LLC 2023: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವರ್ಲ್ಡ್ ಜೈಂಟ್ಸ್: ಪ್ಲೇಯಿಂಗ್ ಇಲೆವೆನ್, ನೇರಪ್ರಸಾರ ಮಾಹಿತಿ

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಭಾರತ ಮಹಾರಾಜಸ್ ವಿರುದ್ಧ ಟಾಸ್ ಗೆದ್ದಿರುವ ವರ್ಲ್ಡ್ ಜೈಂಟ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಭಾರತ ಮಹಾರಾಜಾಸ್ ತಂಡ ಎರಡನೇ ಪಂದ್ಯದಲ್ಲಿ ಗೆಲ್ಲುವ ಲೆಕ್ಕಾಚಾರದಲ್ಲಿದೆ.
ದೋಹಾದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಬಲಿಷ್ಠ ವರ್ಲ್ಡ್ ಜೈಂಟ್ಸ್ ಮೊದಲನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಫಿಂಚ್, ಕ್ರಿಸ್ ಗೇಲ್, ಶೇನ್ ವ್ಯಾಟ್ನನ್‌ರಂತಹ ದಿಗ್ಗಜ ಕ್ರಿಕೆಟಿಗರು ಇಂದಿನ ಪಂದ್ಯದಲ್ಲಿ ವರ್ಲ್ಡ್ ಜೈಂಟ್ಸ್ ಪರವಾಗಿ ಕಣಕ್ಕಿಳಿಯುತ್ತಿದ್ದಾರೆ.
ಭಾರತ ಮಹಾರಾಜಾಸ್ ಆಡಿದ ಮೊದಲನೇ ಪಂದ್ಯದಲ್ಲಿ ಏಷ್ಯನ್ ಲಯನ್ಸ್ ವಿರುದ್ಧ 9 ರನ್‌ಗಳಿಂದ ಸೋಲನುಭವಿಸಿತ್ತು. ನಾಯಕ ಗೌತಮ್ ಗಂಭೀರ್ 57 ರನ್ ಗಳಿಸಿದರೂ ತಮ್ಮ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ. ಯೂಸುಫ್ ಪಠಾಣ್, ಸುರೇಶ್ ರೈನಾ ಇಂದಿನ ಪಂದ್ಯದಲ್ಲಿ ಮಿಂಚಿದರೆ ಭಾರತ ಮಹಾರಾಜಸ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.
ವೆಸ್ಟ್ ಎಂಡ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ದೋಹಾದಲ್ಲಿ ನಡೆಯುತ್ತಿದ್ದು, ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಲಾಗಿದೆ. ದಿಗ್ಗಜ ಆಟಗಾರರು ಆಡುತ್ತಿರುವ ಈ ಪಂದ್ಯದ ನೇರಪ್ರಸಾರವನ್ನು ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ವೀಕ್ಷಿಸಬಹುದಾಗಿದೆ.

ಉಭಯ ತಂಡಗಳ ಆಡುವ ಬಳಗ
ಭಾರತ ಮಹಾರಾಜಸ್: ರಾಬಿನ್ ಉತ್ತಪ್ಪ(ವಿಕೆಟ್ ಕೀಪರ್), ಗೌತಮ್ ಗಂಭೀರ್(ನಾಯಕ), ಮುರಳಿ ವಿಜಯ್, ಸುರೇಶ್ ರೈನಾ, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಅಶೋಕ್ ದಿಂಡಾ
ವರ್ಲ್ಡ್ ಜೈಂಟ್ಸ್: ಆರನ್ ಫಿಂಚ್ (ನಾಯಕ), ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್, ಜಾಕ್ವೆಸ್ ಕಾಲಿಸ್, ರಾಸ್ ಟೇಲರ್, ಕೆವಿನ್ ಒ ಬ್ರಿಯಾನ್, ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಟಿನೊ ಬೆಸ್ಟ್, ಬ್ರೆಟ್ ಲೀ, ಮಾಂಟಿ ಪನೇಸರ್, ಕ್ರಿಸ್ ಎಂಫೊಫು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications