For Quick Alerts
ALLOW NOTIFICATIONS  
For Daily Alerts
 

LLC 2023: ವ್ಯಾಟ್ಸನ್, ಫಿಂಚ್ ಅರ್ಧಶತಕ; ಇಂಡಿಯಾ ಮಹಾರಾಜಸ್‌ಗೆ ಸವಾಲಿನ ಗುರಿ ನೀಡಿದ ವರ್ಲ್ಡ್ ಜೈಂಟ್ಸ್

LLC 2023: India Maharajas Need 167 Runs To Win Against World Giants

ಶನಿವಾರ, ಮಾರ್ಚ್ 11ರಂದು ಕತಾರ್‌ನ ದೋಹಾದಲ್ಲಿ ನಡೆಯುತ್ತಿರುವ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಪಂದ್ಯಾವಳಿ 3ನೇ ಸೀಸನ್‌ನ 2ನೇ ಪಂದ್ಯದಲ್ಲಿ ಇಂಡಿಯಾ ಮಹಾರಾಜಸ್ ಮತ್ತು ವರ್ಲ್ಡ್ ಜೈಂಟ್ಸ್ ಮುಖಾಮುಖಿಯಾಗಿವೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರೋನ್ ಫಿಂಚ್ ನಾಯಕತ್ವದ ವರ್ಲ್ಡ್ ಜೈಂಟ್ಸ್ ತಂಡವು ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ವಿರುದ್ಧ ಉತ್ತಮ ಮೊತ್ತ ಕಲೆಹಾಕಿದೆ.

ನಾಯಕ ಆರೋನ್ ಫಿಂಚ್ ಮತ್ತು ಶೇನ್ ವ್ಯಾಟ್ಸನ್ ಅವರ ಅರ್ಧಶತಕಗಳ ನೆರವಿನಿಂದ ವರ್ಲ್ಡ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದು, ಇಂಡಿಯಾ ಮಹಾರಾಜಸ್ ತಂಡದ ಗೆಲುವಿಗೆ 167 ರನ್‌ಗಳ ಗುರಿ ನೀಡಿದೆ.

LLC 2023: India Maharajas Need 167 Runs To Win Against World Giants

ಆರೋನ್ ಫಿಂಚ್ 33 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 53 ರನ್ ಬಾರಿಸಿದರೆ, ಶೇನ್ ವ್ಯಾಟ್ಸನ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ದೊಡ್ಡ ಸಿಕ್ಸರ್‌ಗಳ ಸಮೇತ 55 ರನ್ ಗಳಿಸಿದರು. ಉಳಿದಂತೆ ಕೊನೆಯಲ್ಲಿ ಬೆಸ್ಟ್ 13 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಇಂಡಿಯಾ ಮಹಾರಾಜಸ್ ತಂಡದ ಪರ ಹರ್ಭಜನ್ ಸಿಂಗ್ 2 ಓವರ್‌ಗಳಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದರೆ, ಪ್ರವೀಣ್ ತಾಂಬೆ 4 ಓವರ್‌ಗಳಲ್ಲಿ 17 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಇರ್ಫಾನ್ ಪಠಾಣ್ ಒಂದು ವಿಕೆಟ್ ಪಡೆದರು.

ವಿಪರ್ಯಾಸವೆಂದರೆ, ಇಂಡಿಯಾ ಮಹಾರಾಜಸ್ ತಂಡದ ಬೌಲರ್‌ಗಳು ವರ್ಲ್ಡ್ ಜೈಂಟ್ಸ್ ತಂಡಕ್ಕೆ 19 ರನ್‌ಗಳನ್ನು ಇತರೆ ರೂಪದಲ್ಲಿ ಬಿಟ್ಟುಕೊಟ್ಟರು. ವ್ಯಾಟ್ಸನ್, ಫಿಂಚ್ ಬಿಟ್ಟರೆ ಇದು ಮೂರನೇ ಹೆಚ್ಚಿನ ಸ್ಕೋರ್ ಆಗಿತ್ತು.

ಮೊದಲ ಪಂದ್ಯದಲ್ಲಿ ಏಷ್ಯಾ ಲಯನ್ಸ್ ವಿರುದ್ಧ 9 ರನ್‌ಗಳಿಂದ ಸೋಲು ಕಂಡಿರುವ ಇಂಡಿಯಾ ಮಹಾರಾಜಾಸ್ ತಂಡ ಎರಡನೇ ಪಂದ್ಯದಲ್ಲಿ ಗೆಲ್ಲುವ ಲೆಕ್ಕಾಚಾರದಲ್ಲಿದೆ.

ಇಂಡಿಯಾ ಮಹಾರಾಜಸ್ ಮತ್ತು ವರ್ಲ್ಡ್ ಜೈಂಟ್ಸ್ ಆಡುವ 11ರ ಬಳಗ
ಇಂಡಿಯಾ ಮಹಾರಾಜಸ್: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಗೌತಮ್ ಗಂಭೀರ್(ನಾಯಕ), ಮುರಳಿ ವಿಜಯ್, ಸುರೇಶ್ ರೈನಾ, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಅಶೋಕ್ ದಿಂಡಾ.

ವರ್ಲ್ಡ್ ಜೈಂಟ್ಸ್: ಆರೋನ್ ಫಿಂಚ್ (ನಾಯಕ), ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್, ಜಾಕ್ವೆಸ್ ಕಾಲಿಸ್, ರಾಸ್ ಟೇಲರ್, ಕೆವಿನ್ ಒ ಬ್ರಿಯಾನ್, ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಟಿನೊ ಬೆಸ್ಟ್, ಬ್ರೆಟ್ ಲೀ, ಮಾಂಟಿ ಪನೇಸರ್, ಕ್ರಿಸ್ ಎಂಫೊಫು.

Story first published: Saturday, March 11, 2023, 21:51 [IST]
Other articles published on Mar 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+