ಮುದ್ದು ಮುದ್ದು ಧೋನಿ ಮಗಳ ಈ ವಿಡಿಯೋ ನೋಡಿ

ಮಹೇಂದ್ರ ಸಿಂಗ್ ಧೋನಿ, ಮುಂಚೆಗಿಂತಲೂ ಸಾಮಾಜಿಕ ಜಾಲತಾಣವನ್ನು ಈಗ ಹೆಚ್ಚು ಬಳಸುತ್ತಿದ್ದಾರೆ. ಆದರೆ ಅವುಗಳಲ್ಲಿ ಬಹುತೇಕ ಚಿತ್ರಗಳು ವಿಡಿಯೋಗಳಲ್ಲಿ ಮಗಳು ಜೀವಾಳೆ ತುಂಬಿರುತ್ತಾಳೆ.
ಇತ್ತೀಚೆಗೆ ಮಹೇಂದ್ರ ಸಿಂಗ್ ಧೋನಿ ಮತ್ತೆ ತಮ್ಮ ಮಗಳು ಜೀವಾಳ ವಿಡಿಯೋ ಒಂದನ್ನು ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ನೋಡಿದವರ ಮನಸ್ಸು ತುಂಬಿ ಬರುವಂತಿದೆ ವಿಡಿಯೋ.
ಮಹೇಂದ್ರ ಸಿಂಗ್ ಧೋನಿ ನಾಯಕರಾಗಿರುವ ಚೆನ್ನೈ ತಂಡದ ಪಂದ್ಯ ನಡೆಯಬೇಕಾದರೆ ಮಗಳು ಜೀವಾ ಮತ್ತು ಮಡದಿ ಸಾಕ್ಷಿ ಕ್ರೀಡಾಂಗಣದಲ್ಲಿ ತಪ್ಪದೇ ಹಾಜರಿರುತ್ತಾರೆ. ಮೊನ್ನೆ ನಡೆದ ಪಂದ್ಯದಲ್ಲೂ ತಾಯಿ, ಮಗಳು ಕ್ರೀಡಾಂಗಣದಲ್ಲಿ ಹಾಜರಿದ್ದರು. ಅಪ್ಪ ಬ್ಯಾಟಿಂಗ್ ಮಾಡಬೇಕಾದರೆ ಮಗಳು ಜೀವಾಗೆ ಇದ್ದಕ್ಕಿದ್ದಂತೆ ಅಪ್ಪನನ್ನು ತಬ್ಬಿಕೊಳ್ಳುವ ಬಯಕೆ ಆಗಿದೆ.
ಧೋನಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಜೀವಾ 'ಅಪ್ಪನನ್ನು ಕರೆದು ಬಾ ಎಂದು ತಾಯಿಯ ಬಳಿ ಕೇಳುತ್ತಿದ್ದಾಳೆ'. ಪುಟ್ಟ ಹುಡುಗಿ ಜೀವಾ ಮುದ್ದು ಮುದ್ದಾಗಿ ಅಪ್ಪನನ್ನು ತಬ್ಬಿಕೊಳ್ಳುವ ಮನಸ್ಸಾಗಿದೆ ಎಂದು ಕೇಳುತ್ತಿರುವುದು ಎಂತವರಿಗೂ ಮುದ್ದು ಉಕ್ಕಿಸುವಂತಿದೆ.
ಚೆನ್ನೈ ತಂಡದ ಜರ್ಸಿ ತೊಟ್ಟು ಪಂದ್ಯ ನೋಡುತ್ತಾ ಕೂತವರೊಬ್ಬರನ್ನು ನೀವು ಈ ಅಂಗಿ ತೊಟ್ಟಿದ್ದೀರಲ್ಲಾ ನೀವು ಅಂಗಳಕ್ಕೆ ಹೋಗಬಹುದು, ಹೋಗಿ ನನ್ನ ಅಪ್ಪನನ್ನು ಕರೆದುಕೊಂಡು ಬನ್ನಿ ಎಂದು ಜೀವಾ ನಗುತ್ತಲೇ ದುಂಬಾಲು ಬಿದ್ದಿರುವುದು ಪುಟ್ಟ ಮಗುವಿನ ಮುಗ್ದತೆ ಮನಸ್ಸು ತುಂಬಿಸುತ್ತದೆ.
ಇನ್ಸ್ಟಾಗ್ರಾಂನಲ್ಲಿ ಈಗಾಗಲೇ ಈ ವಿಡಿಯೋವನ್ನು 30 ಲಕ್ಷ ಜನ ವೀಕ್ಷಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications