ಐಪಿಎಲ್: ತಂಡ ಬಿಟ್ಟು ಹಾರಿದ ಪ್ರಮುಖರಿವರು

ಬೆಂಗಳೂರು, ಜನವರಿ 27: ಐಪಿಎಲ್ ಟೂರ್ನಿ ಎಂದರೆ ಹಾಗೆಯೇ ಇಲ್ಲಿ ಯಾರೂ ನಮ್ಮ ಖಾಯಂ ಆಟಗಾರರು ಎನ್ನುವಂತಿಲ್ಲ. ಈ ಬಾರಿ ಒಂದು ತಂಡಕ್ಕೆ ಆಡಿದವರು ಮುಂದಿನ ಬಾರಿ ಮತ್ತೊಂದು ತಂಡದ ಜರ್ಸಿ ತೊಟ್ಟಿರುತ್ತಾರೆ.
ಐಪಿಎಲ್ 2018 ರ ಆಟಗಾರರ ಹರಾಜಿನಲ್ಲೂ ಹೀಗೆ ಆಗಿದೆ ಹಲವು ಜನ ಪ್ರಮುಖ ತಂಡಗಳ ಪ್ರಮುಖ ಆಟಗಾರರು ಇಷ್ಟು ಸೀಸನ್ ತಾವು ಆಡಿದ ತಂಡ ಬಿಟ್ಟು ಬೇರೊಂದಕ್ಕೆ ಹೋಗಿದ್ದಾರೆ.
ರವಿಚಂದ್ರನ್ ಅಶ್ವಿನ್, ಕೊಲ್ಕತ್ತಾ ನೈಟ್ ರೈಡರ್ಸ್, ಶೇನ್ ವ್ಯಾಟ್ಸನ್ ಸೇರಿದಂತೆ ಹಲವು ಪ್ರಮುಖ ಆಟಗಾರರು ತಾವು ಬಹಳ ಕಾಲದಿಂದ ಗುರುತಿಸಿಕೊಂಡಿದ್ದ ತಂಡವನ್ನು ಅನಿವಾರ್ಯವಾಗಿ ಬಿಟ್ಟು ಈಗ ಬೇರೆ ತಂಡದ ಸಮವಸ್ತ್ರ ಧರಿಸಿ ಹಿಂದೆ ತಾವಿದ್ದ ತಂಡದ ವಿರುದ್ಧವೇ ತೊಡೆ ತಟ್ಟಬೇಕಿದೆ.
ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ಚೆನ್ನೈ ಬಿಟ್ಟು ಪಂಜಾಬ್
ಬಹಳಾ ಸೀಸನ್‌ಗಳಿಂದ ಚೆನ್ನೈ ಪರವಾಗಿ ಆಡುತ್ತಿದ್ದ ರವಿಚಂದ್ರನ್ ಅಶ್ವಿನ್ ಅವರು ಈ ಬಾರಿ ಪಂಜಾಬ್ ಪರ ಆಡುತ್ತಿದ್ದಾರೆ. ಹರಾಜು ಪ್ರಕ್ರಿಯೆ ಆರಂಭವಾದ ಮೊದಲ್ಲೇ ಪ್ರೀತಿ ಅವರು ರವಿಚಂದ್ರನ್ ಅವರನ್ನು ತಮ್ಮ ತಂಡಕ್ಕೇ ತೆಗೆದುಕೊಳ್ಳಬೇಕೆಂಬ ಹಠದಿಂದ ಹರಾಜು ಕೂಗಿ ಕೊನೆಗೆ ರವಿಚಂದ್ರನ್ ಅವರನ್ನು ತಮ್ಮ ಸಮೀಪ ಪ್ರತಿಸ್ಪರ್ಧಿ ಚೆನ್ನೈ ನಿಂದ ಕಸಿದುಕೊಂಡರು.

ಕೊಲ್ಕತ್ತ ಬಿಟ್ಟು ದೆಹಲಿಗೆ
ಮೊದಲಿಗೆ ದೆಹಲಿ ಇಂದಲೇ ತಮ್ಮ ಐಪಿಎಲ್ ಕರಿಯರ್ ಪ್ರಾರಂಭಿಸಿದ್ದ ಗೌತಮ್ ಗಂಭೀರ್ ಅವರು ಈಗ ಮತ್ತೆ ದೆಹಲಿಗೆ ಬಂದಿದ್ದಾರೆ. ಕೊಲ್ಕತ್ತ ತಂಡದ ನಾಯಕರಾಗಿ ಐಪಿಎಲ್ ಟೂರ್ನಿ ಗೆದ್ದುಕೊಟ್ಟ ಶ್ರೇಯವಿರುವ ಗಂಭೀರ್ ಅವರು ಈ ಬಾರಿ ದೆಹಲಿ ಪರವಾಗಿ ಆಡಲಿದ್ದಾರೆ. ದೆಹಲಿ ತಂಡವು ಅವರನ್ನು ಕೇವಲ 2.8 ಕೋಟಿಗೆ ಕೊಂಡುಕೊಂಡಿದೆ. ಸ್ವತಃ ದೆಹಲಿಯವರೇ ಆಗಿರುವ ಗೌತಮ್ 'ನನ್ನ ತವರು ತಂಡದ ಪರವಾಗಿ ಆಡುತ್ತಿರುವುದು ಸಂತೋಶ ತಂದಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಹಳದಿ ಉಡುಪು ಧರಿಸಲಿರುವ ವ್ಯಾಟ್ಸನ್
ರಾಜಸ್ಥಾನ ರಾಯಲ್ಸ್ ಮತ್ತು ಬೆಂಗಳೂರು ತಂಡಗಳ ಪರ ಆಡಿದ್ದ ಆಸ್ಟ್ರೇಲಿಯಾದ ಆಲ್‌ರೌಂಡ್ ಆಟಗಾರ ಶೇನ್ ವ್ಯಾಟ್ಸನ್ ಮೊದಲ ಬಾರಿಗೆ ಚೆನ್ನೈ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಬೆಂಗಳೂರು ತಂಡದ ಪರ ನಾಯಕರೂ ಆಗಿದ್ದ ವ್ಯಾಟ್ಸನ್ ಕಳೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದರು. ಅವರನ್ನು 4 ಕೋಟಿಗೆ ಚೆನ್ನೈ ಖರೀದಿಸಿದೆ.

ಪಂಜಾಬ್‌ಗೆ ಮರಳಿದ ಯುವರಾಜ್
ಮೊದಲಿಗೆ ಪಂಜಾಬ್ ಪರ ಆಡಿ ಆ ನಂತರ ಪುಣೆ, ಹೈದರಾಬಾದ್, ಬೆಂಗಳೂರು ತಂಡಗಳಲ್ಲಿ ಆಡಿದ ಯುವರಾಜ್ ಸಿಂಗ್ ಈಗ ಮತ್ತೆ ಪಂಜಾಬ್ ಮಡಿಲಿಗೆ ಬಿದ್ದಿದ್ದಾರೆ. ಕಳೆದ ಬಾರಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದ ಯುವರಾಜ್ ಸಿಂಗ್ ಈ ಬಾರಿ 2 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ.

ಮುಂಬೈ ಬಿಟ್ಟು ಚೆನ್ನೈ
ಮುಂಬೈ ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಅವರು ಮೊದಲ ಬಾರಿಗೆ ಚೆನ್ನೈ ತಂಡಕ್ಕೆ ಸೇರಿಕೊಂಡಿದ್ದಾರೆ. ಚೆನ್ನೈ ತಂಡದಿಂದ ರವಿಚಂದ್ರನ್ ಅಶ್ವಿನ್ ಸ್ಥಾನ ತೆರವಾದ ಕಾರಣ ಆ ಸ್ಥಾನಕ್ಕೆ ಹರ್ಭಜನ್ ಅವರನನ್ನು ಸೇರಿಸಿಕೊಳ್ಳಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications