Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾರಾಜ ಟ್ರೋಫಿ, ಎಲಿಮಿನೇಟರ್: ಸೋತ ಹುಬ್ಬಳ್ಳಿ ಮನೆಗೆ; ಮೈಸೂರು ಕ್ವಾಲಿಫೈಯರ್‌ಗೆ!

Maharaja trophy 2022: Mysuru Warriors beat Hubli Tigers by 5 wickets in Eliminator

ಸದ್ಯ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ ಟ್ವೆಂಟಿ ಲೀಗ್‌ನಲ್ಲಿ ಇಂದು ( ಆಗಸ್ಟ್ 23 ) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಸೋಲಿಸಿದ ಮೈಸೂರು ವಾರಿಯರ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 7 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿದ್ದು ಎದುರಾಗಳಿ ಮೈಸೂರು ವಾರಿಯರ್ಸ್ ತಂಡಕ್ಕೆ ಗೆಲ್ಲಲು 165 ರನ್‌ಗಳ ಗುರಿಯನ್ನು ನೀಡಿತ್ತು.

ಈ ಗುರಿಯನ್ನು ಬೆನ್ನತ್ತಿದ ಮೈಸೂರು ವಾರಿಯರ್ಸ್ ನಿಹಾಲ್ ಉಲ್ಲಾಳ್ ಅವರ ಅದ್ಭುತ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿ 5 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ. ಈ ಮೂಲಕ ಮೈಸೂರು ವಾರಿಯರ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶಿಸಿದೆ ಹಾಗೂ ಸೋತ ಹುಬ್ಬಳ್ಳಿ ಟೈಗರ್ಸ್ ಟೂರ್ನಿಯಿಂದ ಹೊರಬಿದ್ದಿದೆ.

ಹುಬ್ಬಳ್ಳಿ ಟೈಗರ್ಸ್ ಇನ್ನಿಂಗ್ಸ್

ಹುಬ್ಬಳ್ಳಿ ಟೈಗರ್ಸ್ ಇನ್ನಿಂಗ್ಸ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ಪರ ಆರಂಭಿಕ ಆಟಗಾರರಾಗಿ ಲವ್‌ನೀತ್ ಸಿಸೋಡಿಯಾ 33 ರನ್ ಕಲೆಹಾಕಿದರೆ, ಮೊಹಮ್ಮದ್ ತಾಹಾ 27 ರನ್ ಕಲೆಹಾಕಿದರು. ಇನ್ನುಳಿದಂತೆ ಬಿ ಯು ಶಿವಕುಮಾರ್ 6 ರನ್, ಲಿಯಾನ್ ಖಾನ್ 7 ರನ್, ಸ್ವಪ್ನಿಲ್ ಎಳವೆ ಅಜೇಯ 30 ರನ್, ತುಷಾರ್ ಸಿಂಗ್ 1 ರನ್, ನವೀನ್ ಎಂಜಿ 32 ರನ್ ಗಳಿಸಿದರು. ಮತ್ತು ಅಭಿಮನ್ಯು ಮಿಥುನ್ 19 ರನ್ ಹಾಗೂ ಶರತ್ ಗೌಡ್ ಅಜೇಯ 1 ರನ್ ಕಲೆಹಾಕಿದರು. ಹೀಗೆ ಲವ್‌ನೀತ್ ಸಿಸೋಡಿಯಾ, ಮೊಹಮ್ಮದ್ ತಾಹಾ, ಸ್ವಪ್ನಿಲ್ ಯೆಳವೆ ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಕೂಡ ಹೇಳಿಕೊಳ್ಳುವಂತ ಬ್ಯಾಟಿಂಗ್ ಮಾಡಲಿಲ್ಲ. ಪರಿಣಾಮವಾಗಿ ಹುಬ್ಬಳ್ಳಿ ಟೈಗರ್ಸ್ ಬೃಹತ್ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಲಿಲ್ಲ.

ಮೈಸೂರು ವಾರಿಯರ್ಸ್ ಪರ ಶ್ರೇಯಸ್ ಐಯ್ಯರ್ ಮೂರು ವಿಕೆಟ್‌ಗಳನ್ನು ಪಡೆದುಕೊಳ್ಳುವುದರ ಮೂಲಕ ಉತ್ತಮ ಬೌಲಿಂಗ್ ಮಾಡಿದರು. ಇನ್ನುಳಿದಂತೆ ಪ್ರತೀಕ್ ಜೈನ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ ಹಾಗೂ ಆದಿತ್ಯ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು.

ಮೈಸೂರು ವಾರಿಯರ್ಸ್ ಇನ್ನಿಂಗ್ಸ್

ಮೈಸೂರು ವಾರಿಯರ್ಸ್ ಇನ್ನಿಂಗ್ಸ್

ಹುಬ್ಬಳ್ಳಿ ಟೈಗರ್ಸ್ ನೀಡಿದ ಗುರಿಯನ್ನು ಬೆನ್ನತ್ತಿದ ಮೈಸೂರು ವಾರಿಯರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕರುಣ್ ನಾಯರ್ 23 ರನ್ ಗಳಿಸಿದರೆ, ನಿಹಾಲ್ ಉಲ್ಲಾಳ್ ಅಜೇಯ 77 ರನ್ ಕಲೆಹಾಕಿ ಈ ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇನ್ನುಳಿದಂತೆ ಪವನ್ ದೇಶಪಾಂಡೆ 24 ರನ್, ಶ್ರೇಯಸ್ ಗೋಪಾಲ್ 32 ರನ್, ಶುಭಾಂಗ್ ಹೆಗ್ಡೆ ಡಕ್ ಔಟ್, ಶಿವರಾಜ್ ಎಸ್ ಡಕ್ ಔಟ್ ಹಾಗೂ ನಾಗ ಭರತ್ ಅಜೇಯ 6 ರನ್ ಕಲೆಹಾಕಿದರು. ನಿಹಾಲ್ ಉಲ್ಲಾಳ್ ಅಂತಿಮ ಹಂತದವರೆಗೂ ಬ್ಯಾಟಿಂಗ್ ನಡೆಸಿ ಉತ್ತಮ ಪ್ರದರ್ಶನ ನೀಡಿದರೆ, ಬೌಲಿಂಗ್‌ನಲ್ಲಿ ಮೂರು ವಿಕೆಟ್ ಹಾಗೂ ಬ್ಯಾಟಿಂಗ್‌ನಲ್ಲೂ ಮಿಂಚಿದ ಶ್ರೇಯಸ್ ಗೋಪಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಹುಬ್ಬಳ್ಳಿ ಟೈಗರ್ಸ್ ಪರ ಆಕಾಶ್ ದೊಡ್ಡಮನಿ ನಾಲ್ಕು ವಿಕೆಟ್ ಪಡೆದರೆ, ನವೀನ್ ಎಂಜಿ ಒಂದು ವಿಕೆಟ್ ಪಡೆದರು.

ಕ್ವಾಲಿಫೈಯರ್ 2ನಲ್ಲಿ ಗೆದ್ದರೆ ಫೈನಲ್

ಕ್ವಾಲಿಫೈಯರ್ 2ನಲ್ಲಿ ಗೆದ್ದರೆ ಫೈನಲ್

ಇನ್ನು ಈ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ಮೈಸೂರು ವಾರಿಯರ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಒಂದನೇ ಕ್ವಾಲಿಫೈಯರ್ ಗೆದ್ದು ಬರಲಿರುವ ತಂಡದ ಜತೆ ಸೆಣಸಾಡಲಿದ್ದು ಆ ಪಂದ್ಯದಲ್ಲಿಯೂ ಗೆದ್ದರೆ ಫೈನಲ್ ಪಂದ್ಯಕ್ಕೆ ಲಗ್ಗೆ ಇಡಲಿದೆ. ಇನ್ನು ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಗೆಲ್ಲುವ ತಂಡ ನೇರವಾಗಿ ಫೈನಲ್ ತಲುಪಿದರೆ, ಸೋಲುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಜತೆವ ಫೈನಲ್ ಪ್ರವೇಶಕ್ಕಾಗಿ ಹೋರಾಡಲಿದೆ.

Story first published: Tuesday, August 23, 2022, 19:28 [IST]
Other articles published on Aug 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+