For Quick Alerts
ALLOW NOTIFICATIONS  
For Daily Alerts
 

LLC 2023: ರೈನಾ ಉತ್ತಮ ಬ್ಯಾಟಿಂಗ್; ವರ್ಲ್ಡ್ ಜೈಂಟ್ಸ್ ತಂಡಕ್ಕೆ ಸಾಧಾರಣ ಗುರಿ ನೀಡಿದ ಇಂಡಿಯಾ ಮಹಾರಾಜಸ್

LLC 2023: World Giants Need 137 Runs To Win Against India Maharajas

ಬುಧವಾರ, ಮಾರ್ಚ್ 15ರಂದು ಕತಾರ್‌ನ ದೋಹಾದಲ್ಲಿರುವ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಮಾಸ್ಟರ್ಸ್‌ನ ಮೂರನೇ ಆವೃತ್ತಿಯ ಐದನೇ ಪಂದ್ಯದಲ್ಲಿ ಇಂಡಿಯಾ ಮಹಾರಾಜಸ್ ತಂಡವು ವರ್ಲ್ಡ್ ಜೈಂಟ್ಸ್ ತಂಡದ ವಿರುದ್ಧ ಸಾಧಾರಣ ಮೊತ್ತ ಕಲೆಹಾಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರ್ಭಜನ್ ಸಿಂಗ್ ನಾಯಕತ್ವದ ಇಂಡಿಯಾ ಮಹಾರಾಜಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 136 ರನ್ ಪೇರಿಸಿದ್ದು, ಆರೋನ್ ಫಿಂಚ್ ನಾಯಕತ್ವದ ವರ್ಲ್ಡ್ ಜೈಂಟ್ಸ್ ತಂಡಕ್ಕೆ 137 ರನ್‌ಗಳ ಗುರಿ ನೀಡಿದೆ.

ಇಂಡಿಯಾ ಮಹಾರಾಜಸ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ ಮತ್ತು ಮನ್ವಿಂದರ್ ಬಿಸ್ಲಾ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲರಾದರು. 1.4 ಓವರ್‌ಗಳಲ್ಲಿ 11 ರನ್‌ಗಳಾಗಿದ್ದಾಗ ರಾಬಿನ್ ಉತ್ತಪ್ಪ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ರೀತಿಂದರ್ ಸೋಧಿ ಸಹ 2 ರನ್ ಗಳಿಸಿ ಔಟಾದರು.

ಆರಂಭಿಕ ಬ್ಯಾಟರ್ ಮನ್ವಿಂದರೆ ಬಿಸ್ಲಾ 34 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 36 ರನ್ ಬಾರಿಸಿ ವಿಕೆಟ್ ನೀಡಿದರು. ಇನ್ನು ಸುರೇಶ್ ರೈನಾ 41 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 49 ರನ್ ಗಳಿಸಿದರು.

LLC 2023: World Giants Need 137 Runs To Win Against India Maharajas

ಇನ್ನು ಆಲ್‌ರೌಂಡರ್ ಇರ್ಫಾನ್ ಪಠಾಣ್ 20 ಎಸೆತಗಳಲ್ಲಿ 25 ರನ್ ಗಳಿಸಿ ತಂಡದ ಮೊತ್ತ 130 ಗಡಿ ದಾಟುವಲ್ಲಿ ನೆರವಾದರು. ಉಳಿದಂತೆ ಯಾವುದೇ ಬ್ಯಾಟ್ಸ್‌ಮನ್‌ಗಳು ವರ್ಲ್ಡ್ ಜೈಂಟ್ಸ್ ತಂಡದ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಲು ವಿಫಲರಾದರು.

ಬೌಲಿಂಗ್‌ನಲ್ಲಿ ವರ್ಲ್ಡ್ ಜೈಂಟ್ಸ್ ತಂಡದ ಪರ ಬ್ರೆಟ್ ಲೀ 3 ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದರು. ಟಿನೋ ಬೆಸ್ಟ್ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರೆ, ಸಮಿತ್ ಪಟೇಲ್ ಮತ್ತು ಮಾಂಟಿ ಪನೇಸರ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಶನಿವಾರ, ಮಾರ್ಚ್ 11ರಂದು ನಡೆದ ಪಂದ್ಯದಲ್ಲಿ ವರ್ಲ್ಡ್ ಜೈಂಟ್ಸ್ ತಂಡವು ಇಂಡಿಯಾ ಮಹಾರಾಜಸ್ ತಂಡವನ್ನು 2 ರನ್‌ಗಳಿಂದ ಸೋಲಿಸಿತ್ತು.

ಇಂಡಿಯಾ ಮಹಾರಾಜಸ್ ತಂಡ ಆಡಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತು, ಒಂದು ಪಂದ್ಯವನ್ನು ಗೆದ್ದಿದೆ. ವರ್ಲ್ಡ್ ಜೈಂಟ್ಸ್ ತಂಡವು ಆಡಿದ ಎರಡು ಪಂದ್ಯಗಳಲ್ಲಿ ಒಂದು ಗೆದ್ದು, ಒಂದು ಸೋತಿದೆ.

ಇದೀಗ ಕಳೆದ ಪಂದ್ಯದ ಸೋಲಿಗೆ ಗೌತಮ್ ಗಂಭೀರ್ ಪಡೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದರೆ. ಆರೋನ್ ಫಿಂಚ್ ವರ್ಲ್ಡ್ ಜೈಂಟ್ಸ್ ಇಂಡಿಯಾ ಮಹಾರಾಜಸ್ ವಿರುದ್ಧ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ಹರ್ಭಜನ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್ ಆಡುವ 11ರ ಬಳಗ
ಭಾರತ ಮಹಾರಾಜಸ್: ರಾಬಿನ್ ಉತ್ತಪ್ಪ(ವಿಕೆಟ್ ಕೀಪರ್), ಮನ್ವಿಂದರ್ ಬಿಸ್ಲಾ, ಸುರೇಶ್ ರೈನಾ, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್ (ನಾಯಕ), ರೀತಿಂದರ್ ಸೋಧಿ, ಅಶೋಕ್ ದಿಂಡಾ

ವರ್ಲ್ಡ್ ಜೈಂಟ್ಸ್: ಆರೋನ್ ಫಿಂಚ್ (ನಾಯಕ), ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್, ರಾಸ್ ಟೇಲರ್, ಹಾಶಿಮ್ ಆಮ್ಲಾ, ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಟಿನೊ ಬೆಸ್ಟ್, ಸಮಿತ್ ಪಟೇಲ್, ಬ್ರೆಟ್ ಲೀ, ಮಾಂಟಿ ಪನೇಸರ್, ಕ್ರಿಸ್ ಎಂಫೊಫು.

Story first published: Wednesday, March 15, 2023, 21:51 [IST]
Other articles published on Mar 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+