LLC 2023: ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್ ಪಂದ್ಯದ ಸಂಭಾವ್ಯ 11ರ ಬಳಗ, ಲೈವ್ ಸ್ಟ್ರೀಮಿಂಗ್ ಮಾಹಿತಿ

ಶುಕ್ರವಾರ, ಮಾರ್ಚ್ 10ರಂದು ಕತಾರ್‌ನ ದೋಹಾದಲ್ಲಿರುವ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಮಾಸ್ಟರ್ಸ್‌ನ ಮೂರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ತಂಡವು ಶಾಹಿದ್ ಅಫ್ರಿದಿ ನಾಯಕತ್ವದ ಏಷ್ಯಾ ಲಯನ್ಸ್ ವಿರುದ್ಧ ಸೆಣಸಾಡಲಿದೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮಾಸ್ಟರ್ಸ್‌ನ ಮೂರನೇ ಆವೃತ್ತಿಯಲ್ಲಿ ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐತಿಹಾಸಿಕ ಕ್ಷಣಗಳನ್ನು ನಿರ್ಮಿಸಿರುವ ಟಾಪ್ ಲೆಜೆಂಡರಿ ಕ್ರಿಕೆಟಿಗರು ಆಡುತ್ತಿದ್ದು, ಅಭಿಮಾನಿಗಳಿಗೆ ತಮ್ಮ ಹಳೆಯ ಆಟಗಾರರ ಆಟವನ್ನು ವೀಕ್ಷಿಸಲು ಕುತೂಹಲಭರಿತರಾಗಿದ್ದಾರೆ.
ಮೊದಲ ಅವೃತ್ತಿಯಿಂದಲೂ ಈ ಪಂದ್ಯಾವಳಿಯು ದೊಡ್ಡ ದೂರದರ್ಶನ ವೀಕ್ಷಕರನ್ನು ಆಕರ್ಷಿಸಿದೆ ಮತ್ತು ಪ್ರಾಯೋಜಕತ್ವದ ಬೆಂಬಲವನ್ನೂ ಸಹ ಪಡೆದಿದೆ. ಮೂರು ತಂಡಗಳಾದ ವರ್ಲ್ಡ್ ಜೈಂಟ್ಸ್, ಇಂಡಿಯಾ ಮಹಾರಾಜಸ್ ಮತ್ತು ಏಷ್ಯಾ ಲಯನ್ಸ್ ಸ್ಟಾರ್ ಆಟಗಾರರಿಂದ ಕೂಡಿವೆ. ಮಾರ್ಚ್ 20ರಂದು ನಡೆಯುವ ಚಾಂಪಿಯನ್ ಕದನಕ್ಕಾಗಿ ಮೂರು ತಂಡಗಳು ಮೈದಾನಕ್ಕಿಳಿಯಲಿವೆ.

"ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆರಂಭದಿಂದಲೂ ಅಗಾಧವಾಗಿ ಬೆಳೆದಿದೆ. ಮೊದಲ ಋತುವಿನಲ್ಲಿ ನಾವು 59 ಕ್ರಿಕೆಟಿಗರನ್ನು ಹೊಂದಿದ್ದೆವು. 2ನೇ ಋತುವಿನಲ್ಲಿ ಸುಮಾರು 80 ಕ್ರಿಕೆಟಿಗರು ಆಡಿದರು ಮತ್ತು ಈಗ ಮೂರನೇ ಸೀಸನ್‌ಗೆ ಪ್ರವೇಶಿಸಿದಾಗ ಮೂರು ತಂಡಗಳಲ್ಲಿ ಟೂರ್ನಮೆಂಟ್‌ನ ಭಾಗವಾಗಲು 50 ಕ್ರಿಕೆಟಿಗರು ಭಾಗವಹಿಸುವುದನ್ನು ನಾವು ನೋಡಬಹುದು," ಎಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಅಮನ್ ರಹೇಜಾ ಹೇಳಿದರು.
ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಇಂಡಿಯಾ ಮಹಾರಾಜಸ್ ತಂಡವನ್ನು ಮುನ್ನಡೆಸಲಿದ್ದು, ತಂಡದಲ್ಲಿ ಮುರಳಿ ವಿಜಯ್, ಇರ್ಫಾನ್ ಪಠಾಣ್, ಸುರೇಶ್ ರೈನಾ, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಎಸ್ ಶ್ರೀಶಾಂತ್ ಸೇರಿದಂತೆ ಹಲವು ಸ್ಟಾರ್ ಆಟಗಾರರರಿದ್ದಾರೆ.
ಇನ್ನು ಏಷ್ಯಾ ಲಯನ್ಸ್ ತಂಡದಲ್ಲಿ ನಾಯಕ ಶಾಹಿದ್ ಅಫ್ರಿದಿ ಸೇರಿದಂತೆ ಅಬ್ದುಲ್ ರಜಾಕ್, ಮಿಸ್ಬಾ-ಉಲ್-ಹಕ್, ಮೊಹಮ್ಮದ್ ಹಫೀಜ್ ಅವರಂತಹ ಪ್ರಬಲ ಆಟಗಾರರು ಇದ್ದಾರೆ.

ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್ ಪಂದ್ಯದ ವಿವರ
ಸ್ಥಳ ಮತ್ತು ಸಮಯ: ಲೆಜೆಂಡ್ ಲೀಗ್ ಕ್ರಿಕೆಟ್‌ನ ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್ ಪಂದ್ಯವು ಶುಕ್ರವಾರ, ಮಾರ್ಚ್ 10ರಂದು ದೋಹಾದ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ.
LLC 2023 ಟಿವಿ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್
ಲೆಜೆಂಡ್ ಲೀಗ್ ಕ್ರಿಕೆಟ್ ಪಂದ್ಯಗಳು ಡಿಸ್ನಿ + ಹಾಟ್‌ಸ್ಟಾರ್ ಮತ್ತು ಫ್ಯಾನ್‌ಕೋಡ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿದ್ದು, ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳು ಟಿವಿ ನೇರಪ್ರಸಾರ ಮಾಡಲಿವೆ.
ಬ್ರಿಟನ್‌ನಲ್ಲಿ ಲೆಜೆಂಡ್ ಲೀಗ್ ಕ್ರಿಕೆಟ್ ಪಂದ್ಯಗಳನ್ನು Psyched4 ಡಿಜಿಟಲ್ ಸ್ಟ್ರೀಮಿಂಗ್‌ನಲ್ಲಿ ವೀಕ್ಷಿಸಬಹುದು. ಇನ್ನು ಆಸ್ಟ್ರೇಲಿಯಾದಲ್ಲಿ ಫಾಕ್ಸ್ ಕ್ರಿಕೆಟ್ ಲೆಜೆಂಡ್ ಲೀಗ್‌ನ ಅಧಿಕೃತ ಪ್ರಸಾರಕವಾಗಿದೆ.
ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್ ಸಂಭಾವ್ಯ ಆಡುವ 11ರ ಬಳಗ
ಇಂಡಿಯಾ ಮಹಾರಾಜಸ್: ಗೌತಮ್ ಗಂಭೀರ್ (ನಾಯಕ), ಮೊಹಮ್ಮದ್ ಕೈಫ್, ಮುರಳಿ ವಿಜಯ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಪ್ರವೀಣ್ ಕುಮಾರ್, ಎಸ್ ಶ್ರೀಶಾಂತ್.
ಏಷ್ಯಾ ಲಯನ್ಸ್: ತಿಲಕರತ್ನೆ ದಿಲ್ಶನ್, ಉಪುಲ್ ತರಂಗ, ಶಾಹಿದ್ ಅಫ್ರಿದಿ (ನಾಯಕ), ಮಿಸ್ಬಾ-ಉಲ್-ಹಕ್, ಮೊಹಮ್ಮದ್ ಹಫೀಜ್, ಅಸ್ಗರ್ ಅಫ್ಘಾನ್, ಅಬ್ದುಲ್ ರಜಾಕ್, ತಿಸಾರಾ ಪೆರೇರಾ, ಶೋಯೆಬ್ ಅಖ್ತರ್, ಸೊಹೈಲ್ ತನ್ವೀರ್, ಮುತ್ತಯ್ಯ ಮುರಳೀಧರನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications