LLC 2023: ವರ್ಲ್ಡ್ ಜೈಂಟ್ಸ್ ಮಣಿಸಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಚಾಂಪಿಯನ್ ಆದ ಏಷ್ಯಾ ಲಯನ್ಸ್

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ವರ್ಲ್ಡ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಏಷ್ಯಾ ಲಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಉಪುಲ್ ತರಂಗ ಮತ್ತು ತಿಲಕರತ್ನೆ ದಿಲ್ಷನಾ ಅಮೋಘ ಅರ್ಧಶತಕದ ನೆರವಿನಿಂದ ಏಷ್ಯಾ ಲಯನ್ಸ್ ಭರ್ಜರಿ ಜಯ ಸಾಧಿಸಿದೆ.
ದೋಹಾದಲ್ಲಿರುವ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವರ್ಲ್ಡ್ ಜೈಂಟ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಆರಂಭದಲ್ಲೇ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಏಷ್ಯಾ ಲಯನ್ಸ್ ವರ್ಲ್ಡ್ ಜೈಂಟ್ಸ್ ಮೇಲೆ ಒತ್ತಡಹೇರಿತು.
ಲೆಂಡಲ್ ಸಿಮನ್ಸ್ 17 ರನ್ ಗಳಿಸಿ ಔಟಾದರೆ, ವ್ಯಾನ್ ವಿಕ್ ಮತ್ತು ನಾಯಕ ಶೇನ್ ವ್ಯಾಟ್ಸನ್ ಶೂನ್ಯಕ್ಕೆ ಔಟಾಗಿದ್ದು ವರ್ಲ್ಡ್ ಜೈಂಟ್ಸ್ ತಂಡದ ಭಾರಿ ಹಿನ್ನಡೆಗೆ ಕಾರಣವಾಯಿತು. ನಂತರ ಬಂದ ಜಾಕ್ ಕಾಲಿಸ್ ಮತ್ತು ರಾಸ್ ಟೇಲರ್ ತಂಡಕ್ಕೆ ಚೇತರಿಕೆ ತಂದುಕೊಟ್ಟರು. 4ನೇ ವಿಕೆಟ್‌ಗೆ 91 ರನ್‌ಗಳನ್ನು ಕಲೆಹಾಕಿತು.
ರಾಸ್ ಟೇಲರ್ 33 ಎಸೆತಗಳಲ್ಲಿ 32 ರನ್ ಗಳಿಸಿದರೆ, ರಾಸ್ ಟೇಲರ್ 54 ಎಸೆತಗಳಲ್ಲಿ 5 ಬೌಂಡರಿ ಮತ್ತು ಮೂರು ಸಿಕ್ಸರ್ ನೆರವಿನಿಂದ 78 ರನ್ ಗಳಿಸಿದರು. ಪೌಲ್ ಕಾಲಿಂಗ್‌ವುಡ್ ಕೇವಲ 6 ರನ್ ಗಳಿಸಿದ್ದಾಗ ರಿಟೈರ್ಡ್ ಹರ್ಟ್ ಆಗಿ ವಾಪಸಾದರು. ಅಂತಿಮವಾಗಿ ವರ್ಲ್ಡ್ ಜೈಂಟ್ಸ್ 20 ಓವರ್ ಗಳಲ್ಲಿ 147 ರನ್ ಗಳಿಸಿತು. ಏಷ್ಯಾ ಲಯನ್ಸ್ ಪರವಾಗಿ ಅಬ್ದುಲ್ ರಜಾಕ್ ಎರಡು ವಿಕೆಟ್ ಪಡೆದರೆ, ತಿಸಾರ ಪೆರೇರಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಏಷ್ಯಾಲಯನ್ಸ್‌ಗೆ ಸುಲಭದ ಗೆಲುವು
148 ರನ್‌ಗಳ ಸುಲಭವಾದ ಗುರಿಯನ್ನು ಬೆನ್ನತ್ತಿದ ಏಷ್ಯಾ ಲಯನ್ಸ್ ಅತ್ಯುತ್ತಮ ಆರಂಭ ಪಡೆಯಿತು. ಉಪುಲ್ ತರಂಗ ಮತ್ತು ತಿಲಕರತ್ನೆ ದಿಲ್ಷಾನ್ ಜೋಡಿ ಮೊದಲನೇ ವಿಕೆಟ್‌ಗೆ 115 ರನ್‌ಗಳನ್ನು ಕಲೆಹಾಕುವ ಮೂಲಕ ಏಷ್ಯಾಲಯನ್ಸ್‌ಗೆ ಸುಲಭವಾದ ಗೆಲುವು ಸಾಧಿಸಲು ಅಡಿಪಾಯ ಹಾಕಿತು.
ಉಪುಲ್ ತರಂಗ 28 ಎಸೆಯತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 57 ರನ್ ಗಳಿಸಿದರು. ದಿಲ್ಷಾನ್ 42 ಎಸೆತಗಳಲ್ಲಿ 8 ಬೌಂಡರಿ ಸಹಿತ 58 ರನ್ ಗಳಿಸಿದರು. ಉಪುಲ್ ತರಂಗ ಬ್ರೆಟ್ ಲೀ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರೆ, ದಿಲ್ಷಾನ್ ಸಮಿತ್ ಪಟೇಲ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

ನಂತರ ಬಂದ ಮೊಹಮ್ಮದ್ ಹಫೀಜ್ ಅಜೇಯ 9 ಮತ್ತು ಮಿಸ್ಬಾ ಉಲ್ ಹಕ್ ಅಜೇಯ 9 ರನ್ ಗಳಿಸುವ ಮೂಲಕ ಏಷ್ಯಾ ಲಯನ್ಸ್‌ಗೆ ಸುಲಭವಾದ ಜಯ ತಂದುಕೊಟ್ಟರು. ಈ ಮೂಲಕ ಏಷ್ಯಾ ಲಯನ್ಸ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕಪ್ ಎತ್ತಿಹಿಡಿದಿದೆ.
ಈ ಗೆಲುವಿನ ಮೂಲಕ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಆವೃತ್ತಿಯಲ್ಲಿ ಏಷ್ಯಾ ಲಯನ್ಸ್ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications