LLC 2023: ಗೌತಮ್ ಗಂಭೀರ್ ಅರ್ಧಶತಕ ವ್ಯರ್ಥ; ಇಂಡಿಯಾ ಮಹಾರಾಜಸ್‌ಗೆ ಮತ್ತೊಂದು ಸೋಲು

ಶನಿವಾರ, ಮಾರ್ಚ್ 11ರಂದು ಕತಾರ್‌ನ ದೋಹಾದಲ್ಲಿ ನಡೆಯುತ್ತಿರುವ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಪಂದ್ಯಾವಳಿ 3ನೇ ಸೀಸನ್‌ನ 2ನೇ ಪಂದ್ಯದಲ್ಲಿ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ತಂಡದ ವಿರುದ್ದ ಆರೋನ್ ಫಿಂಚ್ ನಾಯಕತ್ವದ ವರ್ಲ್ಡ್ ಜೈಂಟ್ಸ್ ರೋಚಕ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆರೋನ್ ಫಿಂಚ್ ನಾಯಕತ್ವದ ವರ್ಲ್ಡ್ ಜೈಂಟ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. ಈ ಸವಾಲಿನ ಗುರಿ ಬೆನ್ನಟ್ಟಿದ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಲಷ್ಟೇ ಶಕ್ತವಾಯಿತು.
ಇಂಡಿಯಾ ಮಹಾರಾಜಸ್ ನಾಯಕ ಗೌತಮ್ ಗಂಭೀರ್ ಮತ್ತೊಮ್ಮೆ ಅರ್ಧಶತಕ ಬಾರಿಸಿದರೂ, ಕೊನೆಯಲ್ಲಿ ಉಳಿದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವಲ್ಲಿ ವಿಫಲರಾಗಿದ್ದು, ತಂಡದ ಸತತ ಎರಡನೇ ಸೋಲಿಗೆ ಕಾರಣವಾಯಿತು. ಮೊದಲ ಪಂದ್ಯದಲ್ಲಿ ಏಷ್ಯಾ ಲಯನ್ಸ್ ವಿರುದ್ಧ 9 ರನ್‌ಗಳಿಂದ ಸೋಲು ಕಂಡಿರುವ ಇಂಡಿಯಾ ಮಹಾರಾಜಾಸ್ ತಂಡ ಪಂದ್ಯಾವಳಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿದೆ.

ವರ್ಲ್ಡ್ ಜೈಂಟ್ಸ್ ನಿಡಿದ್ದ 166 ರನ್‌ಗಳ ಚೇಸಿಂಗ್‌ನಲ್ಲಿ ಇಂಡಿಯಾ ಮಹಾರಾಜಸ್ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಗೌತಮ್ ಗಂಭೀರ್ 42 ಎಸೆತಗಳಲ್ಲಿ 68 ರನ್ ಗಳಿಸಿದರೆ, ಮತ್ತೊಬ್ಬ ಆರಂಭಿಕ ರಾಬಿನ್ ಉತ್ತಪ್ಪ 21 ಎಸೆತಗಳಲ್ಲಿ 29 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 6.2 ಓವರ್‌ಗಳಲ್ಲಿ 65 ರನ್ ಕಲೆ ಹಾಕಿತು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಮುರುಳಿ ವಿಜಯ್ 11 ರನ್, ಸುರೇಶ್ ರೈನಾ 19 ರನ್, ಮೊಹಮ್ಮದ್ ಕೈಫ್ 21 ರನ್ ಗಳಿಸಿದರೂ ಗೆಲುವಿನ ಗಡಿ ತಲುಪಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಗೆಲುವಿಗೆ 8 ರನ್‌ಗಳ ಅವಶ್ಯವಿದ್ದಾಗ ಕೇವಲ 5 ರನ್ ಮಾತ್ರ ಗಳಿಸಿದರು.
ಬೌಲಿಂಗ್‌ನಲ್ಲಿ ವರ್ಲ್ಡ್ ಜೈಂಟ್ಸ್ ತಂಡದ ಪರ ರಿಚರ್ಡ್ ಪೊವೆಲ್ 2 ವಿಕೆಟ್, ಕ್ರಿಸ್ ಪೋಫು ಒಂದು ವಿಕೆಟ್, ಟಿನೊ ಬೆಸ್ಟ್ ಒಂದು ವಿಕೆಟ್ ಮತ್ತು ಬ್ರೆಟ್ ಲೀ ಒಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ನಾಯಕ ಆರೋನ್ ಫಿಂಚ್ ಮತ್ತು ಶೇನ್ ವ್ಯಾಟ್ಸನ್ ಅವರ ಅರ್ಧಶತಕಗಳ ನೆರವಿನಿಂದ ವರ್ಲ್ಡ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು.
ಆರೋನ್ ಫಿಂಚ್ 33 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 53 ರನ್ ಬಾರಿಸಿದರೆ, ಶೇನ್ ವ್ಯಾಟ್ಸನ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ದೊಡ್ಡ ಸಿಕ್ಸರ್‌ಗಳ ಸಮೇತ 55 ರನ್ ಗಳಿಸಿದರು. ಉಳಿದಂತೆ ಕೊನೆಯಲ್ಲಿ ಬೆಸ್ಟ್ 13 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಇಂಡಿಯಾ ಮಹಾರಾಜಸ್ ತಂಡದ ಪರ ಹರ್ಭಜನ್ ಸಿಂಗ್ 2 ಓವರ್‌ಗಳಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದರೆ, ಪ್ರವೀಣ್ ತಾಂಬೆ 4 ಓವರ್‌ಗಳಲ್ಲಿ 17 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಇರ್ಫಾನ್ ಪಠಾಣ್ ಒಂದು ವಿಕೆಟ್ ಪಡೆದರು.
ವಿಪರ್ಯಾಸವೆಂದರೆ, ಇಂಡಿಯಾ ಮಹಾರಾಜಸ್ ತಂಡದ ಬೌಲರ್‌ಗಳು ವರ್ಲ್ಡ್ ಜೈಂಟ್ಸ್ ತಂಡಕ್ಕೆ 19 ರನ್‌ಗಳನ್ನು ಇತರೆ ರೂಪದಲ್ಲಿ ಬಿಟ್ಟುಕೊಟ್ಟರು. ವ್ಯಾಟ್ಸನ್, ಫಿಂಚ್ ಬಿಟ್ಟರೆ ಇದು ಮೂರನೇ ಹೆಚ್ಚಿನ ಸ್ಕೋರ್ ಆಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications