Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಕಡಿಮೆ ಹಣಕ್ಕೆ ಸೇಲಾದ ಆಟಗಾರರಿವರು

Main players sold for less money in IPL 2018 auction

ಬೆಂಗಳೂರು, ಜನವರಿ 27: ಐಪಿಎಲ್ 2018 ರ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕಡಿಮೆ ದರಕ್ಕೆ ಸೇಲಾದ ಆಟಗಾರರ ಸಂಖ್ಯೆಯೂ ಕಡಿಮೆ ಏನಿಲ್ಲ. ಹಿರಿಯ ಆಟಗಾರರೇ ತಮ್ಮ ಮೂಲ ಬೆಲೆ ಅಷ್ಟಕ್ಕೆ ಮಾರಾಟವಾಗಿದ್ದಾರೆ.

ಅತಿ ಕಡಿಮೆ ಮೊತ್ತಕ್ಕೆ ಹರಾಜಾದವರಲ್ಲಿ ಸ್ಟುವರ್ಟ್ ಬಿನ್ನಿ ಮೊದಲಿಗರು ಅವರು ತಮ್ಮ ಮೂಲ ಬೆಲೆಯಾದ 50 ಲಕ್ಷ ರೂಪಾಯಿಗೆ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಮಾರಾಟವಾಗಿದ್ದಾರೆ. ಮೂಲ ಬೆಲೆ ಬಿಟ್ಟು ಕನಿಷ್ಟ ಹರಾಜು ಕೂಗಾದ 20 ಲಕ್ಷವನ್ನೂ ಅವರು ತಲುಪಲಿಲ್ಲ.

ಇಂಗ್ಲೆಂಡ್‌ನ ಮೋಯಿನ್ ಅಲಿ ಅವರು ತಮ್ಮ ಮೂಲ ಬೆಲೆಗಿಂತ 20 ಲಕ್ಷವಷ್ಟೆ ಹೆಚ್ಚಿಗೆ ಮಾರಾಟವಾಗಿದ್ದಾರೆ. ಮೋಯಿನ್ ಅಲಿ ಅವರ ಮೂಲ ಬೆಲೆ 1.50 ಕೋಟಿ ರೂಪಾಯಿ ಇತ್ತು. ಕೇವಲ ಒಂದು ಹರಾಜು ಕೂಗಿಗೆ ಎಲ್ಲ ತಂಡವರು ಹರಾಜು ಕೈಬಿಟ್ಟ ಕಾರಣ 1.70 ಲಕ್ಷಕ್ಕೆ ಅವರು ಬೆಂಗಳೂರು ತಂಡ ಸೇರಿಕೊಂಡರು.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ಸರ್ರೆ ಹೀರೊಗೆ ಭಾರತದಲ್ಲಿ ಬೆಲೆ ಇಲ್ಲ

ಸರ್ರೆ ಹೀರೊಗೆ ಭಾರತದಲ್ಲಿ ಬೆಲೆ ಇಲ್ಲ

ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅವರು ಸಹ ತಮ್ಮ ಮೂಲ ಬೆಲೆಗೆ ಹರಾಜಾಗಿದ್ದಾರೆ. ಸರ್ರೆ ಕ್ರಿಕೆಟ್‌ ಪರವೂ ಬ್ಯಾಟ್ ಬೀಸುವ ಇವರ ಮೂಲ ಬೆಲೆ 1.50 ಕೋಟಿ ಇತ್ತು. ಅಷ್ಟೆ ಬೆಲೆಗೆ ಇವರು ದೆಹಲಿಗೆ ಮಾರಾಟವಾಗಿದ್ದಾರೆ. ದೆಹಲಿ ಬಿಟ್ಟು ಇನ್ನಾರೂ ಇವರ ಪರ ಹರಾಜು ಕೂಗಲಿಲ್ಲವಾದ್ದರಿಂದ ಜೇಸನ್ ರಾಯ್ ಅವರು 1.50 ಕೋಟಿಗೆ ದೆಹಲಿ ತಂಡ ಸೇರಿದರು.

ಕಳೆದ ಬಾರಿಯ ಹೀರೊ ಈ ಬಾರಿ ಜೀರೊ

ಕಳೆದ ಬಾರಿಯ ಹೀರೊ ಈ ಬಾರಿ ಜೀರೊ

ಕಳೆದ ಐಪಿಎಲ್ ಹರಾಜಿನಲ್ಲಿ 16 ಕೋಟಿಗೆ ಹರಾಜಾಗಿ ಅತ್ಯಂತ ಹೆಚ್ಚಿನ ಹಣಕ್ಕೆ ಹರಾಜಾಗಿದ್ದ ಯುವರಾಜ್ ಸಿಂಗ್ ಅವರು ಈ ಬಾರಿ ತಮ್ಮ ಮೂಲ ಬೆಲೆಗಿಂತ ಮೇಲೇಳಲೇ ಇಲ್ಲ. ಯುವರಾಜ್ ಸಿಂಗ್ ಅವರ ಮೂಲ ಬೆಲೆ ಇದ್ದದ್ದು 2 ಕೋಟಿ ಅಷ್ಟೇ ಹಣಕ್ಕೆ ಅವರು ಪಂಜಾಬ್‌ ತಂಡಕ್ಕೆ ಸೇರಿಕೊಂಡರು. ಯುವರಾಜ್ ಸಿಂಗ್‌ ಪರ ಪಂಜಾಬ್ ಹರಾಜು ಪ್ರಾರಂಭ ಮಾಡಿತು ನಂತರ ಯಾರೂ ಹರಾಜು ಕೂಗಲು ಆಸಕ್ತಿ ತೋರಲಿಲ್ಲ.

ಐಪಿಎಲ್ ವಿಜೇತ ನಾಯಕ ನಿರ್ಲಕ್ಷ

ಐಪಿಎಲ್ ವಿಜೇತ ನಾಯಕ ನಿರ್ಲಕ್ಷ

ಕೊಲ್ಕತ್ತ ತಂಡಕ್ಕೆ ಐಪಿಎಲ್ ಗೆದ್ದು ಕೊಟ್ಟಿದ್ದ ಗೌತಮ್ ಗಂಭೀರ್ ಅವರಿಗೆ ಈ ಬಾರಿ ಬೆಲೆ ಇಲ್ಲದಂತಾಗಿದೆ. ಅವರು ತಮ್ಮ ಮೂಲ ಬೆಲೆಗಿಂತ ಕೇವಲ 80 ಲಕ್ಷ ಹೆಚ್ಚಿನ ಬೆಲೆಗೆ ಹರಾಜಾಗಿದ್ದಾರೆ. ಗೌತಮ್ ಅವರ ಮೂಲ ಬೆಲೆ 2 ಕೋಟಿ ಇತ್ತು ಈಗ ಅವರನ್ನು ದೆಹಲಿ ತಂಡ 2.80 ಕೋಟಿಗೆ ಖರೀದಿಸಿದೆ.

ಟರ್ಬನೇಟರ್‌ ಗೆ ಬೆಲೆ ಇಲ್ಲ

ಟರ್ಬನೇಟರ್‌ ಗೆ ಬೆಲೆ ಇಲ್ಲ

ಹರ್ಭಜನ್ ಸಿಂಗ್ ಅವರು ತಮ್ಮ ಮೂಲ ಬೆಲೆಗೆ ಹರಾಜಾಗಿದ್ದಾರೆ. ಭಾರತ ತಂಡದ ಪ್ರಮುಖ ಸ್ಪಿನ್ನರ್ ಹರ್ಭಜನ್ ಅವರ ಮೂಲ ಬೆಲೆ 2 ಕೋಟಿ ಇತ್ತು, ಚೆನ್ನೈ ಹರಾಜು ಪ್ರಾರಂಭ ಮಾಡಿತು, ಆ ನಂತರ ಯಾವ ತಂಡವೂ ಹರ್ಭಜನ್ ಅವರನ್ನು ಕೊಳ್ಳಲು ಆಸಕ್ತಿ ತೋರಲಿಲ್ಲವಾದ್ದರಿಂದ ಹರ್ಭಜನ್‌ ಸಿಂಗ್ ಅವರು ಚೆನ್ನೈ ಪಾಲಾದರು.

ದಕ್ಷಿಣ ಆಫ್ರಿಕಾ ದಾಂಡಿಗನಿಗೆ ಇಷ್ಟೇ ಬೆಲೆ

ದಕ್ಷಿಣ ಆಫ್ರಿಕಾ ದಾಂಡಿಗನಿಗೆ ಇಷ್ಟೇ ಬೆಲೆ

ದಕ್ಷಿಣ ಆಫ್ರಿಕದ ಪಾಫ್ ಡುಫ್ಲಿಸಿಸ್ ಅವರು ತಮ್ಮ ಮೂಲ ಬೆಲೆಗಿಂತ ಕೇವಲ 10 ಲಕ್ಷ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದಾರೆ. ಅವರ ಮೂಲ ಬೆಲೆ 1.50 ಕೋಟಿ ರೂಪಾಯಿ ಇತ್ತು. ಚೆನ್ನೈ ತಂಡ ಕೇವಲ 10 ಲಕ್ಷ ಹೆಚ್ಚಿಗೆ ಹರಾಜು ಕೂಗಿ ಅವರನ್ನು ತಮ್ಮ ತಂಡದ ಸದಸ್ಯರನ್ನಾಗಿಸಿಕೊಂಡಿತು.

Story first published: Saturday, January 27, 2018, 18:23 [IST]
Other articles published on Jan 27, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+