LLC 2023: ಗೌತಮ್ ಗಂಭೀರ್ ಹೋರಾಟ ವ್ಯರ್ಥ; ಇಂಡಿಯಾ ಮಹಾರಾಜಸ್‌ಗೆ ಸೋಲುಣಿಸಿದ ಏಷ್ಯಾ ಲಯನ್ಸ್

ಶುಕ್ರವಾರ, ಮಾರ್ಚ್ 10ರಂದು ಕತಾರ್‌ನ ದೋಹಾದಲ್ಲಿರುವ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಮಾಸ್ಟರ್ಸ್‌ನ ಮೂರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಇಂಡಿಯಾ ಮಹಾರಾಜಸ್ ತಂಡದ ವಿರುದ್ಧ ಏಷ್ಯಾ ಲಯನ್ಸ್ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶಾಹಿದ್ ಅಫ್ರಿದಿ ನಾಯಕತ್ವದ ಏಷ್ಯಾ ಲಯನ್ಸ್ ತಂಡ ಮಿಸ್ಬಾ-ಉಲ್-ಹಕ್ 50 ಎಸೆತಗಳಲ್ಲಿ 73 ರನ್‌ಗಳ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಕಲೆ ಹಾಕಿತ್ತು.
166 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ರನ್‌ಗಳನ್ನು ಗಳಿಸಲಷ್ಟೆ ಸಾಧ್ಯವಾಯಿತು. ಈ ಮೂಲಕ ಇಂಡಿಯಾ ಮಹಾರಾಜಸ್ 9 ರನ್‌ಗಳ ಅಂತರದಿಂದ ಸೋಲು ಕಂಡಿತು.
ಇಂಡಿಯಾ ಮಹಾರಾಜಸ್ ಪರ ನಾಯಕ ಗೌತಮ್ ಗಂಭಿರ್ 39 ಎಸೆತಗಳಲ್ಲಿ 52 ರನ್ ಬಾರಿಸಿದರೆ, ಮುರುಳಿ ವಿಜಯ್ 19 ಎಸೆತಗಳಲ್ಲಿ 25 ರನ್ ಗಳಿಸಿದರು. ಉಳಿದಂತೆ ಮೊಹಮ್ಮದ್ ಕೈಫ್ 22 ರನ್ ಮತ್ತು ಯೂಸುಫ್ ಪಠಾಣ್ 14 ರನ್ ಗಳಿಸಿದರು.

ಏಷ್ಯಾ ಲಯನ್ಸ್ ಪರ ಬೌಲಿಂಗ್‌ನಲ್ಲಿ ಸೊಹೈಲ್ ತನ್ವೀರ್ 3 ವಿಕೆಟ್, ಇಸುರ್ ಉದಾನಾ, ತಿಲಕರತ್ನೆ ದಿಲ್ಶಾನ್, ತಿಸಾರ ಪೆರೆರಾ ಮತ್ತು ಅಬ್ದುಲ್ ರಜಾಕ್ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಆರಂಭಿಸಿದ ಏಷ್ಯಾ ಲಯನ್ಸ್ ತಂಡದ ಪರ ತಿಲಕರತ್ನೆ ದಿಲ್ಶಾನ್ 40 ರನ್ ಗಳಿಸಿದರೆ, ಮಿಸ್ಬಾ-ಉಲ್-ಹಕ್ 50 ಎಸೆತಗಳಲ್ಲಿ 73 ರನ್ ಬಾರಿಸಿದರು.
ಬೌಲಿಂಗ್‌ನಲ್ಲಿ ಭಾರತದ ಪರ ಸ್ಟುವರ್ಟ್ ಬಿನ್ನಿ 2 ವಿಕೆಟ್, ಪರ್ವಿಂದರ್ ಅವಾನಾ 2 ವಿಕೆಟ್ ಪಡೆದರೆ, ಇರ್ಫಾನ್ ಪಠಾಣ್ ಮತ್ತು ಅಶೋಕ್ ದಿಂಡಾ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications