LLC 2023: ಕ್ರಿಸ್ ಎಂಪೊಫು, ಟಿನೋ ಬೆಸ್ಟ್ ಬೌಲಿಂಗ್ ದಾಳಿಗೆ ಬೆಚ್ಚಿದ ಏಷ್ಯಾ ಲಯನ್ಸ್: ವರ್ಲ್ಡ್ ಜೈಂಟ್ಸ್ ತಂಡಕ್ಕೆ ಗೆಲುವು

ಗುರುವಾರ, ಮಾರ್ಚ್ 16ರಂದು ಕತಾರ್‌ನ ದೋಹಾದಲ್ಲಿರುವ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಮಾಸ್ಟರ್ಸ್‌ನ ಮೂರನೇ ಆವೃತ್ತಿಯ 6ನೇ ಪಂದ್ಯದಲ್ಲಿ ಏಷ್ಯಾ ಲಯನ್ಸ್ ತಂಡದ ವಿರುದ್ಧ ವರ್ಲ್ಡ್ ಜೈಂಟ್ಸ್ ತಂಡವು 20 ರನ್‌ಗಳ ಅದ್ಭುತ ಗೆಲುವು ಸಾಧಿಸಿತು.
ಶೇನ್ ವ್ಯಾಟ್ಸನ್ ನಾಯಕತ್ವದ ವರ್ಲ್ಡ್ ಜೈಂಟ್ಸ್ ನೀಡಿದ್ದ 151 ರನ್‌ಗಳ ಗುರಿ ಬೆನ್ನಟ್ಟಿದ ಶಾಹಿದ್ ಅಫ್ರಿದಿ ನಾಯಕತ್ವದ ಏಷ್ಯಾ ಲಯನ್ಸ್ ತಂಡ 19.1 ಓವರ್‌ಗಳಲ್ಲಿ 130 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 20 ರನ್‌ಗಳ ಅಂತರದಿಂದ ಸೋಲನುಭವಿಸಿತು.
ಆರಂಭಿಕರಾದ ಉಪುಲ್ ತರಂಗಾ 4 ರನ್ ಗಳಿಸಿ ಔಟಾದರೆ, ತಿಲಕರತ್ನೆ ದಿಲ್ಶಾನ್ 28 ಎಸೆತಗಳಲ್ಲಿ 37 ರನ್ ಬಾರಿಸಿದರು. ತಿಸರಾ ಪೆರೆರಾ 12 ರನ್, ಮೊಹಮ್ಮದ್ ಹಫೀಜ್ 13 ರನ್, ಮಿಸ್ಬಾ ಉಲ್ ಹಕ್ 5 ರನ್, ನಾಯಕ ಶಾಹಿದ್ ಅಫ್ರಿದಿ 26 ರನ್, ತನ್ವೀರ್ 5 ರನ್ ಗಳಿಸಿ ಔಟಾದರು.

ಬೌಲಿಂಗ್‌ನಲ್ಲಿ ವರ್ಲ್ಡ್ ಜೈಂಟ್ಸ್ ತಂಡದ ಪರ ಕ್ರಿಸ್ ಎಂಪೊಫು 4 ಓವರ್‌ಗಳಲ್ಲಿ 16 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಇನ್ನು ಟಿನೋ ಬೆಸ್ಟ್ 3.1 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಬ್ರೆಟ್ ಲೀ ಮತ್ತು ಸಮಿತ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಏಷ್ಯಾ ಲಯನ್ಸ್ ತಂಡ ನಿಗದಿತ 20 ಓವರ್್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿತ್ತು.

ಆರಂಭಿಕ ಬ್ಯಾಟ್ಸ್‌ಮನ್ ಆಶಿಮ್ ಆಮ್ಲಾ 59 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 68 ರನ್ ಗಳಿಸಿದರೆ, ಕ್ರಿಸ್ ಗೇಲ್ 2 ರನ್, ಶೇನ್ ವ್ಯಾಟ್ಸನ್ 6 ರನ್ ಗಳಿಸಿ ಔಟಾದರು. ನಂತರ ಬಂದ ಜಾಕ್ವೆಸ್ ಕಾಲಿಸ್ 43 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಮೇತ 56 ರನ್ ಬಾರಿಸಿದ್ದರು.
ಬೌಲಿಂಗ್‌ನಲ್ಲಿ ಏಷ್ಯಾ ಲಯನ್ಸ್ ತಂಡದ ಪರ ಮೊಹಮ್ಮದ್ ಅಮಿರ್ 4 ಓವರ್‌ಗಳಲ್ಲಿ 32 ರನ್ ನೀಡಿ 1 ವಿಕೆಟ್ ಮತ್ತು ಸೊಹೈಲ್ ತನ್ವಿರ್ 4 ಓವರ್‌ಗಳಲ್ಲಿ 31 ರನ್ ನೀಡಿ 1 ವಿಕೆಟ್ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications