Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ಪ್ರೀಮಿಯರ್ ಲೀಗ್: 3ನೇ ಆವೃತ್ತಿಯ ದಿನಾಂಕ ಘೋಷಿಸಿದ ಶ್ರೀಲಂಕಾ ಕ್ರಿಕೆಟ್

LPL 2022

ಶ್ರೀಲಂಕಾ ಪ್ರೀಮಿಯರ್ ಲೀಗ್ 3ನೇ ಆವೃತ್ತಿಗೆ ಕೊನೆಗೂ ದಿನಾಂಕ ಫೈನಲ್ ಆಗಿದೆ. ಶ್ರೀಲಂಕಾ ಕ್ರಿಕೆಟ್ ಅಧಿಕೃತವಾಗಿ ಮುಂದೂಡಲ್ಪಟ್ಟಿದ್ದ ಲಂಕಾ ಪ್ರೀಮಿಯರ್ ಲೀಗ್ ಅನ್ನು ಡಿಸೆಂಬರ್ 6 ರಿಂದ 23ರವರೆಗೆ ನಡೆಯಲಿದೆ ಎಂದು ಘೋಷಿಸಿದೆ.

ಕಳೆದ ವರ್ಷದ ಎಲ್‌ಪಿಎಲ್‌ ಪ್ರೀಮಿಯರ್ ಕೂಡ ಬಹುತೇಕ ಇದೇ ಅವಧಿಗೆ ನಡೆದಿದ್ದು, ಅದೇ ಸಮಯದಲ್ಲಿ ಟಿ20 ಲೀಗ್ ನಡೆಸಲು ಶ್ರೀಲಂಕಾ ಕ್ರಿಕೆಟ್ ಮುಂದಾಗಿದೆ.

ಆಗಸ್ಟ್‌ನಲ್ಲಿ, ಎಲ್‌ಪಿಎಲ್ ಪಂದ್ಯಾವಳಿಯ ಆಯೋಜಕರಾದ ಸಮಂತಾ ದೊಡನ್‌ವೇಲಾ ಎಲ್‌ಪಿಎಲ್‌ ಪ್ರಾರಂಭದ ದಿನಾಂಕವನ್ನು ಖಚಿತಪಡಿಸಿದ್ದರು. ಆದರೆ ಈಗ ಫೈನಲ್‌ನ ದಿನಾಂಕದ ಜೊತೆಗೆ ಪಂದ್ಯಾವಳಿಯ ಅವಧಿಯನ್ನು ಸಹ ನಿಗದಿಪಡಿಸಲಾಗಿದೆ.

ಈ ಬಾರಿಯು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಟಾರ್‌ ಆಟಗಾರರ ದಂಡೇ ಇದೆ. ಕ್ರಿಸ್ ಗೇಲ್, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ತಬ್ರೈಜ್ ಶಮ್ಸಿ, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ತಸ್ಕಿನ್ ಅಹ್ಮದ್ ಮತ್ತು ರೋವ್‌ಮನ್ ಪೊವೆಲ್ ಅವರು 2021 ರ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯು ಐದು ತಂಡಗಳು ಟಿ20 ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದೆ. ಕೊಲಂಬೊ ಸ್ಟಾರ್ಸ್‌, ದಂಬುಲ್ಲಾ ಜೈಂಟ್ಸ್, ಗಾಲೆ ಗ್ಲಾಡಿಯೇಟರ್ಸ್, ಜಾಫ್ನಾ ಕಿಂಗ್ಸ್, ಕ್ಯಾಂಡಿ ವಾರಿಯರ್ಸ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಎಲ್‌ಪಿಎಲ್ ಅನ್ನು ಮೂರು ಸ್ಥಳಗಳಲ್ಲಿ ಆಡಿಸಲಾಗುತ್ತದೆ. ಪಲ್ಲೆಕೆಲೆಗೆ ತೆರಳುವ ಮೊದಲು ಸೂರಿಯವೆವಾ (ಹಂಬಂತೋಟ) ದಲ್ಲಿ ಪ್ರಾರಂಭವಾಗುವ ಟೂರ್ನಿಯು ಖೆತ್ತಾರಾಮ (ಕೊಲಂಬೊ) ನಲ್ಲಿ ಆಡಿಸಲಾಗುತ್ತದೆ.

ಟಿ20 ಸ್ವರೂಪವು ಎರಡನೇ ಆವೃತ್ತಿಗೆ ಹೋಲುತ್ತದೆ. ಪ್ರತಿ ತಂಡವು ರೌಂಡ್-ರಾಬಿನ್ ಹಂತದಲ್ಲಿ ಪರಸ್ಪರ ಎರಡು ಬಾರಿ ಆಡುತ್ತದೆ, ಐದು ತಂಡಗಳಲ್ಲಿ ನಾಲ್ಕು ತಂಡಗಳು LPL ನ ಅಂತಿಮ ಅರ್ಹತಾ ಪಂದ್ಯಗಳಿಗೆ ತೆರಳುತ್ತವೆ.

Story first published: Saturday, October 15, 2022, 18:44 [IST]
Other articles published on Oct 15, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+