LLC 2023: ಭಾರತ ಮಹಾರಾಜಸ್ ತಂಡಕ್ಕೆ ಸೋಲು: ಫೈನಲ್ ತಲುಪಿದ ಏಷ್ಯಾ ಲಯನ್ಸ್

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎಲಿಮಿನೇಟರ್ ಪಂದ್ಯದಲ್ಲಿ ಭಾರತ ಮಹಾರಾಜಾಸ್ ತಂಡದ ವಿರುದ್ಧ 85 ರನ್‌ಗಳ ಭರ್ಜರಿ ಜಯ ಸಾಧಿಸಿದ ಏಷ್ಯಾ ಲಯನ್ಸ್ ಫೈನಲ್ ಪ್ರವೇಶಿಸಿದೆ. ಈ ಸೋಲಿನ ಮೂಲಕ ಗೌತಮ್ ಗಂಭೀರ್ ಪಡೆ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ತನ್ನ ಅಭಿಯಾನ ಕೊನೆಗೊಳಿಸಿದೆ.
ದೋಹಾದಲ್ಲಿರುವ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಏಷ್ಯಾ ಲಯನ್ಸ್ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದಕ್ಕೆ ತಕ್ಕಂತೆ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಭಾರತಕ್ಕೆ ಬೃಹತ್ ಸವಾಲು ನೀಡಿದರು.
ಉಪುಲ್ ತರಂಗ 31 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ಸಹಿತ 50 ರನ್ ಗಳಿಸಿ ಮಿಂಚಿದರು. ತಿಲಕರತ್ನೆ ದಿಲ್ಷಾನ್ 26 ಎಸೆತಗಳಲ್ಲಿ 2 ಬೌಂಡರಿ ಸಹಿತ 27 ರನ್ ಗಳಿಸಿದರು. ಮೊಹಮ್ಮದ್ ಹಫೀಜ್ 24 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ಸಹಿತ 38 ರನ್ ಹೊಡೆದರು.
ಅಸ್ಘರ್ ಅಫ್ಘನ್ 24 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 34 ರನ್ ಸಿಡಿಸಿದರು. ತಿಸಾರ ಪೆರೇರಾ 12 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ನೆರವಿನಿಂದ 24 ರನ್ ಗಳಿಸಿ ಏಷ್ಯಾ ಲಯನ್ಸ್ ದೊಡ್ಡ ಮೊತ್ತ ಕಲೆಹಾಕುವಲ್ಲಿ ಸಹಾಯ ಮಾಡಿದರು. ಅಂತಿಮವಾಗಿ ಏಷ್ಯಾ ಲಯನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು.

ವಿಫಲವಾದ ಭಾರತದ ಬ್ಯಾಟಿಂಗ್
ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ಮಹಾರಾಜಾಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರಾಬಿನ್ ಉತ್ತಪ್ಪ 10 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಗೌತಮ್ ಗಂಭೀರ್ 17 ಎಸೆತಗಳಲ್ಲಿ 7 ಬೌಂಡರಿ ಸಹಿತ 32 ರನ್ ಗಳಿಸಿದರೂ, ದೊಡ್ಡ ಮೊತ್ತ ಗಳಿಸಲಯ ಸಾಧ್ಯವಾಗಲಿಲ್ಲ. ನಂತರ ಬಂದ ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಮೊಹಮ್ಮದ್ ಕೈಫ್ 14, ಸುರೇಶ್ ರೈನಾ 18, ಯೂಸುಫ್ ಪಠಾಣ್ 9, ಇರ್ಫಾನ್ ಪಠಾಣ್ 3, ಮನ್ವಿಂದರ್ ಬಿಸ್ಲಾ 8, ಸ್ಟುವರ್ಟ್ ಬಿನ್ನಿ 0, ಪ್ರವೀಣ್ ತಾಂಬೆ 0, ಅಶೋಕ್ ದಿಂಡಾ 2 ರನ್ ಗಳಿಸಿ ಔಟಾದರು. ಸೊಹೈಲ್ ತನ್ವೀರ್, ಅಬ್ದುರ್ ರಜಾಕ್ ಮತ್ತು ಮೊಹಮ್ಮದ್ ಹಫೀಜ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಇಂದು ಫೈನಲ್ ಪಂದ್ಯ
16.4 ಓವರ್ ಗಳಲ್ಲಿ 106 ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಭಾರತ ಮಹಾರಾಜಾಸ್ ತಂಡ 85 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಆಡಿದ 5 ಪಂದ್ಯಗಳಲ್ಲಿ ಭಾರತ ಮಹಾರಾಜಾಸ್ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವರ್ಲ್ಡ್ ಜೈಂಟ್ಸ್ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಮಾರ್ಚ್ 20ರಂದು ಫೈನಲ್ ಪಂದ್ಯದಲ್ಲಿ ವರ್ಲ್ಡ್ ಜೈಂಟ್ಸ್ ಮತ್ತು ಏಷ್ಯಾ ಲಯನ್ಸ್ ಮುಖಾಮುಖಿಯಾಗಲಿವೆ.
ಉಭಯ ತಂಡಗಳ ಆಡುವ ಬಳಗ
ಭಾರತ ಮಹಾರಾಜಸ್: ಗೌತಮ್ ಗಂಭೀರ್(ನಾಯಕ), ರಾಬಿನ್ ಉತ್ತಪ್ಪ(ವಿಕೆಟ್ ಕೀಪರ್), ಮನ್ವಿಂದರ್ ಬಿಸ್ಲಾ, ಸುರೇಶ್ ರೈನಾ, ಮೊಹಮ್ಮದ್ ಕೈಫ್, ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಅಶೋಕ್ ದಿಂಡಾ, ಪ್ರಗ್ಯಾನ್ ಓಜಾ.
ಏಷ್ಯಾ ಲಯನ್ಸ್ : ಉಪುಲ್ ತರಂಗ(ವಿಕೆಟ್ ಕೀಪರ್), ತಿಲಕರತ್ನೆ ದಿಲ್ಶನ್, ಮೊಹಮ್ಮದ್ ಹಫೀಜ್, ಮಿಸ್ಬಾ-ಉಲ್-ಹಕ್, ತಿಸಾರ ಪೆರೆರಾ, ಅಸ್ಗರ್ ಅಫ್ಘಾನ್, ಅಬ್ದುಲ್ ರಜಾಕ್, ಶಾಹಿದ್ ಅಫ್ರಿದಿ(ನಾಯಕ), ಸೊಹೈಲ್ ತನ್ವೀರ್, ಪರಸ್ ಖಡ್ಕಾ, ಅಬ್ದುರ್ ರಜಾಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications