Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG vs GT: ಹಾರ್ದಿಕ್ ವಿಕೆಟ್ ಪಡೆದು ಸಂಭ್ರಮಿಸಲಿಲ್ಲ ಕೃನಾಲ್ ಪಾಂಡ್ಯ

Krunal
Krunal Pandyaತಮ್ಮ Hardik ವಿಕೆಟ್ ಪಡೆದು ಮಾಡಿದ್ದೇನು| Krunal Pandya had the last laugh| Oneindia Kannada

ಮುಂಬೈನ ವಾಂಖೆಡೆ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಎರಡು ಹೊಸ ತಂಡಗಳ ಮೇಲೆ ಎಲ್ಲರ ಕಣ್ಣಿರುವುದರ ಜೊತೆಗೆ, ಈ ಅಣ್ಣ ತಮ್ಮಂದಿರ ಮೇಲೆ ಹೆಚ್ಚಿನ ದೃಷ್ಟಿ ನೆಟ್ಟಿತ್ತು. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡವನ್ನ ಮುನ್ನಡೆಸಿದ್ರೆ, ಕೃನಾಲ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ.

ಇವತ್ತಿನ ಜಿದ್ದಾಜಿದ್ದಿನ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕೃನಾಲ್ ಮತ್ತು ಹಾರ್ದಿಕ್‌ರನ್ನ ವಿಭಿನ್ನ ತಂಡಗಳಲ್ಲಿ ನೋಡಲಾಯಿತು. ಇವರಿಬ್ಬರ ಮುಖಾಮುಖಿ ನೋಡಲು ಪ್ರತಿಯೊಬ್ಬರು ಕಾತುರಾಗಿದ್ದರು.

ಲಕ್ನೋ ನೀಡಿದ್ದ 159 ನೀಡಿದ್ದ ಗುರಿ ಬೆನ್ನತ್ತಿದ್ದ ಗುಜರಾತ್ ಆರಂಭದಲ್ಲೇ ಆಘಾತ ಅನುಭವಿಸಿತು. ಕೇವಲ 15ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಗುಜರಾತ್ ಟೈಟನ್ಸ್‌ಗೆ ನಾಯಕ ಹಾರ್ದಿಕ್ ಪಾಂಡ್ಯ ಆಧಾರವಾದ್ರು. ಈ ವೇಳೆಯಲ್ಲಿ ದಾಳಿಗಿಳಿದ ಹಾರ್ದಿಕ್ ಸಹೋದರ ಕೃನಾಲ್ ಪಾಂಡ್ಯ 33ರನ್‌ಗಳಿಸಿ ಉತ್ತಮವಾಗಿ ಆಡ್ತಿದ್ದ ಹಾರ್ದಿಕ್ ಪಾಂಡ್ಯರನ್ನ ಔಟ್‌ ಮಾಡುವಲ್ಲಿ ಯಶಸ್ವಿಯಾದ್ರು. ಹಾರ್ದಿಕ್ ಭರ್ಜರಿ ಹೊಡೆತಕ್ಕೆ ಮುಂದಾಗಿ ಮನೀಶ್ ಪಾಂಡೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ಹಾರ್ದಿಕ್ ವಿಕೆಟ್ ಪಡೆಯುತ್ತಿದ್ದಂತೆ ಕೃನಾಲ್ ಯಾವುದೇ ರೀತಿಯಲ್ಲಿ ಸಂಭ್ರಮಿಸಿದೇ ತನ್ನ ಮುಖವನ್ನು ಮರೆಮಾಚಿದನು ಮತ್ತು ನಂತರ ನಗುತ್ತಿರುವುದನ್ನು ಕಂಡುಬಂದಿತು. ವಿಕೆಟ್ ಪಡೆದಾಗ ಸಾಮಾನ್ಯವಾಗಿ ಅಗ್ರೆಸ್ಸಿವ್ ಆಗಿ ಕಾಣುವ ಕೃನಾಲ್ ಶಾಂತ ರೀತಿಯಲ್ಲಿ ಹೆಜ್ಜೆ ಹಾಕಿದ್ರು. ಇದು ನೋಡುಗರಿಗೆ ಆಶ್ಚರ್ಯ ಉಂಟುಮಾಡಿತು.

Story first published: Tuesday, March 29, 2022, 10:45 [IST]
Other articles published on Mar 29, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+