For Quick Alerts
ALLOW NOTIFICATIONS  
For Daily Alerts
 

Lungi Ngidi: ಆರ್‌ಸಿಬಿ "ಲುಂಗಿ" ಡ್ಯಾನ್ಸ್‌ ಮಾಡಲು ಕಾರಣವಾದ ಆಟಗಾರ ಇವರೇ...

ಆರ್‌ಸಿಬಿ ತಂಡ ಈ ಬಾರಿ ಕಪ್‌ ಗೆಲ್ಲಬಹುದು ಎಂದು ಮಾಜಿ ಆಟಗಾರರು ಅಭಿಮಾನಿಗಳು ಏಕೆ ಹೇಳ್ತಾ ಇದ್ದಾರೆ ಎಂಬುದಕ್ಕೆ ಒಳ್ಳೆಯ ನಿದರ್ಶನ ಶನಿವಾರ ಸಿಕ್ಕಿದೆ. ಆರ್‌ಸಿಬಿ ಟಾಸ್‌ ಸೋತಾಗ ಜೋಶ್‌ ಹ್ಯಾಜಲ್‌ವುಡ್‌ ಅಲಭ್ಯ ಎಂದು ತಿಳಿಸಿದರು. ಆಗ ಅಭಿಮಾನಿಗಳು ಈ ಬಾರಿ ನಮ್ಮ ಕಥೆ ಮುಗಿತು ಬಿಡಪ್ಪಾ ಎಂದೇ ಅಂದು ಕೊಂಡಿದ್ದರು. ಆದರೆ 10 ಪಂದ್ಯಗಳಲ್ಲಿ ಸಿಗದ ಅವಕಾಶ 11ನೇ ಪಂದ್ಯದಲ್ಲಿ ಸಿಕ್ಕಾಗ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತೋರಿಸಿಟ್ಟ ಎಂಬ ಪ್ಲೇಯರ್‌ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ.

ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್‌ಗಿಡಿ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಪಂದ್ಯವನ್ನು ಆಡಿ ಇಂಪ್ಯಾಕ್ಟ್ ಫುಲ್ ಪ್ರದರ್ಶನ ನೀಡಿದರು. ಇವರು ತಮ್ಮ ಪರ್ಫೆಕ್ಟ್ ಲೈನ್ ಹಾಗೂ ಲೆಂಥ್‌ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದರು. ಇವರು ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು, ಆರ್‌ಸಿಬಿ ತಂಡದ ಮಹತ್ವದ ಗೆಲುವಿನಲ್ಲಿ ಮಿಂಚಿದರು. ಈ ಮೂಲಕ ಮುಂದಿನ ಪಂದ್ಯಗಳಲ್ಲಿ ತಮ್ಮ ಅನುಭವವನ್ನು ಸಹ ಕಡಿಗಣಿಸಬೇಡಿ ಎಂಬ ಸಂದೇಶವನ್ನು ಲುಂಗಿ ಎನ್‌ಗಿಡಿ ಕ್ಯಾಪ್ಟನ್‌ ರಜತ್ ಪಟಿದಾರ್ ಅವರಿಗೆ ನೀಡಿದರು.

Lungi Ngidi Turns the Tide for RCB Against CSK Replacing Hazlewood with a Match-Winning Spell

ಲುಂಗಿ ಎನ್‌ಗಿಡಿ ಜೋಶ್‌ ಹ್ಯಾಜಲ್‌ವುಡ್‌ ಇಲ್ಲದೇ ಇದ್ದರೆ ಏನಂತೆ ಅವರ ಹಾಗೆ ಬೌಲಿಂಗ್ ನಾನು ಮಾಡುವೆ ಎಂದು ತೋರಿಸಿದ್ದಾರೆ. ಲುಂಗಿ ಎನ್‌ಗಿಡಿ ಅವರಿಗೆ ಪವರ್‌ ಪ್ಲೇ ಕಡೆಯ ಓವರ್‌ ನೀಡಲಾಯಿತು. ಈ ವೇಳೆ ಇವರು ಸ್ಯಾಮ್‌ ಕರನ್‌ ಅವರಿಗೆ ಖೆಡ್ಡಾ ತೋಡಿದರು. ಬ್ಯಾಕ್‌ ಆಫ್ ಲೆಂಥ್‌ ಡಿಲೇವರಿಯನ್ನು ಕೆಣಕಿದ ಸ್ಯಾಮ್‌ ಕರನ್‌, ವಿಕೆಟ್‌ ಕೀಪರ್‌ ಜಿತೀಶ್‌ ಶರ್ಮಾ ಅವರಿಗೆ ಕ್ಯಾಚ್ ನೀಡಿದರು.

ಲುಂಗಿ ಎನ್‌ಗಿಡಿ ಕಮಾಲ್‌

ಲುಂಗಿ ಎನ್‌ಗಿಡಿ ತಮ್ಮ ಕರಾರುವಾಕ್‌ ದಾಳಿಯಿಂದ ಗಮನ ಸೆಳೆದಿದ್ದು 17ನೇ ಓವರ್‌ನಲ್ಲಿ. 16ನೇ ಓವರ್‌ ಅಂತ್ಯಕ್ಕೆ ಸಿಎಸ್‌ಕೆ 2 ವಿಕೆಟ್‌ ನಷ್ಟಕ್ಕೆ 171 ರನ್‌ ಸಿಡಿಸಿತ್ತು. ಇನ್ನು 24 ಎಸೆತಗಳಲ್ಲಿ 43 ರನ್‌ ಅವಶ್ಯಕತೆ ಇತ್ತು. ಆಗ ಬೌಲಿಂಗ್ ಮಾಡಿ ಸೈ ಎನಿಸಿಕೊಂಡವರೆ ಎನ್‌ಗಿಡಿ. ಈ ಓವರ್‌ನ ಮೊದಲ ಎಸೆತದಲ್ಲಿ ಜಡೇಜಾ ಸಿಂಗಲ್‌ ಪಡೆದರು. ಎರಡನೇ ಎಸೆತದಲ್ಲಿ ಔಟ್ ಸೈಡ್‌ ಆಫ್‌ ಸ್ಟಂಪ್‌ ಹಾಕಲಾದ ಸ್ಲೋವರ್ ಒನ್‌ ಡಿಲೇವರಿಯನ್ನು ಆಯುಷ್ ಮಾತ್ರೆ ಡಿಪ್‌ ಮಿಡ್ ವಿಕೇಟ್‌ನಲ್ಲಿ ಸಿಕ್ಸರ್ ಬಾರಿಸಲು ಹೋಗಿ ಕೃನಾಲ್‌ ಪಾಂಡ್ಯ ಹಿಡಿದ ಕ್ಯಾಚ್‌ಗೆ ಬಲಿಯಾದರು. ಮೂರನೇ ಎಸೆತದಲ್ಲಿ ಡೇವಲ್ಡ್ ಬ್ರೇವಿಸ್ ವಿಕೆಟ್‌ ಪಡೆದು ಅಬ್ಬರಿಸಿದರು. ಈ ಮೂಲಕ 17ನೇ ಓವರ್‌ನಲ್ಲಿ ಕೇವಲ 8 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು.

Lungi Ngidi Turns the Tide for RCB Against CSK Replacing Hazlewood with a Match-Winning Spell

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಲುಂಗಿ ಎನ್‌ಗಿಡಿ 4 ಓವರ್ ಬೌಲಿಂಗ್ ನಡೆಸಿ 30 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಈ ವೇಳೆ ಇವರು 9 ಡಾಟ್‌ ಬೌಲ್‌ ಎಸೆದರು. ಇವರು ಈ ಪಂದ್ಯದಲ್ಲಿ ಒಂದೇ ಒಂದು ನೋಬಾಲ್‌, ವೈಡ್ ಎಸೆಯಲಿಲ್ಲ. ಆರ್‌ಸಿಬಿ ಚೆನ್ನೈ ವಿರುದ್ಧ 2 ಜಯ ಸಾಧಿಸಿತು. ಈ ಗೆಲುವಿನಲ್ಲಿ ಲುಂಗಿ ಪಾತ್ರ ದೊಡ್ಡದು.

Story first published: Sunday, May 4, 2025, 6:05 [IST]
Other articles published on May 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+