LLC 2023: ಉಪುಲ್ ತರಂಗ ಅರ್ಧಶತಕ; ಇಂಡಿಯಾ ಮಹಾರಾಜಸ್‌ಗೆ 158 ರನ್‌ಗಳ ಗುರಿ ನೀಡಿದ ಏಷ್ಯಾ ಲಯನ್ಸ್

ಮಂಗಳವಾರ, ಮಾರ್ಚ್ 14ರಂದು ಕತಾರ್‌ನ ದೋಹಾದಲ್ಲಿರುವ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಮಾಸ್ಟರ್ಸ್‌ನ ಮೂರನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಇಂಡಿಯಾ ಮಹಾರಾಜಸ್ ಮತ್ತು ಏಷ್ಯಾ ಲಯನ್ಸ್ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಿವೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಏಷ್ಯಾ ಲಯನ್ಸ್ ತಂಡ ಉಪುಲ್ ತರಂಗ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್‌ಗಳನ್ನು ಪೇರಿಸಿದ್ದು, ಇಂಡಿಯಾ ಮಹಾರಾಜಸ್ ತಂಡಕ್ಕೆ 158 ರನ್‌ಗಳ ಗೆಲುವಿನ ಗುರಿ ನೀಡಿದೆ.
ಏಷ್ಯಾ ಲಯನ್ಸ್ ಪರ ಬ್ಯಾಟಿಂಗ್ ಆರಂಭಿಸಿದ ಉಪುಲ್ ತರಂಗ ಮತ್ತು ತಿಲಕರತ್ನೆ ದಿಲ್ಶಾನ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 73 ರನ್‌ಗಳ ಜೊತೆಯಾಟ ನೀಡಿದರು.

ಉಪುಲ್ ತರಂಗ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಮೇತ 69 ರನ್ ಬಾರಿಸಿದರೆ, ತಿಲಕರತ್ನೆ ದಿಲ್ಶಾನ್ 27 ಎಸೆತಗಳಲ್ಲಿ 32 ರನ್ ಗಳಿಸಿದರು. ಉಳಿದಂತೆ ಅಸ್ಗರ್ ಅಫ್ಘನ್ 15 ರನ್, ಅಬ್ದುಲ್ ರಜಾಕ್ 27 ರನ್ ಗಳಿಸಿ ತಂಡದ ಮೊತ್ತ 150 ರನ್ ಗಡಿ ದಾಟಲು ನೆರವಾದರು.
ಬೌಲಿಂಗ್‌ನಲ್ಲಿ ಇಂಡಿಯಾ ಮಹಾರಾಜಸ್ ತಂಡದ ಪರ ಸುರೇಶ್ ರೈನಾ 2 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆದರೆ, ಹರ್ಭಜನ್ ಸಿಂಗ್ 4 ಓವರ್‌ಗಳಲ್ಲಿ 12 ರನ್ ನೀಡಿ ಒಂದು ವಿಕೆಟ್ ಪಡೆದರು. ಉಳಿದಂತೆ ಸ್ಟುವರ್ಟ್ ಬಿನ್ನಿ ಮತ್ತು ಪ್ರವೀಣ್ ತಾಂಬೆ ತಲಾ ಒಂದೊಂದು ವಿಕೆಟ್ ಪಡೆದರು.

ಶುಕ್ರವಾರ, ಮಾರ್ಚ್ 10ರಂದು ನಡೆದ ಉದ್ಘಾಟನಾ ಪಂದ್ಯದಲ್ಲಿ ಶಾಹಿದ್ ಅಫ್ರಿದಿ ನಾಯಕತ್ವದ ಏಷ್ಯಾ ಲಯನ್ಸ್ ತಂಡವು ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ತಂಡವನ್ನು 9 ರನ್‌ಗಳಿಂದ ಸೋಲಿಸಿತ್ತು.
ಇನ್ನು ಇಂಡಿಯಾ ಮಹಾರಾಜಸ್ ತಂಡ ಆಡಿದ ಎರಡೂ ಪಂದ್ಯಗಳನ್ನು ಸೋತಿದ್ದರೆ, ಏಷ್ಯಾ ಲಯನ್ಸ್ ತಂಡವು ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಆರೋನ್ ಫಿಂಚ್ ನಾಯಕತ್ವದ ವರ್ಲ್ಡ್ ಜೈಂಟ್ಸ್ ತಂಡ ಇಂಡಿಯಾ ಮಹಾರಾಜಸ್ ವಿರುದ್ಧ ಗೆದ್ದು, ಏಷ್ಯಾ ಲಯನ್ಸ್ ತಂಡದ ವಿರುದ್ಧ ಸೋತಿದೆ.
ಇದೀಗ ಗೌತಮ್ ಗಂಭೀರ್ ಪಡೆ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದರೆ, ಶಾಹಿದ್ ಅಫ್ರಿದಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿರುವ ಮಿಸ್ಬಾ-ಉಲ್-ಹಕ್ ತಂಡಕ್ಕೆ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಲು ಎದುರು ನೋಡುತ್ತಿದೆ.
ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್ ಆಡುವ 11ರ ಬಳಗ
ಇಂಡಿಯಾ ಮಹಾರಾಜಸ್: ಗೌತಮ್ ಗಂಭೀರ್ (ನಾಯಕ), ಮೊಹಮ್ಮದ್ ಕೈಫ್, ಮನ್ವಿಂದರ್ ಬಿಸ್ಲಾ, ಸುರೇಶ್ ರೈನಾ, ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಅಶೋಕ್ ದಿಂಡಾ, ಪ್ರವೀಣ್ ತಾಂಬೆ.
ಏಷ್ಯಾ ಲಯನ್ಸ್: ತಿಲಕರತ್ನೆ ದಿಲ್ಶನ್, ಉಪುಲ್ ತರಂಗ (ವಿಕೆಟ್ ಕೀಪರ್), ಮಿಸ್ಬಾ-ಉಲ್-ಹಕ್ (ನಾಯಕ), ಪರಸ್ ಖಡ್ಕಾ, ಅಸ್ಗರ್ ಅಫ್ಘಾನ್, ಇಸುರ್ ಉದಾನಾ, ಅಬ್ದುಲ್ ರಜಾಕ್, ತಿಸಾರಾ ಪೆರೇರಾ, ಅಬ್ದುಲ್ ರಜಾಕ್, ಅಬ್ದುರ್ ರಜಾಕ್, ಸೊಹೈಲ್ ತನ್ವೀರ್, ಶೊಯೆಬ್ ಅಖ್ತರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications