LLC 2023: ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್ ಟಾಸ್ ವರದಿ, ಆಡುವ 11ರ ಬಳಗ, ಲೈವ್ ಸ್ಕೋರ್

ಶುಕ್ರವಾರ, ಮಾರ್ಚ್ 10ರಂದು ಕತಾರ್‌ನ ದೋಹಾದಲ್ಲಿರುವ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಮಾಸ್ಟರ್ಸ್‌ನ ಮೂರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಇಂಡಿಯಾ ಮಹಾರಾಜಸ್ ತಂಡವು ಏಷ್ಯಾ ಲಯನ್ಸ್ ವಿರುದ್ಧ ಮುಖಾಮುಖಿಯಾಗಿದೆ.
ಟಾಸ್ ಗೆದ್ದ ಏಷ್ಯಾ ಲಯನ್ಸ್ ತಂಡದ ನಾಯಕ ಶಾಹಿದ್ ಅಫ್ರಿದಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಹೀಗಾಗಿ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ಮೊದಲು ಬೌಲಿಂಗ್ ಮಾಡಲಿದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮಾಸ್ಟರ್ಸ್‌ನ ಮೂರನೇ ಆವೃತ್ತಿಯಲ್ಲಿ ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐತಿಹಾಸಿಕ ಕ್ಷಣಗಳನ್ನು ನಿರ್ಮಿಸಿರುವ ಟಾಪ್ ಲೆಜೆಂಡರಿ ಕ್ರಿಕೆಟಿಗರು ಆಡುತ್ತಿದ್ದು, ಅಭಿಮಾನಿಗಳಿಗೆ ತಮ್ಮ ಹಳೆಯ ಆಟಗಾರರ ಆಟವನ್ನು ವೀಕ್ಷಿಸಲು ಕುತೂಹಲಭರಿತರಾಗಿದ್ದಾರೆ.
ಮೊದಲ ಅವೃತ್ತಿಯಿಂದಲೂ ಈ ಪಂದ್ಯಾವಳಿಯು ದೊಡ್ಡ ದೂರದರ್ಶನ ವೀಕ್ಷಕರನ್ನು ಆಕರ್ಷಿಸಿದೆ ಮತ್ತು ಪ್ರಾಯೋಜಕತ್ವದ ಬೆಂಬಲವನ್ನೂ ಸಹ ಪಡೆದಿದೆ. ಮೂರು ತಂಡಗಳಾದ ವರ್ಲ್ಡ್ ಜೈಂಟ್ಸ್, ಇಂಡಿಯಾ ಮಹಾರಾಜಸ್ ಮತ್ತು ಏಷ್ಯಾ ಲಯನ್ಸ್ ಸ್ಟಾರ್ ಆಟಗಾರರಿಂದ ಕೂಡಿವೆ. ಮಾರ್ಚ್ 20ರಂದು ನಡೆಯುವ ಚಾಂಪಿಯನ್ ಕದನಕ್ಕಾಗಿ ಮೂರು ತಂಡಗಳು ಮೈದಾನಕ್ಕಿಳಿಯಲಿವೆ.
ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್ ಆಡುವ 11ರ ಬಳಗ
ಇಂಡಿಯಾ ಮಹಾರಾಜಸ್: ಗೌತಮ್ ಗಂಭೀರ್ (ನಾಯಕ), ಮೊಹಮ್ಮದ್ ಕೈಫ್, ಮುರಳಿ ವಿಜಯ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಅಶೋಕ್ ದಿಂಡಾ, ಪ್ರವೀಣ್ ತಾಂಬೆ.
ಏಷ್ಯಾ ಲಯನ್ಸ್: ತಿಲಕರತ್ನೆ ದಿಲ್ಶನ್, ಉಪುಲ್ ತರಂಗ (ವಿಕೆಟ್ ಕೀಪರ್), ಶಾಹಿದ್ ಅಫ್ರಿದಿ (ನಾಯಕ), ಪರಸ್ ಖಡ್ಕಾ, ಮಿಸ್ಬಾ-ಉಲ್-ಹಕ್, ಅಸ್ಗರ್ ಅಫ್ಘಾನ್, ಇಸುರ್ ಉದಾನಾ, ಅಬ್ದುಲ್ ರಜಾಕ್, ತಿಸಾರಾ ಪೆರೇರಾ, ಅಬ್ದುಲ್ ರಜಾಕ್, ಅಬ್ದುರ್ ರಜಾಕ್, ಸೊಹೈಲ್ ತನ್ವೀರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications