ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ರಾಬಿನ್ ಉತ್ತಪ್ಪ ಆರ್ಭಟ: ಪಾಕ್ ಬೌಲರ್ ವಿರುದ್ಧ ಒಂದೇ ಓವರ್‌ನಲ್ಲಿ 3 ಸಿಕ್ಸರ್: ವಿಡಿಯೋ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಇಂಡಿಯಾ ಮಹಾರಾಜಾಸ್ ತಂಡ ಮೊದಲ ಗೆಲುವು ಸಾಧಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಏಷ್ಯಾ ಲಯನ್ಸ್ ತಂಡವನ್ನು ಎದುರಿಸಿದ ಇಂಡಿಯಾ ಮಹಾರಾಜಾಸ್ ತಂಡ ಅಬ್ಬರದ ಪ್ರದರ್ಶನ ನೀಡಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇಂಡಿಯಾ ಮಹಾರಾಜಾಸ್ ತಂಡ ಬಳಿಕ ಬ್ಯಾಟಿಂಗ್‌ನಲ್ಲಿ ಅಮೋಘ ಆಟವನ್ನಾಡಿದೆ. ಆರಂಭಿಕರಾದ ರಾಬಿನ್ ಉತ್ತಪ್ಪ ಹಾಗೂ ಗೌತಮ್ ಗಂಭೀರ್ ಇಬ್ಬರೇ ಕೊನೆಯ ತನಕವೂ ಹೋರಾಟ ನಡೆಸಿದ್ದು ಕೇವಲ 12.3 ಓವರ್‌ಗಳಲ್ಲಿಯೇ ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆಲುವನ್ನಾಚರಿಸಿದೆ.
ಇನ್ನು ಈ ಪಂದ್ಯದಲ್ಲಿ ಕನ್ನಡಿದ ರಾಬಿನ್ ಉತ್ತಪ್ಪ ಅಕ್ಷರ್ಶಃ ಸಿಡಿಲಬ್ಬರದ ಪ್ರದರ್ಶನ ನೀಡಿ ಮನರಂಜಿಸಿದರು. ಕೇವಲ 39 ಎಸೆತ ಎದುರಿಸಿದ ಉತ್ತಪ್ಪ, 225.64ರ ಸ್ಟ್ರೈಕ್‌ರೇಟ್‌ನಲ್ಲಿ 88 ರನ್‌ಗಳಿಸಿದರು. ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳು ಸೇರಿತ್ತು.
ಅದರಲ್ಲೂ ಉತ್ತಪ್ಪ ಮೊಹಮ್ಮದ್ ಹಫೀಸ್ ವಿರುದ್ಧ ಆರ್ಭಟಿಸಿದರು. ಏಷ್ಯಾ ಲಯನ್ಸ್ ತಂಡದಲ್ಲಿ ಆಡುತ್ತಿರುವ ಪಾಕಿಸ್ತಾನದ ಸ್ಪಿನ್ನರ್ ಮೊಹಮ್ಮದ್ ಹಫೀಜ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಸಕ್ರಿಯವಾಗಿದ್ದು ಇತ್ತೀಚೆಗಷ್ಟೇ ಕ್ವೆಟ್ಟಾ ಗ್ಲಾಡಿಯೇಟರ್ ಪರವಾಗಿ ಕಣಕ್ಕಿಳಿದಿದ್ದರು. ಹಫೀಜ್ ಅವರ ಅವರ ಒಂದೇ ಓವರ್‌ನಲ್ಲಿ ರಾಬಿನ್ ಉತ್ತಪ್ಪ ಸತತ ಮೂರು ಸಿಕ್ಸರ್ ಸಿಡಿಸಿ ಪರಾಕ್ರಮ ಮೆರೆದರು. ಅಲ್ಲದೆ ಒಂದು ಬೌಂಡರಿ ಕೂಡ ಬಾರಿಸಿದ್ದು ಒಂದು ಒಂಟಿ ರನ್ ಪಡೆದುಕೊಂಡರು. ಈ ಮೂಲಕ ಈ ಒಂದೇ ಓವರ್‌ನಲ್ಲಿ ರಾಬಿನ್ ಉತ್ತಪ್ಪ 23 ರನ್ ಬಾರಿಸಿ ಮಿಂಚಿದರು.
ಈ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ನೀಡಿದ ಅಮೋಘ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಟೂರ್ನಿಯಲ್ಲಿ ಸತತವಾಗಿ ಅಬ್ಬರಿಸುತ್ತಿರುವ ಗೌತಮ್ ಗಂಭೀರ್ ಸತತ ಮೂರನೇ ಅರ್ಧ ಶತಕ ಬಾರಿಸಿದರು. ಗಂಭೀರ್ 36 ಎಸೆತ ಎದುರಿಸಿದ್ದು 12 ಬೌಂಡರಿಗಳ ನೆರವಿನಿಂದ ಅಜೇಯ 61 ರನ್‌ಗಳಿಸಿದ್ದಾರೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಏಷ್ಯಾ ಲಯನ್ಸ್ ತಂಡ ಉಫುಲ್ ತರಂಗ ಅರ್ಧ ಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 157 ರನ್‌ಗಳಿಸಿತ್ತು. ಇಂಡಿಯಾ ಮಹಾರಾಜಾಸ್ ಪರವಾಗಿ ಅಶೋಕ್ ದಿಂಡಾ ಮೂರು ವಿಕೆಟ್ ಕಬಳಿಸಿದರು.
ಇನ್ನು ಎಷ್ಯಾ ಲಯನ್ಸ್ ನೀಡಿದ 158 ರನ್‌ಗಳ ಗುರಿ ಬೆನ್ನಟ್ಟಿದ ಇಂಡಿಯಾ ಮಹಾರಾಜಾಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದತು. ರಾಬಿನ್ ಉತ್ತಪ್ಪ ಹಾಗೂ ಗೌತಮ್ ಗಂಭೀರ್ ಇಬ್ಬರೇ ಕೊನೆಯವರೆಗೂ ಬ್ಯಾಟಿಂಗ್ ನಡೆಸಿದ್ದು ಅಬ್ಬರಿಸಿದರು. ಯಾವುದೇ ಹಂತದಲ್ಲೂ ಏಷ್ಯಾ ಲಯನ್ಸ್ ತಂಡಕ್ಕೆ ಅವಕಾಶ ನೀಡದ ಈ ಆಟಗಾರರು ಕೇವಲ 12.3 ಓವರ್‌ಗಳಲ್ಲಿ ಗುರಿ ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ ಈ ಬಾರಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಇಂಡಿಯಾ ಮಹಾರಾಜಾಸ್ ಮೊದಲ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications