LLC 2023: ಮಿಸ್ಬಾ ಮಿಂಚಿನ ಅರ್ಧಶತಕ; ಇಂಡಿಯಾ ಮಹಾರಾಜಸ್‌ಗೆ ಸವಾಲಿನ ಗುರಿ ನೀಡಿದ ಏಷ್ಯಾ ಲಯನ್ಸ್

ಶುಕ್ರವಾರ, ಮಾರ್ಚ್ 10ರಂದು ಕತಾರ್‌ನ ದೋಹಾದಲ್ಲಿರುವ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಮಾಸ್ಟರ್ಸ್‌ನ ಮೂರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಇಂಡಿಯಾ ಮಹಾರಾಜಸ್ ತಂಡಕ್ಕೆ ಏಷ್ಯಾ ಲಯನ್ಸ್ ತಂಡ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶಾಹಿದ್ ಅಫ್ರಿದಿ ನಾಯಕತ್ವದ ಏಷ್ಯಾ ಲಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಕಲೆ ಹಾಕಿದ್ದು, ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ತಂಡಕ್ಕೆ 166 ರನ್‌ಗಳ ಗುರಿ ನೀಡಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಏಷ್ಯಾ ಲಯನ್ಸ್ ತಂಡದ ಪರ ತಿಲಕರತ್ನೆ ದಿಲ್ಶಾನ್ 40 ರನ್ ಗಳಿಸಿದರೆ, ಮಿಸ್ಬಾ-ಉಲ್-ಹಕ್ 50 ಎಸೆತಗಳಲ್ಲಿ 73 ರನ್ ಬಾರಿಸಿದರು.

ಬೌಲಿಂಗ್‌ನಲ್ಲಿ ಭಾರತದ ಪರ ಸ್ಟುವರ್ಟ್ ಬಿನ್ನಿ 2 ವಿಕೆಟ್, ಪರ್ವಿಂದರ್ ಅವಾನಾ 2 ವಿಕೆಟ್ ಪಡೆದರೆ, ಇರ್ಫಾನ್ ಪಠಾಣ್ ಮತ್ತು ಅಶೋಕ್ ದಿಂಡಾ ತಲಾ ಒಂದೊಂದು ವಿಕೆಟ್ ಪಡೆದರು.
ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್ ಆಡುವ 11ರ ಬಳಗ
ಇಂಡಿಯಾ ಮಹಾರಾಜಸ್: ಗೌತಮ್ ಗಂಭೀರ್ (ನಾಯಕ), ಮೊಹಮ್ಮದ್ ಕೈಫ್, ಮುರಳಿ ವಿಜಯ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಅಶೋಕ್ ದಿಂಡಾ, ಪ್ರವೀಣ್ ತಾಂಬೆ.
ಏಷ್ಯಾ ಲಯನ್ಸ್: ತಿಲಕರತ್ನೆ ದಿಲ್ಶನ್, ಉಪುಲ್ ತರಂಗ (ವಿಕೆಟ್ ಕೀಪರ್), ಶಾಹಿದ್ ಅಫ್ರಿದಿ (ನಾಯಕ), ಪರಸ್ ಖಡ್ಕಾ, ಮಿಸ್ಬಾ-ಉಲ್-ಹಕ್, ಅಸ್ಗರ್ ಅಫ್ಘಾನ್, ಇಸುರ್ ಉದಾನಾ, ಅಬ್ದುಲ್ ರಜಾಕ್, ತಿಸಾರಾ ಪೆರೇರಾ, ಅಬ್ದುಲ್ ರಜಾಕ್, ಅಬ್ದುರ್ ರಜಾಕ್, ಸೊಹೈಲ್ ತನ್ವೀರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications