Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG vs GT: ಅದ್ಭುತ ಕ್ಯಾಚ್ ಹಿಡಿದು ಮಿಂಚಿದ ಶುಭ್ಮನ್ ಗಿಲ್

Shubman gill
Shubmam Gill ಹಿಡಿದ ಕ್ಯಾಚ್ ನೋಡಿ ಎಲ್ಲರೂ ಫಿದಾ | Gill takes stunning catch | Oneindia Kannada

ಐಪಿಎಲ್ 2022ನೇ ಸೀಸನ್‌ನ ಎರಡು ಹೊಸ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಮಿಂಚಿನ ಕ್ಯಾಚ್ ಹಿಡಿದು ಗಮನಸೆಳೆದಿದ್ದಾರೆ.

ವರುಣ್ ಆ್ಯರೋನ್ ಬೌಲಿಂಗ್‌ನಲ್ಲಿ ಎವಿನ್ ಲೂವಿಸ್ (10) ರನ್‌ಗಳಿಸಿ ನೀಡಿದ ಕ್ಯಾಚ್‌ಗೆ ಹಿಂದಕ್ಕೆ ಓಡಿ, ಫುಲ್ ಡೈವ್‌ನೊಂದಿಗೆ ಅವರು ಹಿಡಿದ ಕ್ಯಾಚ್ ಲೀಗ್‌ನ ಹೈಲೈಟ್ ಆಗಿತ್ತು. ಇದು ಟೂರ್ನಿಯ ಬೆಸ್ಟ್ ಕ್ಯಾಚ್ ಆಗಬಹುದು ಎಂಬ ವಿಮರ್ಶೆ ಮಾಡಲಾಗಿದೆ.

ಎವಿನ್ ಲೂಯಿಸ್ ವರುಣ್ ಆರೋನ್ ಅವರ ಬೌನ್ಸರ್‌ ಅನ್ನು ನಾಲ್ಕನೇ ಸ್ಟಂಪ್ ಕಡೆಗೆ ದೊಡ್ಡ ಹೊಡೆತವನ್ನು ಪ್ರಯತ್ನಿಸಿದರು. ಬಾಲ್ ಎಡ್ಜ್ ಅನ್ನು ತೆಗೆದುಕೊಂಡು ಸ್ಕ್ವೇರ್ ಲೆಗ್ ಕಡೆಗೆ ಸಾಗಿತು. ಆ ದಿಸೆಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶುಭ್ ಮನ್ 25 ಗಜ ಹಿಂದೆ ಓಡಿ ಸೂಪರ್ ಡೈವ್ ಪಡೆದರು. ಮೈದಾನದಲ್ಲಿದ್ದ ಆಟಗಾರರ ಜತೆಗೆ ಪ್ರೇಕ್ಷಕರು ಶುಭ್‌ಮನ್‌ ಅವರ ಫೀಲ್ಡಿಂಗ್‌ಗೆ ಹರ್ಷ ವ್ಯಕ್ತಪಡಿಸಿದರು. ನೆಟಿಜನ್‌ಗಳು ಇದೊಂದು ಸೂಪರ್ ಕ್ಯಾಚ್ ಎಂದು ಕೊಂಡಾಡಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಲಕ್ನೋ ಸೂಪರ್ ಜೈಂಟ್ಸ್ ಶಮಿ ದಾಳಿಗೆ ಕೇವಲ 29ರನ್‌ಗೆ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ನಾಯಕ ಕೆಎಲ್ ರಾಹುಲ್ (0) ಗೋಲ್ಡನ್ ಡಕ್ , ಕ್ವಿಂಟನ್ ಡಿಕಾಕ್ (7), ಲೂಯಿಸ್(10) , ಮನೀಶ್ ಪಾಂಡೆ (6) ದಯನೀಯವಾಗಿ ವಿಫಲರಾದರು. ದೀಪಕ್ ಹೂಡಾ (ಔಟಾಗದೆ 55) ಮತ್ತು ಆಯುಷ್ ಬಡೋನಿ (54) ರನ್‌ಗಳ ನೆರವಿನಿಂದ ಲಕ್ನೋ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158ರನ್ ಕಲೆಹಾಕಿತು.

ಗುಜರಾತ್ ಪರ ಶಮಿ 3, ವರುಣ್ ಆ್ಯರೋನ್ 2, ರಶೀದ್ 1 ವಿಕೆಟ್ ಪಡೆದಿದ್ದಾರೆ.

Story first published: Tuesday, March 29, 2022, 23:58 [IST]
Other articles published on Mar 29, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+