ 279/5ವಾಟ್ಸನ್ 17, ಫಾಲ್ಕ್ನರ್ 17.
*ಅರೇ ಇದೇನಿದು! ಸಿಡ್ನಿಯಲ್ಲಿ ಮೋದಿ
* 45 ಓವರ್ಸ್ ಗಳಲ್ಲಿ 271/5 , ವಾಟ್ಸನ್ 16, ಫಾಲ್ಕ್ನರ್ 10
* 44 ಓವರ್ಸ್ 258/5, 13 ಇತರೆ ರನ್ ನೀಡಿರುವ ಭಾರತ.
* 43 ಓವರ್ಸ್ ನಲ್ಲಿ 250/5..ನಾಲ್ಕು ವಿಕೆಟ್ ಗಳು ಶಾರ್ಟ್ ಪಿಚ್ ಎಸೆತಕ್ಕೆ ಬಲಿಯಾಗಿದ್ದು ವಿಶೇಷ.
* 42.1 ಓವರ್ ನಲ್ಲಿ 248/5 ಮೋಹಿತ್ ಶರ್ಮಗೆ ಮೊದಲ ವಿಕೆಟ್
* 12 ಎಸೆತಗಳಲ್ಲಿ 10ರನ್ ಗಳಿಸಿ ಮೈಕಲ್ ಕ್ಲಾರ್ಕ್ ಔಟ್. ಮೋಹಿತ್ ಶರ್ಮ ಬೌಲಿಂಗ್ ನಲ್ಲಿ ರೋಹಿತ್ ಶರ್ಮ ಕ್ಯಾಚ್ .
* 40 ಓವರ್ ಗಳಲ್ಲಿ 239/4.. ಕಳೆದ 18 ಎಸೆತಗಳಲ್ಲಿ 8/2 ರನ್ ನಿಯಂತ್ರಿಸಿದ ಟೀಂ ಇಂಡಿಯಾ ಬೌಲರ್ಸ್.
* ಪವರ್ ಪ್ಲೇ ನಲ್ಲಿ ಮ್ಯಾಕ್ಸ್ ವೆಲ್ ಬೊಂಬಾಟ 5 ಓವರ್ ಗಳಲ್ಲಿ 64/1ಸ್ಕೋರ್.
* 38.1 ಓವರ್ ಗಳಲ್ಲಿ 233/4. ಶತಕದ ಕನಸು ಕಾಣುತ್ತಿದ್ದ ಅರೋನ್ ಫಿಂಚ್ 81(116 ಎಸೆತ) ಉಮೇಶ್ ಯಾದವ್ ಎಸೆತದಲ್ಲಿ ಧವನ್ ಹಿಡಿದ ಕ್ಯಾಚಿಗೆ ಬಲಿ.
* 35 ಓವರ್ ಗಳ ನಂತರ 206/2.. ಇದನ್ನು ಡಬ್ಬಲ್ ಮಾಡಿ ಲೆಕ್ಕ ಹಾಕಿದರೆ ದೇವರೇ ಗತಿ.
* ಮ್ಯಾಕ್ಸ್ ವೆಲ್ ವಿಕೆಟ್ ಗಾನ್ ಆರ್ ಅಶ್ವಿನ್ ಗೆ ವಿಕೆಟ್ 37 ಓವರ್ ಗಳಲ್ಲಿ 232/3.
* 14 ಎಸೆತಗಳಲ್ಲಿ 24 ರನ್ ಚೆಚ್ಚಿದ ಮ್ಯಾಕ್ಸ್ ವೆಲ್ ಔಟ್.
* 93 ಎಸೆತಗಳಲ್ಲಿ 105ರನ್ ಗಳಿಸಿದ್ದ ಸ್ಮಿತ್ ಅವರ ವಿಕೆಟ್ ಪತನ. ಉಮೇಶ್ ಯಾದವ್ ಗೆ ಎರಡನೆ ವಿಕೆಟ್
* 34 ಓವರ್ ಗಳ ನಂತರ 194/1, ಆಸ್ಟ್ರೇಲಿಯಾ ಹಿಡಿತಕ್ಕೆ ಸಿಕ್ಕಿದ ಪಂದ್ಯ. ಟೀಂ ಇಂಡಿಯಾ ಬೌಲರ್ಸ್ ತತ್ತರ.
* ಸಿಡ್ನಿಯಲ್ಲಿ ಸ್ಮಿತ್ ಭರ್ಜರಿ ಶತಕ, 6 ಹಾಗೂ 4 ಬಾರಿಸಿ ಸ್ವಂತ ಊರಲ್ಲಿ ಶತಕ. 33ಓವರ್ಸ್ ನಂತರ 181/1
* ಸ್ಮಿತ್ ಹಾಗೂ ಫಿಂಚ್ ನಡುವೆ 150ರನ್ ಜೊತೆಯಾಟ 152 (174 ಎಸೆತ).
* 32 ಓವರ್ಸ್ ನಂತರ 167/1, ಹೋಂ ಪಿಚ್ ನಲ್ಲಿ ಶತಕದ ದಾಖಲಿಸಲು ಸ್ಮಿತ್ ಕಾತುರ.
* 31 ಓವರ್ ಗಳ ನಂತರ ಆಸ್ಟ್ರೇಲಿಯಾ 161/1.. ಅಶ್ವಿನ್ ಸತತ 8 ಓವರ್ ಎಸೆತ.
* 30 ಓವರ್ ಎಸೆದ ಅಶ್ವಿನ್.. ರನ್ ನಿಯಂತ್ರಣ.. 155/1.
* 29ಓವರ್ ಗಳ ನಂತರ 153/1, ಫಿಂಚ್ ಹಾಗೂ ಸ್ಮಿತ್ ಭರ್ಜರಿ ಬ್ಯಾಟಿಂಗ್
* 27ನೇ ಓವರ್ ಜಡೇಜ ಬೌಲಿಂಗ್...ಫಿಂಚ್ 50(82ಎಸೆತ) ಓವರ್ ಅಂತ್ಯಕ್ಕೆ 143/1.
* 25ನೇ ಓವರ್ ಎಸೆದ ಆರ್ ಅಶ್ವಿನ್..ರನೌಟ್ ಜಸ್ಟ್ ಮಿಸ್..ಓವರ್ ಅಂತ್ಯಕ್ಕೆ ಸ್ಕೋರ್ 132/1.
* 24 ಓವರ್ ಗಳ ನಂತರ ಪಂದ್ಯದ ಮೇಲೆ ಆಸೀಸ್ ಹಿಡಿತ, ಸ್ಕೋರ್ 124/1.

* 23 ಓವರ್ ಗಳ ನಂತರ 118/1, ಎಲ್ ಬಿ ಅಪೀಲ್, ಥರ್ಡ್ ಅಂಪೈರ್ ಗೆ ಮನವಿ ಆದ್ರೆ, ಬಚಾವ್.
* 22 ಓವರ್ ಗಳ ನಂತರ 114/1, 115 ಎಸೆತಗಳಲ್ಲಿ 100ರನ್ ಜೊತೆಯಾಟ.
* 21 ಓವರ್ ಗಳ ನಂತರ 107/1, ಫಿಂಚ್ 35, ಸ್ಮಿತ್ 53.
* 19 ಓವರ್ ಗಳ ನಂತರ 100/1, 57ನೇ ಪಂದ್ಯದಲ್ಲಿ 7ನೇ ಅರ್ಧಶತಕ ಸಿಡಿಸಿದ ಸ್ಮಿತ್, ಫಿಂಚ್ 34.
* 18 ಓವರ್ ಆರಂಭಿಸಿದ ಆರ್ ಆಶ್ವಿನ್..98/1.
* 17 ಓವರ್ಸ್ ನಂತರ 96/1, ಸ್ಮಿತ್ 48, ಫಿಂಚ್ 33.
* 16ನೇ ರವೀಂದ್ರ ಜಡೇಜ ಸ್ಪಿನ್ ಬೌಲಿಂಗ್..89/1. [ಧೋನಿ ರಣ ತಂತ್ರ ಇಂದಿಗೂ ಎಂದೆಂದಿಗೂ]
* 15ನೇ ಓವರ್ ಮೋಹಿತ್ ಶರ್ಮ ಬೌಲಿಂಗ್...ಓವರ್ ಅಂತ್ಯಕ್ಕೆ 82/1.
* 14ನೇ ಓವರ್ ಬೌಲಿಂಗ್ ಚೇಂಜ್.. ಸ್ಪಿನ್ ಅಟ್ಯಾಕ್.. ಜಡೇಜ. 79/1.
* 13 ಓವರ್ ಗಳ ನಂತರ 71/1 ಫಿಂಚ್ 19, ಸ್ಮಿತ್ 36
* ಸ್ಮಿತ್ ಹಾಗೂ ಫಿಂಚ್ 55 ಎಸೆತಗಳಲ್ಲಿ 50 ರನ್ ಜೊತೆಯಾಟ
* 12 ಓವರ್ ಗಳ ನಂತರ 64/1, ಬೌಂಡರಿ ಬಾರಿಸಿದ ಸ್ಮಿತ್.
* 11 ಓವರ್ಸ್ ಆಸ್ಟ್ರೇಲಿಯಾ 57/1. ಶಮಿ ಉತ್ತಮ ಬೌಲಿಂಗ್ ಕೇವಲ 1 ರನ್ನಿತ್ತರು.
* 10 ಓವರ್ಸ್ ನಂತರ ಆಸ್ಟ್ರೇಲಿಯಾ 56/1, ಫಿಂಚ್ 11, ಸ್ಮಿತ್ 30.
* 9 ಓವರ್ ಗಳ ನಂತರ 40/1. ಯಾದವ್, ಶಮಿ ಕರಾರುವಾಕ್ ಬೌಲಿಂಗ್.
* 8ನೇ ಓವರ್ ಅಂತ್ಯಕ್ಕೆ 39/1. ರನ್ ವೇಗಕ್ಕೆ ಬ್ರೇಕ್ ಹಾಕಿರುವ ಶಮಿ ಹಾಗೂ ಉಮೇಶ್ ಯಾದವ್. ಸ್ಮಿತ್ ಹಾಗೂ ಫಿಂಚ್ ರಿಂದ ಎಚ್ಚರಿಕೆಯ ಬ್ಯಾಟಿಂಗ್.
* 7 ಓವರ್ಸ್ ನಂತರ ಆಸ್ಟ್ರೇಲಿಯಾ ಮೊತ್ತ 34/1.
* 6 ಓವರ್ ಅಂತ್ಯಕ್ಕೆ 32/1. ಉಮೇಶ್ ಯಾದವ್ ಉತ್ತಮ ಬೌಲಿಂಗ್.

* 5 ಓವರ್ ಆರಂಭದಲ್ಲೇ ಫಿಂಚ್ ನಿಂದ ಬೌಂಡರಿ. ಓವರ್ ಅಂತ್ಯಕ್ಕೆ 31/1, ಫಿಂಚ್ 8, ಸ್ಮಿತ್ 9 ರನ್.
* 4ನೇ ಓವರ್ ಆರಂಭದಲ್ಲೇ ಯಶಸ್ಸು: 7ಎಸೆತಗಳಲ್ಲಿ 12ರನ್ ಗಳಿಸಿ ಡೇವಿಡ್ ವಾರ್ನರ್ ಔಟ್..ಉಮೇಶ್ ಯಾದವ್ ಎಸೆತದಲ್ಲಿ ಕೊಹ್ಲಿಗೆ ಕ್ಯಾಚಿತ್ತ ವಾರ್ನರ್. ಸ್ಕೋರ್ 15/1. ಓವರ್ ಅಂತ್ಯಕ್ಕೆ 22/1.
* 3ನೇ ಓವರ್ ಮೊದಲ ಎಸೆತದಲ್ಲಿ ಮೊದಲ ಇತರೆ ರನ್ ವೈಡ್ ಬಾಲ್.. ಓವರ್ ಅಂತ್ಯಕ್ಕೆ ಆಸೀಸ್ ಸ್ಕೋರ್ 15/0.
* 2ನೇ ಓವರ್: ಉಮೇಶ್ ಯಾದವ್ ಬೌಲಿಂಗ್. ಮೊದಲ ಎಸೆತವನ್ನು ಬೌಂಡರಿಗಟ್ಟಿದ ವಾರ್ನರ್. ಪಂದ್ಯದ ಮೊದಲ 4,ಮೊದಲ ಸಿಕ್ಸರ್ ಎತ್ತಿದ ವಾರ್ನರ್, ಓವರ್ ಅಂತ್ಯಕ್ಕೆ ಸ್ಕೋರ್ 14/0, ವಾರ್ನರ್ 12, ಫಿಂಚ್ 1.
ವಿಶ್ವಕಪ್ ಆಡಿದ ಎಲ್ಲಾ ರಾಷ್ಟ್ರಗಳ ಬಾವುಟಗಳ ಪ್ರದರ್ಶನ.. ಚಿತ್ರಕೃಪೆ: ಬಿ.ಜಿ ಮಹೇಶ್

* ಮೊದಲ ಓವರ್: ಮಹಮ್ಮದ್ ಶಮಿ ಬೌಲಿಂಗ್..ಕಣಕ್ಕಿಳಿದ ಡೇವಿಡ್ ವಾರ್ನರ್, ಅರೋನ್ ಫಿಂಚ್.. ಓವರ್ ಅಂತ್ಯಕ್ಕೆ 2/0
ಕಣಕ್ಕಿಳಿಸದ ಕ್ರಿಕೆಟ್ ಕಲಿಗಳು:
ಟಾಸ್ ರಿಪೋರ್ಟ್:
ಟಾಸ್ ಗೆದ್ದೋನೆ ಬಾಸ್ ಎಂದು ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಹೇಳಿದ್ದಾರೆ. ಗಂಗೂಲಿ ಹೇಳಿದ್ದು ಸರಿ ಎಂದು ರಾಹುಲ್ ದ್ರಾವಿಡ್, ಗ್ರಹಾಂ ಸ್ಮಿತ್ ದನಿಗೂಡಿಸಿದ್ದಾರೆ. 8.30ಕ್ಕೆ ಟಾಸ್ ಯಾರು ಗೆಲ್ಲುತ್ತಾರೆ ತಿಳಿಯುತ್ತದೆ.
ಟಾಸ್ ಚಿಮ್ಮಿಸಿದ ಮೈಕಲ್ ಕ್ಲಾರ್ಕ್.. ಹೆಡ್ ಎಂದ ಧೋನಿ.. ಟೈಲ್ ಬಿದ್ದು ಆಸೀಸ್ ಪಾಲಾದ ಟಾಸ್
ತಂಡಗಳು:
ಭಾರತ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್) ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಆರ್ ಅಶ್ವಿನ್, ಮೋಹಿತ್ ಶರ್ಮ, ಮಹಮ್ಮದ್ ಶಮಿ, ಉಮೇಶ್ ಯಾದವ್.

ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಡೇವಿಡ್ ವಾರ್ನರ್, ಅರೋನ್ ಫಿಂಚ್, ಶೇನ್ ವಾಟ್ಸನ್, ಸ್ಟೀವ್ ಸ್ಮಿತ್, ಬ್ರಾಡ್ ಹಡ್ಡೀನ್(ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ ವೆಲ್, ಜೇಮ್ಸ್ ಫಾಲ್ಕ್ನರ್, ಮಿಚೆಲ್ ಜಾನ್ಸನ್, ಮಿಚೆಲ್ ಸ್ಟಾರ್ಕ್, ಜೋಶ್ ಹಜೇಲ್ ವುಡ್
ಸಿಡ್ನಿ ಪಿಚ್ ಹೇಗಿದೆ:
ಸಿಡ್ನಿಯಲ್ಲಿ ಭಾರತದ ಅಭಿಮಾನಿಗಳು
ಭಾರತ ತಾನಾಡಿರುವ ಎಲ್ಲಾ 7 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿದೆ. ಆಸ್ಟ್ರೇಲಿಯಾ ತಂಡ ಒಂದೇ ಒಂದು ಪಂದ್ಯ ಸೋತು ಸೆಮೀಸ್ ತಲುಪಿದೆ. ಆಸ್ಟ್ರೇಲಿಯಾ ಇದುವರೆವಿಗೂ ಸೆಮಿಫೈನಲ್ ನಲ್ಲಿ ಸೋಲು ಕಂಡಿಲ್ಲ. ಹಾಲಿ ಚಾಂಪಿಯನ್ ಭಾರತಕ್ಕೆ ಸುವರ್ಣ ಅವಕಾಶ ಈಗ ಲಭ್ಯವಾಗಿದೆ.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications