Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LLC Season 2: ಅಭಿಮಾನಿಗಳ ಕನಸು ನನಸಾಯ್ತು..! ಒಂದೇ ತಂಡದಲ್ಲಿ ಆಡಲಿದ್ದಾರೆ ಕ್ರಿಸ್‌ಗೇಲ್ ಮತ್ತು ಸೆಹ್ವಾಗ್‌

Chris gayle and sehwag

ಕ್ರಿಕೆಟ್ ಪ್ರೇಮಿಗಳು ಕಟ್ಟಿದ ಕನಸು ಕೊನೆಗೂ ನಿಜವಾಗುತ್ತಿದೆ. ಕ್ರಿಕೆಟ್‌ ಇತಿಹಾಸದ ಇಬ್ಬರು ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಮೊದಲು ಬಾರಿಗೆ ಒಂದಾಗಿ ಒಂದೇ ತಂಡದ ಪರ ಆಡಲು ಮುಂದಾಗಿದ್ದಾರೆ. ಅದು ಕೂಡ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಆ ಲೆಜೆಂಡ್ಸ್ ಬೇರೆ ಯಾರೂ ಅಲ್ಲ, ಒಬ್ಬರು ಭಾರತದ ಮಾಜಿ ಆಟಗಾರ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಮತ್ತು ಇನ್ನೊಬ್ಬರು ಯೂನಿವರ್ಸಲ್ ಬಾಸ್ ಎಂದು ಕರೆಯಲ್ಪಡುವ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್.

ಸೆಹ್ವಾಗ್ ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಆದರೆ ಗೇಲ್ ರಾಷ್ಟ್ರೀಯ ತಂಡದ ಭಾಗವಾಗಿಲ್ಲದಿದ್ದರೂ, ವಿಶ್ವದ ಇತರೆ ಟಿ20 ಲೀಗ್‌ನಿಂದ ಇನ್ನೂ ನಿವೃತ್ತರಾಗಿಲ್ಲ.

ಒಂದೇ ತಂಡದಲ್ಲಿ ಆಡಲಿದ್ದಾರೆ ಕ್ರಿಸ್‌ಗೇಲ್ ಮತ್ತು ಸೆಹ್ವಾಗ್‌

ಒಂದೇ ತಂಡದಲ್ಲಿ ಆಡಲಿದ್ದಾರೆ ಕ್ರಿಸ್‌ಗೇಲ್ ಮತ್ತು ಸೆಹ್ವಾಗ್‌

ಮುಂಬರುವ ಲೆಜೆಂಡ್ಸ್ ಲೀಗ್ ಟಿ20 ಟೂರ್ನಿಯ ಎರಡನೇ ಸೀಸನ್‌ನಲ್ಲಿ ಸೆಹ್ವಾಗ್ ಮತ್ತು ಗೇಲ್ ಒಂದೇ ತಂಡದ ಪರ ಆಡುತ್ತಿದ್ದಾರೆ. ಅದಾನಿ ಸ್ಪೋರ್ಟ್ಸ್ ಲೈನ್ ಮಾಲೀಕತ್ವದ ಗುಜರಾತ್ ಜೈಂಟ್ಸ್ ತಂಡದೊಂದಿಗೆ ಗೇಲ್ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನು ಫ್ರಾಂಚೈಸಿಯೇ ಅಧಿಕೃತವಾಗಿ ಪ್ರಕಟಿಸಿದೆ. ಲೆಜೆಂಡ್ಸ್ ಲೀಗ್ ಈ ತಿಂಗಳ 16 ರಿಂದ ಪ್ರಾರಂಭವಾಗಲಿದೆ.

ಇಷ್ಟು ವರ್ಷದಿಂದ RCB ಕಪ್‌ ಗೆಲ್ಲದಿರಲು, ವಿರಾಟ್ ಕೊಹ್ಲಿಯೇ ಮುಖ್ಯ ಕಾರಣ: ರಶೀದ್ ಲತೀಫ್‌

15 ಆಟಗಾರರಿಗೆ 5,51,80,000 ರೂಪಾಯಿ ಖರ್ಚು ಮಾಡಿದ ಗುಜರಾತ್ ಜೈಂಟ್ಸ್‌

15 ಆಟಗಾರರಿಗೆ 5,51,80,000 ರೂಪಾಯಿ ಖರ್ಚು ಮಾಡಿದ ಗುಜರಾತ್ ಜೈಂಟ್ಸ್‌

LLC ಯ ಕರಡು ನಿಯಮಗಳ ಪ್ರಕಾರ, ಫ್ರಾಂಚೈಸಿಗಳು ತಮ್ಮ ಅಂತಿಮ ತಂಡವನ್ನು ನಿರ್ಧರಿಸಲು ಮೂರು ದಿನಗಳವರೆಗೆ ಅನುಮತಿಸಲಾಗಿದೆ. 15 ಆಟಗಾರರಿಗೆ ಶುಕ್ರವಾರ ಗುಜರಾತ್ ಜೈಂಟ್ಸ್ 5,51,80,000 ಖರ್ಚು ಮಾಡಿದೆ. ಡ್ರಾಫ್ಟ್ ಅನ್ನು ವರ್ಚುವಲ್ ಮೋಡ್‌ನಲ್ಲಿ ನಡೆಸಲಾಯಿತು.

ವರ್ಚುವಲ್ ಡ್ರಾಫ್ಟ್‌ನಲ್ಲಿ ಶುಕ್ರವಾರ 15 ಲೆಜೆಂಡ್‌ ಆಟಗಾರರನ್ನ ಖರೀದಿಸಲು ಈಗಾಗಲೇ 5,51,80,000 ರೂಪಾಯಿ ಖರ್ಚು ಮಾಡಿರುವ ಗುಜರಾತ್ ಜೈಂಟ್ಸ್, ತಮ್ಮ ತಂಡವನ್ನು ಅಂತಿಮಗೊಳಿಸಲು 2,48,20,000 ರೂ. ಉಳಿಸಿದೆ.

ಹಣ ಉಳಿಸಿ ಕ್ರಿಸ್‌ಗೇಲ್ ಖರೀದಿಸಿದ ಗುಜರಾತ್ ಜೈಂಟ್ಸ್‌

ಹಣ ಉಳಿಸಿ ಕ್ರಿಸ್‌ಗೇಲ್ ಖರೀದಿಸಿದ ಗುಜರಾತ್ ಜೈಂಟ್ಸ್‌

ಶುಕ್ರವಾರದ ಡ್ರಾಫ್ಟ್ ನಂತರ, ಗುಜರಾತ್ ಜೈಂಟ್ಸ್‌ ತಮ್ಮ ಪರ್ಸ್‌ನಲ್ಲಿ ಉಳಿದ ಹಣವನ್ನು ಬಳಸಿಕೊಂಡು ಕ್ರಿಸ್ ಗೇಲ್‌ಗೆ ಸಹಿ ಹಾಕಲು ಉತ್ಸುಕರಾಗಿದ್ದರು. ಅದಾನಿ ಸ್ಪೋರ್ಟ್ಸ್ ಲೇನ್ ತಂಡದ ಪರ ಗೇಲ್ ಆಡಲು ಸಂತೋಷವಾಗಿದೆ ಎಂದು ಎಲ್ಎಲ್‌ಸಿ ಸಿಇಒ ಮತ್ತು ಸಹ-ಸಂಸ್ಥಾಪಕ ರಾಮನ್ ರಹೇಜಾ ಹೇಳಿದ್ದಾರೆ.

ಇದೇ ತಿಂಗಳ 16ರಂದು ಈಡನ್‌ನಲ್ಲಿ ಆರಂಭಗೊಳ್ಳಲಿರುವ ಲೆಜೆಂಡ್ಸ್‌ ಲೀಗ್‌ ಸೀಸನ್‌ 2ನಲ್ಲಿ ಚಾರಿಟಿ ಮ್ಯಾಚ್‌ನಿಂದ ಸಂಗ್ರಹವಾದ ಹಣವನ್ನು ಕಪಿಲ್ ದೇವ್ ಅವರ ಖುಷಿ ಫೌಂಡೇಶನ್‌ಗೆ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ

Ind vs Pak: ಪಂದ್ಯ ಪೂರ್ವ ಪತ್ರಿಕಾಗೋಷ್ಟಿಯಲ್ಲಿ 4 ಅಕ್ಷರದ ಪದ ಬಳಕೆಗೆ ರಾಹುಲ್ ದ್ರಾವಿಡ್ ಹಿಂದೇಟು

ಕಳೆದ ಐಪಿಎಲ್ ಸೀಸನ್‌ನಲ್ಲಿ ಹೊರಗುಳಿದಿದ್ದ ಕ್ರಿಸ್‌ಗೇಲ್‌

ಕಳೆದ ಐಪಿಎಲ್ ಸೀಸನ್‌ನಲ್ಲಿ ಹೊರಗುಳಿದಿದ್ದ ಕ್ರಿಸ್‌ಗೇಲ್‌

ಕಳೆದ ಐಪಿಎಲ್ ಋತುವಿನಲ್ಲಿ ಕ್ರಿಸ್ ಗೇಲ್ ಯಾವುದೇ ಫ್ರಾಂಚೈಸಿಗಾಗಿ ಆಡಿರಲಿಲ್ಲ. ಮೆಗಾ ಹರಾಜಿನ ಮೊದಲು ಅವರು ಸ್ವತಃ ಹಿಂತೆಗೆದುಕೊಂಡರು. ಆದರೆ, ಗೇಲ್ ಮುಂದಿನ ಋತುವಿನಲ್ಲಿ ಮರಳುವ ಸುಳಿವು ನೀಡಿದ್ದಾರೆ. ಏತನ್ಮಧ್ಯೆ, ಅವರು ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಒಳಗೊಂಡಿರುವ ಲೆಜೆಂಡ್ಸ್ ಲೀಗ್‌ನ ಭಾಗವಾಗಿದ್ದಾರೆ.

''ನಾವು ಚರ್ಚೆಯನ್ನು ಸುಗಮಗೊಳಿಸಿದ್ದೇವೆ ಮತ್ತು ಗೇಲ್ ಅವರು ಅದಾನಿ ಸ್ಪೋರ್ಟ್ಸ್‌ಲೈನ್ ತಂಡದಲ್ಲಿ ಆಡುವುದನ್ನು ಕಾಣಬಹುದು ಎಂದು ಸಂತೋಷಪಡುತ್ತೇವೆ" ಎಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ರಮಣ್ ರಹೇಜಾ ಹೇಳಿದ್ದಾರೆ.

ಗುಜರಾತ್ ಪರ ಆಡಲಿರುವ ಮತ್ತೊಬ್ಬ ವಿಂಡೀಸ್ ಮಾಜಿ ಪ್ಲೇಯರ್

ಗುಜರಾತ್ ಪರ ಆಡಲಿರುವ ಮತ್ತೊಬ್ಬ ವಿಂಡೀಸ್ ಮಾಜಿ ಪ್ಲೇಯರ್

ಗೇಲ್ ಹೊರತಾಗಿ ವೆಸ್ಟ್ ಇಂಡೀಸ್ ನ ಮಾಜಿ ಬ್ಯಾಟ್ಸ್ ಮನ್ ಲೆಂಡ್ಲ್ ಸಿಮನ್ಸ್ ಕೂಡ ಗುಜರಾತ್ ಜೈಂಟ್ಸ್ ಪರ ಆಡುತ್ತಿದ್ದಾರೆ. ವೀರೇಂದ್ರ ಸೆಹ್ವಾಗ್ ಮತ್ತು ಕ್ರಿಸ್ ಗೇಲ್ ತಂಡಕ್ಕೆ ಓಪನ್ ಆಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ಮರೆಯಲಾಗದ ಬ್ಯಾಟಿಂಗ್ ಹಬ್ಬವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಐಪಿಎಲ್‌ನಲ್ಲಿ ಆಗದಿದ್ದದ್ದು ಈಗ ಲೆಜೆಂಡ್ಸ್‌ ಲೀಗ್ ಮೂಲಕ ನಿಜವಾಗಲು ಹೊರಟಿದೆ.

ಗುಜರಾತ್ ಜೈಂಟ್ಸ್‌ನ ಪ್ರಮುಖ ಆಟಗಾರರು

ಗುಜರಾತ್ ಜೈಂಟ್ಸ್‌ನ ಪ್ರಮುಖ ಆಟಗಾರರು

ಶ್ರೀಲಂಕಾದ ಮಾಜಿ ಮಿಸ್ಟರಿ ಸ್ಪಿನ್ನರ್ ಅಜಂತಾ ಮೆಂಡಿಸ್, ನ್ಯೂಜಿಲೆಂಡ್‌ನ ಮಾಜಿ ನಾಯಕ ಮತ್ತು ಸ್ಪಿನ್ ದಂತಕಥೆ ಡೇನಿಯಲ್ ವೆಟ್ಟೋರಿ ಮತ್ತು ಇಂಗ್ಲೆಂಡ್‌ನ ಮಾಜಿ ಸ್ಟಾರ್ ಸ್ಪಿನ್ನರ್ ಗ್ರೇಮ್ ಸ್ವಾನ್ ಅವರು ಲೆಜೆಂಡ್ಸ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಭಾಗವಾಗಿದ್ದಾರೆ. ತಂಡದ ಇತರ ಪ್ರಮುಖ ಆಟಗಾರರಲ್ಲಿ ಭಾರತದ ಮಾಜಿ ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ಮತ್ತು ಐರ್ಲೆಂಡ್‌ನ ಮಾಜಿ ಸೂಪರ್‌ಸ್ಟಾರ್ ಕೆವಿನ್ ಒ'ಬ್ರೇನ್ ಸೇರಿದ್ದಾರೆ. ತಂಡವನ್ನು ವೀರೇಂದ್ರ ಸೆಹ್ವಾಗ್ ಮುನ್ನಡೆಸುತ್ತಿದ್ದಾರೆ.

ಗುಜರಾತ್ ಜೈಂಟ್ಸ್‌ ಸಂಪೂರ್ಣ ಸ್ಕ್ವಾಡ್‌

ಗುಜರಾತ್ ಜೈಂಟ್ಸ್‌ ಸಂಪೂರ್ಣ ಸ್ಕ್ವಾಡ್‌

ವೀರೇಂದ್ರ ಸೆಹ್ವಾಗ್ (ನಾಯಕ), ಕ್ರಿಸ್ ಗೇಲ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಎಲ್ಟನ್ ಚಿಗುಂಬುರಾ, ಕ್ರಿಸ್ ಟ್ರೆಮ್ಲೆಟ್, ರಿಚರ್ಡ್ ಲೆವಿ, ಗ್ರೇಮ್ ಸ್ವಾನ್, ಜೋಗಿಂದರ್ ಶರ್ಮಾ, ಅಶೋಕ್ ದಿಂಡಾ, ಡೇನಿಯಲ್ ವೆಟ್ಟೋರಿ, ಕೆವಿನ್ ಒ'ಬ್ರಿಯಾನ್, ಸ್ಟುವರ್ಟ್ ಬಿನ್ನಿ, ಸಿಮ್‌ಕ್ಲೆನ್, ಮೆಕ್‌ಕ್ಲೆನ್, ಲೆಂಡ್ ಮನ್ವಿಂದರ್ ಬಿಸ್ಲಾ, ಅಜಂತಾ ಮೆಂಡಿಸ್.

Story first published: Sunday, September 4, 2022, 18:45 [IST]
Other articles published on Sep 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+